ವಸಾಹತುಶಾಹಿ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿ: ಒಂದು ವಿಶ್ಲೇಷಣೆ

Main Article Content

ಬೋರೇಗೌಡ ಎಸ್.ಬಿ.

Abstract

ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಬೆಂಗಳೂರಿನ (Bengaluru) ಬೆಳವಣಿಗೆ ಮತ್ತು ಸಮಗ್ರ ಅಭಿವೃದ್ಧಿಯ ಕುರಿತು ಈ ಲೇಖನವು ವಿಶ್ಲೇಷಿಸುತ್ತದೆ. 1831 ರಲ್ಲಿ ಮೈಸೂರು ಸಂಸ್ಥಾನ ಬ್ರಿಟಿಷರ ನೇರ ಆಡಳಿತಕ್ಕೆ ಬಂದ ನಂತರ ಮತ್ತು 1834 ರಲ್ಲಿ ಮಾರ್ಕ್ ಕಬ್ಬನ್ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದ ನಂತರ ನಗರವು ಪ್ರಮುಖ ಪ್ರಗತಿಯನ್ನು ಕಂಡಿತು. 


ಬ್ರಿಟಿಷ್ ಪ್ರಭಾವದಿಂದಾಗಿ ಕಬ್ಬನ್ ಪಾರ್ಕ್, ಲಾಲ್‌ಬಾಗ್‌ನಂತಹ ಉದ್ಯಾನವನಗಳು, ರಾಜಭವನ, ಅಠಾರ ಕಛೇರಿಯಂತಹ ಸಾರ್ವಜನಿಕ ಕಟ್ಟಡಗಳು ನಿರ್ಮಾಣಗೊಂಡವು. ಇನ್‌ಫಂಟ್ರಿ ರಸ್ತೆ, ಕ್ವೀನ್ಸ್ ರಸ್ತೆಯಂತಹ ಹೊಸ ರಸ್ತೆಗಳ ನಿರ್ಮಾಣದೊಂದಿಗೆ ನಗರೀಕರಣ ಹೆಚ್ಚಾಯಿತು. ಈ ಅವಧಿಯಲ್ಲಿ ಪತ್ರಿಕೋದ್ಯಮ, ಬ್ಯಾಂಕಿಂಗ್, ಆರೋಗ್ಯ ಕ್ಷೇತ್ರ ಮತ್ತು ಮುಖ್ಯವಾಗಿ ಕೈಗಾರಿಕಾ ವಲಯದಲ್ಲಿ ಗಣನೀಯ ಪ್ರಗತಿಯಾಯಿತು. ಎಚ್‌ಎಎಲ್, ಸರ್ಕಾರಿ ಸಾಬೂನು ಕಾರ್ಖಾನೆ ಮತ್ತು ಮೈಸೂರು ಲ್ಯಾಂಪ್ಸ್‌ನಂತಹ ಪ್ರಮುಖ ಕೈಗಾರಿಕೆಗಳು ಸ್ಥಾಪನೆಯಾಗುವುದರ ಮೂಲಕ ವಸಾಹತುಶಾಹಿ ಕಾಲದಲ್ಲಿ ಬೆಂಗಳೂರು ಬೃಹತ್ ನಗರವಾಗಿ ರೂಪುಗೊಂಡಿತು. 

Article Details

Section

Research Articles

Author Biography

ಬೋರೇಗೌಡ ಎಸ್.ಬಿ.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಪಟ್ಟಣ, ಬೆಂಗಳೂರು. 

How to Cite

ಬೋರೇಗೌಡ ಎಸ್.ಬಿ. (2025). ವಸಾಹತುಶಾಹಿ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿ: ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 11(04), 82 to 89. https://aksharasurya.com/index.php/latest/article/view/1918

References

The Subsidiary Treaty (Manuscript) 1799 ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, and Mysore State Papers Selections, Vol 1 to IV, (1922), Bangalore.

ಎಫಿಗ್ರಾಫಿ ಆಫ್ ಕರ್ನಾಟಕ 9, ಬೆಂಗಳೂರು, 68, ಮಡಿವಾಳ ಪು. ಸಂ. 15

ಡಾ. ಸೂರ್ಯನಾಥ್ ಕಾಮತ್ (ಮು. ಸಂ) ಕರ್ನಾಟಕ ಸ್ಟೇಟ್ ಗ್ಯಾಜಟಿಯರ್, ಬೆಂಗಳೂರು, ಕರ್ನಾಟಕ ಸರ್ಕಾರ, ಬೆಂಗಳೂರು, (1990), ಪು. ಸಂ. 238, 239, 949.

ಬೆಂಗಳೂರು ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಆರ್. ಗೋಪಾಲ್ (ಸಂ) ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, (2013), ಪು. 279

ಮೇಲಿನದೆ ಪು. 206

ಎಸ್. ಚಂದ್ರಶೇಖರ್ ಆಧುನಿಕ ಕರ್ನಾಟಕದ ಆಂದೋಲನಗಳು (2002) ನವಪ್ರಕಾಶನ, ತಿಪಟೂರು, ಪು. 9

ರಿಪೋರ್ಟ್ ಆನ್ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು, 1941-42 ಗೌರ‍್ನಮೆಂಟ್ ಪ್ರೆಸ್, ಬೆಂಗಳೂರು, 1943, ಪು. 72

ಡಿ. ಸಿ. ರಾಜಪ್ಪ, ಮೈಸೂರು ರಾಜ್ಯದಲ್ಲಿ ವಾಣಿಜ್ಯ ಮತ್ತು ಕರಕುಶಲ ಕಲೆಗಳು (1995) ಶೋಭಾ ಪ್ರೊಸೆಸ್ ಪ್ರಿಂಟರ್ಸ್, ಪುತ್ತೂರು, ಪು. 14

ಹಯವದನರಾವ್ ಸಿ. (1929) ಮೈಸೂರು ಗ್ಯಾಸೆಟಿಯರ್ ಭಾಗ, 3, ಕರ್ನಾಟಕ ಸರ್ಕಾರ, ಪು. 243

ರಿಪೋರ್ಟ್ ಆನ್ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು 1931-32, ಗೌರ‍್ನಮೆಂಟ್ ಪ್ರೆಸ್, ಬೆಂಗಳೂರು, 1932, ಪು. 37

ಸೂರ್ಯನಾಥ ಕಾಮತ್ (1985) ಕರ್ನಾಟಕ ಗ್ಯಾಸೆಟಿಯರ್, ಭಾಗ 2, ಪೂರ್ವೋಕ್ತ, ಪು. . 12

ಸ್ವಾಮಿ ಜಿ. ಎಲ್. ಮೈಸೂರು ಇಂಡಸ್ಟ್ರೀಸ್ (ಆನ್ ಇಂಡಸ್ಟ್ರಿಯಲ್ ಗೈಡ್ ಬುಕ್ ಆಫ್ ಮೈಸೂರು) ಕಂಪೈಲರ್ಸ್ ಹ್ಯಾಂಡ್ ಬುಕ್ ಮತ್ತು ಮ್ಯಾನೇಜರ್ ಟೂರಿಸ್ಟ್ ಬ್ಯೂರೋ, ಮೈಸೂರು, ಪು. 33

ರಿಪೋರ್ಟ್ ಆನ್ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು, 1929-30, ಪು. 36

ಸ್ವಾಮಿ ಜಿ. ಎಲ್. ಮೈಸೂರು ಇಂಡಸ್ಟ್ರೀಸ್, ಪೂರ್ವೋಕ್ತ, ಪು. 36

ಮೇಲಿನದೆ, ಪು. 35

ರಿಪೋರ್ಟ್ ಆನ್ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು, 1934-35, ಪು. 83

ರಿಪೋರ್ಟ್ ಆನ್ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು, 1937-38, ಪು. 72

ಸೂರ್ಯನಾಥ್ ಕಾಮತ್, ಭಾಗ 2, (1985) ಪೂರ್ವೋಕ್ತ, ಪು. 16

ಮೇಲಿನದೆ, ಪು. 16

ಮೇಲಿನದೆ, ಪು. 18

ಬೆಂಗಳೂರು ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಆರ್. ಗೋಪಾಲ್ (ಸಂ), ಪೂರ್ವೋಕ್ತ, ಪು. 365.