ಹಳಗನ್ನಡ ಕಾವ್ಯಗಳಲ್ಲಿ ಮಾನವೀಯ ಸಂಬಂಧಗಳು

Main Article Content

ಶಿವಪ್ಪ ಮುಳ್ಳೂರ

Abstract

ಪ್ರಾಚೀನ ಹಳಗನ್ನಡ ಕಾವ್ಯಗಳಲ್ಲಿ ವ್ಯಕ್ತವಾಗಿರುವ ದಯೆ, ಅನುಕಂಪ, ತ್ಯಾಗ ಮತ್ತು ಸದ್ಭಾವನೆಗಳಂತಹ ಉದಾತ್ತ ಮಾನವೀಯ ಮೌಲ್ಯಗಳನ್ನು ವಿಶ್ಲೇಷಿಸಲಾಗಿದೆ. ಪಂಪನ 'ಆದಿಪುರಾಣ'ದಲ್ಲಿ ಬರುವ ಭರತ-ಬಾಹುಬಲಿಯರ ಯುದ್ಧ ನಿರಾಕರಣೆ ಮತ್ತು ಬಾಹುಬಲಿಯ ಉದಾರತೆ, ರನ್ನನ 'ಗದಾಯುದ್ಧ'ದಲ್ಲಿನ ಸುಯೋಧನನ ಶತ್ರು ಪ್ರಶಂಸೆ ಹಾಗೂ ಕರ್ಣನ ಮೇಲಿನ ಸ್ನೇಹಭಾವವನ್ನು ಗುರುತಿಸಲಾಗಿದೆ. ಹಾಗೆಯೇ, ನಾಗಚಂದ್ರನ 'ರಾಮಚಂದ್ರ ಚರಿತ ಪುರಾಣ'ದಲ್ಲಿ ರಾವಣನ ಪಶ್ಚಾತ್ತಾಪ ಮತ್ತು ಪರಿವರ್ತನೆಯ ಮೂಲಕ ಮಾನವೀಯತೆಯ ನೆಲೆಗಳನ್ನು ಅನ್ವೇಷಿಸಲಾಗಿದೆ. ಯುದ್ಧ ಮತ್ತು ಹಿಂಸಾಚಾರದ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ, ಈ ಹಳಗನ್ನಡ ಕಾವ್ಯಗಳು ಸಾರುವ ಮಾನವೀಯ ಸಂಬಂಧಗಳು ಮತ್ತು ಶಾಂತಿಯ ಸಂದೇಶಗಳು ಎಷ್ಟು ಪ್ರಸ್ತುತ ಎಂಬುದನ್ನು ನಿರೂಪಿಸಲಾಗಿದೆ.

Article Details

Section

Research Articles

Author Biography

ಶಿವಪ್ಪ ಮುಳ್ಳೂರ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಧ.ರಾ.ಮ. ವಿಜ್ಞಾನ ಕಾಲೇಜು, ದಾವಣಗೆರೆ.

How to Cite

ಶಿವಪ್ಪ ಮುಳ್ಳೂರ. (2023). ಹಳಗನ್ನಡ ಕಾವ್ಯಗಳಲ್ಲಿ ಮಾನವೀಯ ಸಂಬಂಧಗಳು. ಅಕ್ಷರಸೂರ್ಯ (AKSHARASURYA), 2(08), 38 to 41. https://aksharasurya.com/index.php/latest/article/view/193

References

ಕನ್ನಡಸಾಹಿತ್ಯಚರಿತ್ರೆ, ಡಾ. ರಂ.ಶ್ರೀ ಮುಗಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಆದಿಪುರಾಣ ಸಂಗ್ರಹ, ಎಲ್. ಗುಂಡಪ್ಪ

ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ

ರನ್ನನ ಸರಳ ಗದಾಯುದ್ಧ, ಡಾ. ಎಲ್. ಬಸವರಾಜು