ಟಿ. ಪಿ. ಕೈಲಾಸಂ ಅವರ ನಾಟಕಗಳಲ್ಲಿ ಸ್ತ್ರೀ ಸಂಬಂಧೀ ವಸ್ತು ಧೋರಣೆಗಳು

Main Article Content

ವಿನೊದ್ ರಾಜ್ ಸಿ. ಸಿ.

Abstract

ಕನ್ನಡ ನಾಟಕ ಪರಂಪರೆಯಲ್ಲಿ ಪೌರಾಣಿಕ ವಸ್ತುಗಳಿಂದ ಸಾಮಾಜಿಕ ವಾಸ್ತವದತ್ತ ಗಮನಹರಿಸಿದವರಲ್ಲಿ ಟಿ.ಪಿ. ಕೈಲಾಸಂ ಪ್ರಮುಖರು. ತಮ್ಮ ನಾಟಕಗಳಲ್ಲಿ ಸಮಾಜದ ನೈಜ ಸ್ತ್ರೀಯರನ್ನು ಪ್ರತಿನಿಧಿಸುವ ಮೂಲಕ ವಿಧವಾ ಸಮಸ್ಯೆ, ವೇಶ್ಯಾ ವೃತ್ತಿ, ಮತ್ತು ಸ್ತ್ರೀ ಸ್ವಾತಂತ್ರ್ಯದಂತಹ ಜ್ವಲಂತ ಸಮಸ್ಯೆಗಳ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ತಾಯ್ತನದ ಮಹತ್ವ, ತ್ಯಾಗ, ಮತ್ತು ಕರುಣೆಯನ್ನು ಎತ್ತಿಹಿಡಿಯುವ ಕೈಲಾಸಂ, ವಾತ್ಸಲ್ಯಮಯಿ ತಾಯಂದಿರ ಅಪೂರ್ವ ಚಿತ್ರಣವನ್ನು ನೀಡಿದ್ದಾರೆ. ಸಮಾಜದ ಸಂಪ್ರದಾಯಗಳನ್ನು ಒಪ್ಪಿಕೊಳ್ಳುತ್ತಲೇ, ಮಹಿಳೆಯರ ಮೇಲಿನ ಶೋಷಣೆಯನ್ನು ವಿರೋಧಿಸುವ ಅವರ ನಿಲುವುಗಳು ಹಾಗೂ ಸ್ತ್ರೀಯರನ್ನು ವಾಸ್ತವಿಕ ರಂಗಭೂಮಿಗೆ ಪರಿಚಯಿಸಿದ ಅವರ ಕ್ರಾಂತಿಕಾರಕ ಹೆಜ್ಜೆಗಳನ್ನು ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ವಿನೊದ್ ರಾಜ್ ಸಿ. ಸಿ.

ಅತಿಥಿ ಉಪನ್ಯಾಸಕ, ಕನ್ನಡ ವಿಭಾಗ, ಎಫ್.ಎಂ.ಕೆ.ಎಂ.ಸಿ. ಕಾಲೇಜು, ಮಡಿಕೇರಿ.

How to Cite

ವಿನೊದ್ ರಾಜ್ ಸಿ. ಸಿ. (2023). ಟಿ. ಪಿ. ಕೈಲಾಸಂ ಅವರ ನಾಟಕಗಳಲ್ಲಿ ಸ್ತ್ರೀ ಸಂಬಂಧೀ ವಸ್ತು ಧೋರಣೆಗಳು. ಅಕ್ಷರಸೂರ್ಯ (AKSHARASURYA), 2(07), 114 to 119. https://aksharasurya.com/index.php/latest/article/view/179

References

ಅಶೋಕ ಟಿ. ಪಿ. (ಸಂ), 1994, ಶ್ರೀರಂಗ, ಸಂಪುಟ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕೃಷ್ಣರಾಯ ಅ. ನ., 1971, ಕೈಲಾಸಂ, ಪುಸ್ತಕಾಲಯ ಪ್ರಕಾಶಕರು, ಮೈಸೂರು.

ತಿಪ್ಪೆರುದ್ರಸ್ವಾಮಿ (ಸಂ), 1987, ಕೈಲಾಸಂ ಕೃತಿಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ.

ವಿನಾಯಕ, 1987, ಬಾಳಿದೇಗುಲದಲ್ಲಿ, ಮನೋಹರ ಗ್ರಂಥ ಪ್ರಕಾಶನ ಸಮಿತಿ, ಧಾರವಾಡ.