ಆದಿಚುಂಚನಗಿರಿಯಲ್ಲಿ ನಾಥ ಸಂಪ್ರದಾಯದ ಮೂಲ ಬೇರುಗಳು

Main Article Content

ಪಲ್ಲವಿ ಎಸ್‌.ಎನ್.
ಶ್ವೇತಾರಾಣಿ ಹೆಚ್‌.

Abstract

ಪ್ರಸ್ತುತ ಸಂಶೋಧನಾ ಲೇಖನವು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಾಥ ಸಂಪ್ರದಾಯದ ಐತಿಹಾಸಿಕ ವಿಕಾಸ ಮತ್ತು ಅದರ ಮೂಲ ಬೇರುಗಳನ್ನು ಪರಿಶೋಧಿಸುತ್ತದೆ. ಬೌದ್ಧ ಧರ್ಮದ ವಜ್ರಯಾನ ಹಾಗೂ ಶೈವ ಕಾಪಾಲಿಕ ಪಂಥಗಳ ಸಮ್ಮಿಲನದಿಂದ ನಾಥ ಪಂಥವು ಹೇಗೆ ಉದಯಿಸಿತು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಕ್ರಿ.ಶ. 1029ರ ಶಾಸನ ಮತ್ತು ಕಾಲಭೈರವೇಶ್ವರನ ಸ್ಥಳಪುರಾಣಗಳ ಆಧಾರದೊಂದಿಗೆ, ಚುಂಚನಗಿರಿಯು ಪ್ರಾಚೀನ ಕಾಪಾಲಿಕ ಪೀಠದಿಂದ ನಾಥ ಪರಂಪರೆಯ ಪ್ರಮುಖ ಕೇಂದ್ರವಾಗಿ ಬದಲಾದ ಬಗೆಯನ್ನು ಲೇಖನ ವಿವರಿಸುತ್ತದೆ. ಶಿವ-ಶಕ್ತಿ ಸಿದ್ಧಾಂತ, ಕಾಯಸಿದ್ಧಿ ಮತ್ತು ಹಠಯೋಗದ ಮಹತ್ವವನ್ನು ವಿಶ್ಲೇಷಿಸುತ್ತಾ, ಈ ಪೀಠವು ಹೇಗೆ ಸಮಕಾಲೀನ ಸಮಾಜದಲ್ಲಿ ಅನ್ನ, ದಾಸೋಹ ಮತ್ತು ಶಿಕ್ಷಣದ ಮೂಲಕ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸುತ್ತಿದೆ ಎಂಬುದನ್ನು ಈ ಅಧ್ಯಯನವು ಪ್ರತಿಪಾದಿಸುತ್ತದೆ.

Article Details

Section

Research Articles

Author Biographies

ಪಲ್ಲವಿ ಎಸ್‌.ಎನ್.

ಸಂಶೋಧನಾ ವಿದ್ಯಾರ್ಥಿನಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ನಾಗಮಂಗಲ, ಮಂಡ್ಯ.

ಶ್ವೇತಾರಾಣಿ ಹೆಚ್‌.

ಸಹ ಪ್ರಾಧ್ಯಾಪಕಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ನಾಗಮಂಗಲ, ಮಂಡ್ಯ.

How to Cite

ಪಲ್ಲವಿ ಎಸ್‌.ಎನ್., & ಶ್ವೇತಾರಾಣಿ ಹೆಚ್‌. (2026). ಆದಿಚುಂಚನಗಿರಿಯಲ್ಲಿ ನಾಥ ಸಂಪ್ರದಾಯದ ಮೂಲ ಬೇರುಗಳು. ಅಕ್ಷರಸೂರ್ಯ (AKSHARASURYA), 11(05), 49 to 56. https://aksharasurya.com/index.php/latest/article/view/1933

References

ರಾಜೇಶ್ವರಿ ಗೌಡ ಕೆ., (2001), ಆದಿಚುಂಚನಗಿರಿ: ಒಂದು ಸಾಂಸ್ಕೃತಿಕ ಅಧ್ಯಯನ, ಮಂಡ್ಯ: ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಆದಿಚುಂಚನಗಿರಿ ಕ್ಷೇತ್ರ.

ಚಿದಾನಂದಮೂರ್ತಿ ಎಂ., (2024), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಕ್ರಿಸ್ತಶಕ 450-1150), ಬೆಂಗಳೂರು: ಸ್ವಪ್ನ ಬುಕ್ ಹೌಸ್.

ರಹಮತ್ ತರೀಕೆರೆ, (2006), ಕರ್ನಾಟಕದ ನಾಥ ಪಂಥ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ರಾಮಚಂದ್ರ ಚಿಂತಾಮಣ ಢೇರೆ (ಮರಾಠಿ ಮೂಲ), ಚಂದ್ರಕಾಂತ ಪೋಕಳೆ (ಅನು), (2024), ನಾಥ ಸಂಪ್ರದಾಯದ ಇತಿಹಾಸ, ಬೆಂಗಳೂರು: ಸ್ನೇಹ ಪ್ರಿಂಟರ್ಸ್.

ಸಿದ್ಧಗಂಗಯ್ಯ ಹೆಚ್.ಕೆ. (ಸಂ), (1996), ಆದಿಚುಂಚನಗಿರಿ ಸ್ಥಲಮಹಾತ್ಮ್ಯ, ಮಂಡ್ಯ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಆದಿಚುಂಚನಗಿರಿ ಕ್ಷೇತ್ರ.

ಚಿದಾನಂದಮೂರ್ತಿ ಎಂ., (1970), ಸಂಶೋಧನಾ ತರಂಗ: ಸಂಪುಟ ಎರಡು, ಮಧ್ಯಕಾಲೀನ ಕರ್ನಾಟಕದ ಕೆಲವು ರಹಸ್ಯ ತಾಂತ್ರಿಕ ಪಂಥಗಳು, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.