ಕುಂಬಾರ ಗುಂಡಯ್ಯನ ಮಡದಿ ಶರಣೆ ಕೇತಲದೇವಿ

Main Article Content

ರವೀಂದ್ರ ಕುಂಬಾರ

Abstract

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಜನಾನುರಾಗಿಯಾದ ಕುಂಬಾರ ಗುಂಡಯ್ಯನ ಧರ್ಮಪತ್ನಿ ಶರಣೆ ಕೇತಲದೇವಿಯು ಬಸವ ಪೂರ್ವ ಯುಗದ ಒಬ್ಬ ಶ್ರೇಷ್ಠ ವಚನಕಾರ್ತಿ. ಭಾಲ್ಕಿ ಪರಿಸರದವಳಾದ ಈಕೆ, ತನ್ನ ಪತಿಯ ಕುಂಬಾರಿಕೆ ಕಾಯಕದಲ್ಲಿ ಹೆಗಲಿಗೆ ಹೆಗಲಾಗಿ ದುಡಿಯುತ್ತಾ, ಅತ್ಯಂತ ನಿಷ್ಠೆಯಿಂದ ಶರಣ ಜೀವನ ನಡೆಸಿದಳು. ಭೀಮಕವಿಯ ಬಸವಪುರಾಣ ಹಾಗೂ ಭುವನಕೋಶ ಗ್ರಂಥಗಳಲ್ಲಿ ಆಕೆಯ ಅಪಾರ ಶಿವಭಕ್ತಿ ಮತ್ತು ಕಠಿಣ ವ್ರತಾಚರಣೆಯ ಉಲ್ಲೇಖಗಳಿವೆ. ಆಕೆಗೆ ಸಂಬಂಧಿಸಿದಂತೆ ಕೇವಲ ಮೂರು ವಚನಗಳು ಮಾತ್ರ ಲಭ್ಯವಿದ್ದು, ಅವು 'ಕುಂಭೇಶ್ವರ' ಎಂಬ ಅಂಕಿತವನ್ನು ಹೊಂದಿವೆ. ಈ ವಚನಗಳು ಮಡಕೆ ತಯಾರಿಸುವ ಹದಮಣ್ಣಿನ ದೃಷ್ಟಾಂತದ ಮೂಲಕ ವ್ರತನಿಷ್ಠೆ, ಲಿಂಗಾಚರಣೆ ಮತ್ತು ಶುದ್ಧ ಜೀವನದ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ.

Article Details

Section

Research Articles

Author Biography

ರವೀಂದ್ರ ಕುಂಬಾರ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕನ್ನಡ ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಮಲಾಪುರ, ಕಲಬುರ್ಗಿ.

How to Cite

ರವೀಂದ್ರ ಕುಂಬಾರ. (2023). ಕುಂಬಾರ ಗುಂಡಯ್ಯನ ಮಡದಿ ಶರಣೆ ಕೇತಲದೇವಿ. ಅಕ್ಷರಸೂರ್ಯ (AKSHARASURYA), 2(08), 56 to 60. https://aksharasurya.com/index.php/latest/article/view/196

References

ಶಿವರಣೆಯ ವಚನ ಸಂಪುಟ-5, ಸಂ: ವೀರಣ್ಣ ರಾಜೂರ, ಕನ್ನಡ ಸಂಸ್ಕೃತಿ ಇಲಾಖೆ.

ಕುಂಬಾರ ಗುಂಡಯ್ಯ (ಒಂದು ಚಾರಿತ್ರಿಕ ಪರಿಶೀಲನ), ಪ್ರೊ. ಎಸ್. ಎಸ್. ಭೂಸರಡ್ಡಿ, ಪ್ರೊ. ಸುಲೋಚನ ಸಂ. ಮಟ್ಟ, 1991, ಶ್ರೀ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠ, ಮುಂಡರಗಿ.

ಬ್ರಹ್ಮಗುಂಡೇಶ್ವರ ಪುರಾಣ, ಕುಲಾಲ ಅಮರೇಶ್ವರ ಶಾಸ್ತ್ರಿಗಳು, ಬಳಗಾನೂರ, 1988.