ಮಂಟೇಸ್ವಾಮಿ ಮತ್ತು ಮಹದೇಶ್ವರರ ಕಾವ್ಯ ಪರಂಪರೆ
Main Article Content
Abstract
ದಕ್ಷಿಣ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಾಯಕರಾದ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರರ ಜನಪದ ಕಾವ್ಯ ಪರಂಪರೆಗಳು ಅತ್ಯಂತ ಶ್ರೀಮಂತವಾಗಿವೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಿಂದ ದಕ್ಷಿಣದ ಕಡೆಗೆ ಬಂದ ಮಂಟೇಸ್ವಾಮಿಯ ಪವಾಡಗಳು ಮತ್ತು ತತ್ವಪ್ರಚಾರವನ್ನು ನೀಲಗಾರರು ಕಾವ್ಯರೂಪದಲ್ಲಿ ಹಾಡಿಕೊಂಡು ಬಂದಿದ್ದಾರೆ. ಅದೇ ರೀತಿ, ಕೊಳ್ಳೇಗಾಲ ಭಾಗದ ಏಳುಮಲೆಗಳಲ್ಲಿ ನೆಲೆಸಿದ ಮಹದೇಶ್ವರನ ಮಹಿಮೆಗಳನ್ನು 'ದೇವರ ಗುಡ್ಡರು' ಪರಂಪರಾಗತವಾಗಿ ಕಂಸಾಳೆಯ ನಾದದೊಂದಿಗೆ ಪ್ರಸ್ತುತಪಡಿಸುತ್ತಾರೆ. ಈ ಎರಡೂ ಮೌಖಿಕ ಮಹಾಕಾವ್ಯಗಳು ಕೇವಲ ಧಾರ್ಮಿಕ ಕಥನಗಳಾಗಿರದೆ, ಆಯಾ ಸಮುದಾಯಗಳ ನಂಬಿಕೆಗಳು, ಆಚರಣೆಗಳು, ವಿಧಿ-ನಿಷೇಧಗಳು ಹಾಗೂ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಬಗೆಯನ್ನು ಇಲ್ಲಿ ವಿವೇಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಮಂಟೇಸ್ವಾಮಿ ಕಾವ್ಯ, ಸಂ. ಜೀ.ಶಂ.ಪರಮಶಿವಯ್ಯ, ಪುಟ. 8.
ಕನ್ನಡ ವಿಷಯ ವಿಶ್ವಕೋಶ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ಪುಟ 1108.
ಆಧುನಿಕ ಕನ್ನಡ ಮಹಾಕಾವ್ಯಗಳು, ಡಾ|| ಶ್ರೀಧರ ಹೆಗಡೆ ಭದ್ರನ್, ಪುಟ. 83.
1836 ರಲ್ಲಿದ್ದ ಜೈನ ಕವಿ ದೇವಚಂದ್ರನು ಬರೆದ "ರಾಜಾವಳಿ ಕಥೆ"ಯು ಎರಡನೆಯದು.
1932 ರಲ್ಲಿ ಘ.ಗು. ಹಳಕಟ್ಟಿರವರು ಸಂಪಾದಿಸಿದ “ನಿರಂಜನ ವಂಶರತ್ನಾಕರ”.
ಮಲೆಯ ಮಾದೇಶ್ವರ, ಸಂ. ಡಾ|| ಪಿ. ಕೆ. ರಾಜಶೇಖರ್, ಮುನ್ನುಡಿ, ಪುಟ. 10-15.
ಹೊಸ ಮಡಿಯ ಮೇಲೆ ಚದುರಂಗ, ಡಾ॥ ಸಿ. ಎನ್. ರಾಮಚಂದ್ರನ್, ಪುಟ. 110.
ಮಾದೇಶ್ವರ, ವಿ. ಮಾದಯ್ಯ, ಪುಟ. 82.