ಭೂಪಾಲದ ರಾಣಿ ಕಮಲಾಪತಿ

Main Article Content

ನಿವೇದಿತಾ ಸ್ವಾಮಿ

Abstract

ಮಧ್ಯಪ್ರದೇಶದ ಭೂಪಾಲದಲ್ಲಿ ಇತ್ತೀಚೆಗೆ ಹಬೀಬಗಂಜ ರೈಲು ನಿಲ್ದಾಣವನ್ನು 'ರಾಣಿ ಕಮಲಾಪತಿ ರೈಲು ನಿಲ್ದಾಣ' ಎಂದು ಮರುನಾಮಕರಣ ಮಾಡಲಾಗಿದೆ. ೧೬ನೇ ಶತಮಾನದ ಗೊಂಡ ಮನೆತನದ ಹಿಂದೂ ರಾಣಿಯಾದ ಕಮಲಾಪತಿಯು, ತನ್ನ ಶೀಲ ಮತ್ತು ಮಾನ ರಕ್ಷಣೆಗಾಗಿ ಜಲಸಮಾಧಿ (ಜಲಜೋಹರ) ಯನ್ನು ಸ್ವೀಕರಿಸಿದ ಅಪ್ರತಿಮ ವೀರ ಮಹಿಳೆಯಾಗಿದ್ದಾಳೆ. ತನ್ನ ಪತಿಯ ಕೊಲೆಯ ನಂತರ, ಅಧಿಕಾರ ಮತ್ತು ಕಾಮದ ದಾಹದಿಂದ ಆಕ್ರಮಣ ಮಾಡಿದವರ ವಿರುದ್ಧ ಹೋರಾಡಿ, ಅಂತಿಮವಾಗಿ ಶರಣಾಗದೆ ಕೆರೆಯ ತಳಭಾಗದಲ್ಲಿ ಮುಳುಗಿ ಪ್ರಾಣಾರ್ಪಣೆ ಮಾಡಿದಳು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಂತಹ ವಿಸ್ಮೃತ ಇತಿಹಾಸದ ವೀರಗಾಥೆಗಳನ್ನು ನೆನಪಿಸುವ ಮತ್ತು ಗುಲಾಮಿ ಮಾನಸಿಕತೆಯಿಂದ ಹೊರಬಂದು ಆಕ್ರಮಣಕಾರರು ಇಟ್ಟ ಹೆಸರುಗಳನ್ನು ಬದಲಾಯಿಸುವ ಪ್ರಯತ್ನದ ಮಹತ್ವವನ್ನು ವಿವರಿಸಲಾಗಿದೆ.

Article Details

Section

Research Articles

Author Biography

ನಿವೇದಿತಾ ಸ್ವಾಮಿ

ಇತಿಹಾಸ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಮಲಾಪೂರ ಜಿ: ಕಲಬುರಗಿ.

References

Pacharhi Travel Guide: Includes Bhopal, Bhimetka and Jabalpur, 2020.

English Version of "Kumaun Ka Itihas", Volume 1, 1993.