ವಚನ ಪರಿಕಲ್ಪನೆ ಮತ್ತು ಸ್ವರೂಪ
Main Article Content
Abstract
ಹನ್ನೆರಡನೆಯ ಶತಮಾನದ ಶಿವಶರಣರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾನತೆಯ ಸಂದೇಶವನ್ನು ಸಾರಲು ವಚನ ಸಾಹಿತ್ಯವನ್ನು ಪ್ರಬಲ ಮಾಧ್ಯಮವಾಗಿ ಬಳಸಿದರು. 'ವಚನ' ಎಂಬ ಪದಕ್ಕೆ ಸಾಮಾನ್ಯ ಅರ್ಥದಲ್ಲಿ ಮಾತು ಅಥವಾ ಪ್ರತಿಜ್ಞೆ ಎಂಬ ಅರ್ಥವಿದ್ದರೂ, ಶರಣರ ವಚನಗಳು ವಿಶಿಷ್ಟವಾದ ಮುಕ್ತಕ ರಚನೆಗಳಾಗಿವೆ. ಇವು ಗದ್ಯವೂ ಅಲ್ಲದ, ಪದ್ಯವೂ ಅಲ್ಲದ, ಎರಡರ ನಡುವಿನ ವಿಶಿಷ್ಟ ಅಭಿವ್ಯಕ್ತಿ ಮಾರ್ಗವಾಗಿವೆ. ವಚನಗಳು ನಿರ್ದಿಷ್ಟ ಅಂಕಿತನಾಮಗಳನ್ನು ಹೊಂದಿದ್ದು, ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ರಚನೆಯಾಗಿವೆ. ಶರಣರ ಸ್ವರೂಪ, ವಚನಗಳ ಹುಟ್ಟು, ಅವುಗಳ ತಾತ್ವಿಕ ಹಿನ್ನೆಲೆ, ಹಾಗೂ ವಚನಕಾರರ ವೈಚಾರಿಕ ನಿಲುವುಗಳನ್ನು ವಿಶ್ಲೇಷಿಸುವ ಮೂಲಕ ವಚನ ಸಾಹಿತ್ಯದ ವಿಶಿಷ್ಟತೆಯನ್ನು ಈ ಅಧ್ಯಯನದಲ್ಲಿ ಕಟ್ಟಿಕೊಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಸವೇಶ್ವರರ ಸಮಕಾಲೀನ ಶರಣರು, ಬಸವ ಸಮಿತಿ, ಬೆಂಗಳೂರು, ಪು.ಸಂ. 279.
ಡಾ. ಪಿ. ವಿ. ನಾರಾಯಣ, ವಚನ ಸಮಗ್ರ, ಪು.ಸಂ. 183.
ವಚನಾನುಶೀಲನ, ಪು.ಸಂ. 18.
ವಚನ ಸಾಹಿತ್ಯ, ಪು.ಸಂ. 8.
ವಚನ ಧರ್ಮಸಾರ, ಪು.ಸಂ. 10.
ಅಲ್ಲಮಪ್ರಭುದೇವರ ವಚನ ಸಂಪುಟ, ವ.ಸಂ. 627.
ಪರಿಶೀಲನಾ, ಪು.ಸಂ. 42.