ಶರಣ ಮಾದಾರ ಧೂಳಯ್ಯನ ಕಾಯಕದ ಪರಿಕಲ್ಪನೆ

Main Article Content

ಎಚ್. ಎ. ಭೋಗಲೆ

Abstract

ಹನ್ನೆರಡನೆಯ ಶತಮಾನದ ಶರಣರ ಕಾಯಕ ಕ್ರಾಂತಿಯು ಜನನ ಆಧಾರಿತ ವೃತ್ತಿ ಪದ್ಧತಿಯನ್ನು ತೊಡೆದುಹಾಕಿ, ಶ್ರಮದ ಪವಿತ್ರತೆಯನ್ನು ಸಾರಿತು. ಬಸವಣ್ಣನವರ ಸಮಕಾಲೀನನಾದ ಶರಣ ಮಾದಾರ ಧೂಳಯ್ಯನು ಸಮಾಜದ ಕೆಳಸ್ತರದಿಂದ ಬಂದು ಪಾದರಕ್ಷೆ ಹೊಲಿಯುವ ಕಾಯಕವನ್ನು ನಿಷ್ಠೆಯಿಂದ ಮಾಡಿದ ಶ್ರೇಷ್ಠ ಕಾಯಕಯೋಗಿ. ಆತನ ವಚನಗಳು ವೃತ್ತಿ ಮತ್ತು ಪ್ರವೃತ್ತಿಗಳನ್ನು ಮಾರ್ಮಿಕವಾಗಿ ಬೆಸೆಯುತ್ತವೆ. ಪಾದರಕ್ಷೆ ಹೊಲಿಯುವ ಕಾರ್ಯವನ್ನು ಪಾರಮಾರ್ಥಿಕ ಸಾಧನೆಗೆ ಸಮೀಕರಿಸಿದ ಆತ, ವಂಚನೆಯಿಲ್ಲದ ಶುದ್ಧ ಕಾಯಕದಿಂದ ಬಂದ ದ್ರವ್ಯವನ್ನು ದಾಸೋಹಕ್ಕೆ ಬಳಸಬೇಕೆಂದು ಪ್ರತಿಪಾದಿಸಿದನು. ಭಗವಂತನ ಸಾಕ್ಷಾತ್ಕಾರಕ್ಕಿಂತ ಕಾಯಕ ನಿಷ್ಠೆಗೆ ಹೆಚ್ಚಿನ ಮಹತ್ವ ನೀಡಿದ ಧೂಳಯ್ಯನ ಆದರ್ಶಗಳು ಹಾಗೂ ಆತನ ವಿಶಿಷ್ಟ ಕಾಯಕ ಸಿದ್ಧಾಂತದ ಮಹತ್ವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಎಚ್. ಎ. ಭೋಗಲೆ

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಿ.ಟಿ.ಇ. ಸಂಸ್ಥೆಯ ಶ್ರೀಮತಿ ಎ. ಎ. ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಚಿಕ್ಕೋಡಿ, ಬೆಳಗಾವಿ.

How to Cite

ಎಚ್. ಎ. ಭೋಗಲೆ. (2023). ಶರಣ ಮಾದಾರ ಧೂಳಯ್ಯನ ಕಾಯಕದ ಪರಿಕಲ್ಪನೆ. ಅಕ್ಷರಸೂರ್ಯ (AKSHARASURYA), 2(08), 51 to 55. https://aksharasurya.com/index.php/latest/article/view/195

References

ಸಂ. ಡಾ. ಬಿ.ಆರ್. ಹಿರೇಮಠ, ಸಂಕೀರ್ಣ ವಚನ ಸಂಪುಟ-3, 1993.

ಡಾ. ಮ.ನ. ಜವರಯ್ಯ, ದಲಿತ ವರ್ಗದ ಶರಣರು ಒಂದು ಅಧ್ಯಯನ, 1990.

ಡಾ. ಎಸ್.ಎಸ್. ಕೋತಿನ, ಮಾದಾರ ಧೂಳಯ್ಯನ ವಚನಗಳು, 1986.

ಡಾ. ಬಸವರಾಜ ಸಬರದ, ವಚನ ಚಳುವಳಿ, 1992.