ಬ್ರಿಟಿಷರ ಕಾಲದ ಬಿಜಾಪುರ ಜಿಲ್ಲೆಯ ಶಿಕ್ಷಣ ವ್ಯವಸ್ಥೆ
Main Article Content
Abstract
19 ನೇ ಶತಮಾನದ ಪ್ರಾರಂಭದಲ್ಲಿ ಮುಂಬೈ ಕರ್ನಾಟಕ ಒಂದು ಸಂಕೀರ್ಣ ವ್ಯವಸ್ಥೆಯನ್ನು ಒಳಗೊಂಡ ಪ್ರಾಂತ್ಯವಾಗಿತ್ತು. ಮೂರನೆಯ ಆಂಗ್ಲೋ-ಮರಾಠ ಯುದ್ಧದಲ್ಲಿ ಎರಡನೇ ಬಾಜಿರಾಯನು ಸೋತು ಇಡೀ ದಕ್ಷಿಣ ಮರಾಠ ಪ್ರದೇಶವನ್ನು ಬ್ರಿಟಿಷರ ಆಡಳಿತಕ್ಕೆ ಒಳಪಡಿಸಿದನು. ಈ ದಕ್ಷಿಣ ಮರಾಠ ಪ್ರದೇಶವು ಬಿಜಾಪುರ, ಬೆಳಗಾವಿ, ಮತ್ತು ಧಾರವಾಡ ಪ್ರಾಂತ್ಯಗಳನ್ನು ಒಳಗೊಂಡ ಪ್ರದೇಶವಾಗಿತ್ತು. ಇದರ ಸಂಪೂರ್ಣ ಆಡಳಿತ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಆಡಳಿತಾತ್ಮಕ ಹಿತ ದೃಷ್ಟಿಯಿಂದ ಕ್ರಿ. ಶ. 1864 ರಲ್ಲಿ ಸೋಲಾಪುರ ಜಿಲ್ಲೆಗೆ ಸೇರಿದ ಭೀಮ, ಕೃಷ್ಣಾ ನದಿಯ ನಡುವಿನ ಪ್ರದೇಶಗಳಾದ ಇಂಡಿ, ದೇವರಹಿಪ್ಪರಗಿ, ಬಿಜಾಪುರ, ಮನಗೂಳಿ ಮತ್ತು ಮುದ್ದೇಬಿಹಾಳ ಈ ತಾಲೂಕುಗಳನ್ನು ಸೇರಿಸಿದರು. ಬಾಗಲಕೋಟೆ, ಬದಾಮಿ, ಹುನಗುಂದ ಈ ಮೂರು ತಾಲೂಕುಗಳನ್ನು ಕಲಾದಗಿ ಜಿಲ್ಲೆಯನ್ನಾಗಿ ಮಾಡಲಾಯಿತು. 1884 ರಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಕಲಾದಗಿಯನ್ನು ವಿಜಾಪುರಕ್ಕೆ ವರ್ಗಾಯಿಸಿ ಬಿಜಾಪುರ ಜಿಲ್ಲೆಯನ್ನಾಗಿ ಮಾಡಿದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಡಕೋಳ ಎಚ್. ಎಂ., (2010), ಬಿಜಾಪುರ ಜಿಲ್ಲಾ ಸಂಸ್ಕೃತಿಕ ಪರಂಪರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಿಜಾಪುರ
ಕೊಪ್ಪ ಎಸ್. ಕೆ., (1990)., ತರ್ದವಾಡಿ ನಾಡು: ಒಂದು ಅಧ್ಯಯನ ಪ್ರತಿಭಾ ಪ್ರಕಾಶನ ಇಂಡಿ.
ಲೋಹಿತ್ ಕುಮಾರ್., “ವಸಾಹತು ಕಾಲದ ಬಳ್ಳಾರಿ ಜಿಲ್ಲೆ”, ಕನ್ನಡ ವಿವಿ ಹಂಪಿ
ಶಂಭುಲಿಂಗಯ್ಯ ವಿರಕ್ತಮಠ., ಲೇಖನ “ವಸಾಹತ ಕಾಲದ ವಿಜಯಪುರ ಜಿಲ್ಲೆಯ ಸಾಂಸ್ಕೃತಿಕ ಬೆಳವಣಿಗೆ”
ಮುನಿಸ್ವಾಮಿ ಆರ್., (1999), ಬಿಜಾಪುರ ಜಿಲ್ಲಾ ಗೆಜೆಟಿಯರ್ ಕರ್ನಾಟಕ ಸರ್ಕಾರ
ಕಡಕೋಳ ಹೆಚ್. ಎಂ., (2018), ಬಿಜಾಪುರು ಜಿಲ್ಲಾ ಸಂಸ್ಕೃತಿಕ ಪರಂಪರೆ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಐಹೊಳೆ ವಿ. ಡಿ., (2018), ಶಿಕ್ಷಣ ಮತ್ತು ಸಾಹಿತ್ಯ. ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್.
ಶೇಕ್ ಅಲಿ ಬಿ., (2018), ಕರ್ನಾಟಕ ಚರಿತ್ರೆ ಸಂಪುಟ ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ