ಮಹಾಕವಿ ಪಂಪನ ಕಾವ್ಯಗಳಲ್ಲಿ ವರ್ಣನೆಗಳ ವೈಶಿಷ್ಟ್ಯ

Main Article Content

ಹರಿಣಾಕ್ಷಿ ಎಂ. ಡಿ.

Abstract

ಹತ್ತನೆಯ ಶತಮಾನದ ಮಹಾಕವಿ ಪಂಪನ 'ಆದಿಪುರಾಣ' ಮತ್ತು 'ವಿಕ್ರಮಾರ್ಜುನ ವಿಜಯ' ಕೃತಿಗಳಲ್ಲಿನ ವರ್ಣನಾ ವೈಭವ ಮತ್ತು ಆತನ ವಿಸ್ತಾರವಾದ ಜೀವನ ದೃಷ್ಟಿಯನ್ನು ಅವಲೋಕಿಸಲಾಗಿದೆ. ಶ್ರೀಮತಿ-ವಜ್ರಜಂಘರ ಪ್ರಸಂಗ, ನೀಲಾಂಜನೆಯ ನೃತ್ಯ, ಭರತ-ಬಾಹುಬಲಿಯರ ತ್ಯಾಗ ಮತ್ತು ಭೋಗದ ವಿವೇಚನೆ ಹಾಗೂ ನಿಸರ್ಗ ವರ್ಣನೆಯ ಮೂಲಕ ಪಂಪನ ಕಾವ್ಯಧರ್ಮವನ್ನು ವಿಶ್ಲೇಷಿಸಲಾಗಿದೆ. ಜೊತೆಗೆ, ಸಮಸ್ತ ಭಾರತದ ಕಥೆಯಲ್ಲಿ ರಸಪೋಷಕವಾದ ಯುದ್ಧದ ವರ್ಣನೆ, ಮಾನವೀಯ ಸಂಘರ್ಷಗಳು, ಮತ್ತು ಕುಲ-ಛಲಗಳ ಬಗೆಗಿನ ಕವಿಯ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಲೌಕಿಕ ಮತ್ತು ಜಿನಾಗಮ ಎರಡನ್ನೂ ಸಮನ್ವಯಗೊಳಿಸಿದ ಪಂಪನ ಕಾವ್ಯಶಕ್ತಿ ಅದ್ಭುತವಾಗಿದೆ.

Article Details

Section

Research Articles

Author Biography

ಹರಿಣಾಕ್ಷಿ ಎಂ. ಡಿ.

ಮುಖ್ಯಸ್ಥರು, ಕನ್ನಡ ವಿಭಾಗ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ.

References

ರಾಜೇಂದ್ರ ಚೆನ್ನಿ (1989), ದೇಶೀವಾದ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಕೀರ್ತಿನಾಥ ಕುರ್ತಕೋಟಿ (1995), ಕನ್ನಡ ಸಾಹಿತ್ಯ ಸಂಗಾತಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

ಜಿ.ಎಸ್. ಶಿವರುದ್ರಪ್ಪ (2013), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ 10 ಸಂಪುಟಗಳು, ಸಪ್ನ ಬುಕ್ ಹೌಸ್, ಬೆಂಗಳೂರು.

ಜಿ.ಎಸ್. ಶಿವರುದ್ರಪ್ಪ (2016), ಪಂಪ: ಒಂದು ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು.

ಸಿ. ವೀರಣ್ಣ (2017), ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟ 1, ನವಕರ್ನಾಟಕ ಪ್ರಕಾಶನ, ಬೆಂಗಳೂರು.

ವಿಕ್ರಮಾರ್ಜುನ ವಿಜಯಂ (2018), ಬೆಳ್ಳಾವೆ ವೆಂಕಟನಾರಣಪ್ಪ, ಪೊಡವಿ ಪ್ರಕಾಶನ, ಮೈಸೂರು.