ಕರ್ನಾಟಕದ ಸ್ವಾತಂತ್ರ್ಯ ಚಳುವಳಿಗೆ ವಿಜಾಪುರ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ
Main Article Content
Abstract
ಈ ಲೇಖನವು ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಜಾಪುರ (ಇಂದಿನ ವಿಜಯಪುರ) ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಮಹತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಆರಂಭದಿಂದಲೂ ಭಾರತೀಯರಲ್ಲಿ ಮೂಡಿದ ಅಸಮಾಧಾನವು 1857ರ ಸಂಗ್ರಾಮದ ಮೊದಲು 1824ರ ಸಿಂದಗಿಯ ಬಂಡಾಯ ಮತ್ತು 1857ರ ಹಲಗಲಿಯ ಬೇಡರ ದಂಗೆಗಳ ಮೂಲಕ ವಿಜಾಪುರದಲ್ಲಿ ಪ್ರಕಟಗೊಂಡಿತು.
ಶ್ರೀನಿವಾಸರಾವ್ ಕೌಜಲಗಿ (1873-1940), ಲೋಕಮಾನ್ಯ ತಿಲಕ್ ಮತ್ತು ಮಹಾತ್ಮ ಗಾಂಧಿಯವರ ನಿಕಟವರ್ತಿ, ವಕೀಲಿ ವೃತ್ತಿ ತ್ಯಜಿಸಿ ಸ್ವದೇಶಿ ಚಳುವಳಿ, ಅಸಹಕಾರ ಆಂದೋಲನ ಮತ್ತು ಹಿಂದುಸ್ತಾನಿ ಸೇವಾದಳದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಬ್ಬ ಪ್ರಮುಖ ನಾಯಕ ಚನ್ನಬಸಪ್ಪ ಜಗದೇವಪ್ಪ ಅಂಬಲಿ (1895-1962), ‘ಕರ್ನಾಟಕದ ಸರದಾರ ಪಟೇಲ್’ ಎಂದು ಗುರುತಿಸಲ್ಪಟ್ಟು, ಕಾಯ್ದೆ ಭಂಗ ಮತ್ತು ಚಲೇ ಜಾವ್ ಚಳುವಳಿಯಲ್ಲಿ ಕುಟುಂಬ ಸಮೇತ ಭಾಗವಹಿಸಿ ಬಂಧನಕ್ಕೊಳಗಾದರು. ಈ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದಾಗಿ ವಿಜಾಪುರ ತಾಲೂಕು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳುಸೂರ್ಯನಾಥ ಕಾಮತ ಮೈಸೂರು 197480
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳುಎನ್.ಪಿ.ಶಂಕರನಾರಾಯಣರಾವ್ಬೆಂಗಳೂರು1991
ಕರ್ನಾಟಕ ಗ್ಯಾಜಿಟಿಯರ್, ವಿಜಾಪುರ ಜಿಲ್ಲೆ ಸೂರ್ಯನಾಥ ಕಾಮತ
ಕರ್ನಾಟಕ ಭೂಷಣ ಕೌಜಲಗಿ ಶ್ರೀನಿವಾಸರಾವ್ ಹಣಮಂತ ತಾಸಗಾಂವಕರ್
ಕರ್ನಾಟಕ ವೈಭವ: ಕಾಲು ಶತಮಾನ ಕಂಡ ಕರ್ನಾಟಕ ಪ್ರತಿಕೆಗಳುಕರ್ನಾಟಕ ಪತ್ರಿಕೆ ಅಕಾಡಮಿ ಬೆಂಗಳೂರು1990 –ಕೃಷ್ಣಕುಮಾರ್
ದೇಶಭಕ್ತ ಶ್ರೀನಿವಾಸರಾಯರು ಕೌಜಲಗಿ ಐ.ಬಿ.ಎಚ್. ಪ್ರಕಾಶನ ಬೆಂಗಳೂರು1977 ಸದಾನಂದ ಕನವಳ್ಳಿ