ಮುಂಬಯಿ ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ತಿಲಕರ ಪ್ರಭಾವ
Main Article Content
Abstract
ಈ ಲೇಖನವು ಬಾಲಗಂಗಾಧರ ತಿಲಕರ (ಲೋಕಮಾನ್ಯ) ಪ್ರಭಾವವು ಮುಂಬಯಿ ಕರ್ನಾಟಕದ (ಇಂದಿನ ವಾಯುವ್ಯ ಕರ್ನಾಟಕ) ಸ್ವಾತಂತ್ರ್ಯ ಚಳುವಳಿಯ ಮೇಲೆ ಹೇಗೆ ಆಳವಾಗಿ ಬೇರೂರಿತು ಎಂಬುದನ್ನು ವಿಶ್ಲೇಷಿಸುತ್ತದೆ. ಧಾರವಾಡ, ಬೆಳಗಾಂ, ಬಿಜಾಪುರ ಜಿಲ್ಲೆಗಳು ಮತ್ತು ಸ್ಥಳೀಯ ಸಂಸ್ಥಾನಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ತಿಲಕರು ತಮ್ಮ ‘ಸ್ವರಾಜ್ಯ, ಸ್ವದೇಶಿ, ವಿದೇಶಿ ಬಹಿಷ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣ’ ಎಂಬ ‘ಚತುಃಸೂತ್ರ’ದ ಮೂಲಕ ನವಚೈತನ್ಯ ತುಂಬಿದರು. ಅವರ ಪತ್ರಿಕೆಗಳಾದ ‘ಕೇಸರಿ’ ಮತ್ತು ‘ಮರಾಠ’ ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದವು. ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವ ಪದ್ಧತಿ ಜಾರಿಗೆ ತಂದು ಜನರನ್ನು ಸಂಘಟಿಸಿದರು. ಗಂಗಾಧರರಾವ್ ದೇಶಪಾಂಡೆ ಅವರಂತಹ ನಾಯಕರು ತಿಲಕರ ಪ್ರೇರಣೆಯಿಂದ ಹೋಮ್‌ರೂಲ್ ಲೀಗ್ ಮತ್ತು ಸ್ವದೇಶಿ ಚಳುವಳಿಯನ್ನು ಮುನ್ನಡೆಸಿದರು. ಒಟ್ಟಿನಲ್ಲಿ, ತಿಲಕರ ನೇತೃತ್ವವು ಮುಂಬಯಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅಡಿಪಾಯ ಹಾಕಲು ಮತ್ತು ರಾಷ್ಟ್ರೀಯತೆಯನ್ನು ಜನಸಾಮಾನ್ಯರ ಬಳಿಗೆ ತರಲು ನಿರ್ಣಾಯಕವಾಯಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕನ್ನಡ ವಿಷಯ ವಿಶ್ವಕೋಶ, ಇತಿಹಾಸ ಮತ್ತು ಪುರಾತತ್ವ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, 2009, ಪುಟ 456
ಸೂರ್ಯನಾಥ ಕಾಮತ್(ಸಂ)., ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು(ಪ್ರಥಮ ಸಂಪುಟ), ಗೀತಾ ಬುಕ್ ಹೌಸ್, ಮೈಸೂರು, 1974, ಪುಟ 139
ಅದೇ, ಪುಟ 1179
ಶಂಕರ ಘೋಷ, ಪೊಲಿಟಿಕಲ್ ಐಡಿಯಾಸ್ ಅಂಡ್ ಮೊಮೆಂಟ್ಸ್ ಇನ್ ಇಂಡಿಯಾ, ಅಲ್ಲೀಯಡ್ ಪಬ್ಲಿಷರ್ಸ್, 1975, ಪುಟ 73
ಸೂರ್ಯನಾಥ ಕಾಮತ್(ಸಂ)., ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು(ದ್ವಿತೀಯ ಸಂಪುಟ), ಗೀತಾ ಬುಕ್ ಹೌಸ್, ಮೈಸೂರು, 1974, ಪುಟ 955
ಸೂರ್ಯನಾಥ ಕಾಮತ್(ಸಂ)., ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು(ಪ್ರಥಮ ಸಂಪುಟ), ಗೀತಾ ಬುಕ್ ಹೌಸ್, ಮೈಸೂರು, 1974, ಪುಟ 986
ಶಂಕರನಾರಾಯಣರಾವ್ ಎನ್.ಪಿ., ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ನವಕರ್ನಾಟಕದ (ಒಂಬತ್ತನೆ ಮುದ್ರಣ), 2013, ಪುಟ 138