ಕನ್ನಡ ಸಾಹಿತ್ಯಕ್ಕೆ ತಂತ್ರಜ್ಞಾನ ವಿಸ್ತರಿಸಿರುವ ಸಾಧ್ಯತೆಗಳು: ಒಂದು ಅವಲೋಕನ
Main Article Content
Abstract
ವಿಶ್ವದಾದ್ಯಂತ ಇಂದು ಬದಲಾವಣೆಗೆ ಒಳಪಡುತ್ತಿರುವ ಮಾಹಿತಿ ಲೋಕ, ಅಪಾರವಾದ ಪ್ರಗತಿಯತ್ತ ಮುನ್ನುಗ್ಗುತ್ತಿರುವ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳನ್ನು ಗಣನೀಯವಾಗಿ ಪ್ರಭಾವಿಸುತ್ತಿದೆ. ಈ ಆಧುನಿಕ ಪ್ರಜ್ಞೆಯಿಂದ ಕನ್ನಡ ಸಾಹಿತ್ಯವೂ ಹಿಂದೆ ಉಳಿಯಲು ಸಾಧ್ಯವಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಕನ್ನಡ ಸಾಹಿತ್ಯದ ಅಸ್ತಿತ್ವ, ಸ್ಥಾನಮಾನಗಳೇನು ಎಂಬ ವಿವೇಚನೆ ಪ್ರತಿಯೊಬ್ಬ ಕನ್ನಡಿಗನದ್ದೂ ಆಗಬೇಕಿದೆ. ಡಿಜಿಟಲ್ ಯುಗದಲ್ಲಿ ‘ಕನ್ನಡ ಸಾಹಿತ್ಯʼದ ಅಸ್ಮಿತೆ, ಅನನ್ಯತೆಗಳನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವೂ ಹೌದು. ಕನ್ನಡ ಸಾಹಿತ್ಯದಲ್ಲಿ ತಂತ್ರಜ್ಞಾನದ ಬಳಕೆಗೆ ತೊಡಕುಗಳಿರುವಂತೆಯೇ, ವಿಸ್ತರಿಸಲ್ಪಟ್ಟಿರುವ ಅವಕಾಶಗಳನ್ನು ನಾವು ಅಲ್ಲಗಳೆಯುವಂತಿಲ್ಲ. ಡಿಜಿಟಲ್ ಸಹಾಯಕರುಗಳ ಮೂಲಕ ಕನ್ನಡ ಸಾಹಿತ್ಯ, ಕೋಟ್ಯಾಂತರ ಜನರನ್ನು ತಲುಪಲು ಇಂದು ಸಾಧ್ಯವಾಗಿದೆ. ಆಡಿಯೋ ಪುಸ್ತಕ, ಇ-ಪುಸ್ತಕ, ಪಾಡ್‌ಕಾಸ್ಟ್, ಬ್ಲಾಗ್‌ಗಳ ಮೂಲಕ ಕನ್ನಡ ಸಾಹಿತ್ಯ ಪ್ರಸರಣ ಮುಂದುವರೆಯುತ್ತಿದೆ. ಸಾವಿರಾರು ವರ್ಷಗಳಿಂದ ಅನೂಚಾನವಾಗಿ ಬಂದಿರುವ ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನದ ಸಂಬಂಧ ಯಾವ ಬಗೆಯದ್ದು, ಕನ್ನಡ ಸಾಹಿತ್ಯಕ್ಕೆ ತಂತ್ರಜ್ಞಾನ ಸೃಷ್ಟಿಸಿರುವ ಸಾಧ್ಯತೆಗಳೇನು? ಎಂಬುದನ್ನು ಅರಿಯುವ ಪ್ರಯತ್ನವೇ ಈ ಸಂಶೋಧನಾ ಲೇಖನ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸಾಂಬಮೂರ್ತಿ (ಸಂ), (2009), ಭಾಷಾ ತಂತ್ರಜ್ಞಾನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಚಂದ್ರಶೇಖರ ಕಂಬಾರ, (2004), ದೇಶೀಯ ಚಿಂತನ, ಬೆಂಗಳೂರು: ಅಂಕಿತ ಪುಸ್ತಕ.
ಶ್ರೀನಿಧಿ ಟಿ.ಜಿ., (2007), ಇ-ಜ್ಞಾನ (e-Jnana), ಬೆಂಗಳೂರು: www.ejnana.com.