ವಡ್ಡಾರಾಧನೆ-ವ್ಯವಹಾರ ನಿರ್ವಹಣೆ
Main Article Content
Abstract
ಪ್ರಸ್ತುತ ಲೇಖನವು 10ನೇ ಶತಮಾನದ ಶಿವಕೋಟ್ಯಾಚಾರ್ಯ ವಿರಚಿತ ‘ವಡ್ಡಾರಾಧನೆ’ಯ ‘ಭದ್ರಬಾಹು ಭಟಾರರ ಕಥೆ’ಯ ಉಪಕಥೆಯೊಂದನ್ನು ಆಧುನಿಕ ವ್ಯವಹಾರ ನಿರ್ವಹಣೆಯ (Business Management) ದೃಷ್ಟಿಕೋನದಿಂದ ವಿಶ್ಲೇಷಿಸುತ್ತದೆ. ನಂದಿಮಿತ್ರ, ಕಾಷ್ಠಕೂಟ ಮತ್ತು ಜಯಘಂಟೆ ಎಂಬ ಪಾತ್ರಗಳ ಮೂಲಕ ಅಂದಿನ ಕಾಲದ ಶ್ರಮಿಕ ವರ್ಗದ ಶೋಷಣೆ, ಬಂಡವಾಳಶಾಹಿ ಮನೋಭಾವ ಮತ್ತು ಮಾರುಕಟ್ಟೆಯ ಏಕಸ್ವಾಮ್ಯದ ಒಳನೋಟಗಳನ್ನು ಲೇಖಕರು ಪರಿಚಯಿಸಿದ್ದಾರೆ. ಮಾನವನ ಮೂಲಭೂತ ಅವಶ್ಯಕತೆಗಳಾದ ಆಹಾರ ಮತ್ತು ಬಟ್ಟೆಯ ಪೂರೈಕೆಯು ಹೇಗೆ ಉದ್ಯಮಿಯ ಕಾರ್ಯತಂತ್ರಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಹಳೆಯ ಸಾಹಿತ್ಯವು ಕೇವಲ ಧಾರ್ಮಿಕ ಸಂದೇಶಕ್ಕೆ ಸೀಮಿತವಾಗದೆ, ಸಮಕಾಲೀನ ಜಾಗತಿಕ ಮಾರುಕಟ್ಟೆಯ ಕೌಶಲ್ಯ ಮತ್ತು ಸವಾಲುಗಳನ್ನು ಅರ್ಥೈಸಿಕೊಳ್ಳಲು ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ಲೇಖನವು ಮನವರಿಕೆ ಮಾಡಿಕೊಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿಕ್ಕಮಾದು ಎನ್.ಎನ್., (2015), ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳು, ಮೈಸೂರು: ರಚನ ಪ್ರಕಾಶನ.
ನಾಯಕ ಹಾ.ಮಾ. (ಪ್ರ.ಸಂ.), (2016), ಕನ್ನಡ ರತ್ನಕೋಶ (ಪರಿಷ್ಕೃತ), ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ನಾರಾಯಣ ಪಿ.ವಿ., (2017), ಹಳಗನ್ನಡ ಪದಸಂಪದ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.