ಬೆಳಗಾವಿ ಜಿಲ್ಲೆಯಲ್ಲಿ 1942ರ ಕ್ವಿಟ್ ಇಂಡಿಯಾ ಚಳುವಳಿ

Main Article Content

ತಿಪ್ಪಣ್ಣ ಧ. ಡಂಗಿ

Abstract

1942 ರಲ್ಲಿ ದ್ವಿತೀಯ ವಿಶ್ವ ಮಹಾಯುದ್ಧವು ಒಳ್ಳೆ ಜೋರಾಗಿ ಇಂಗ್ಲೆಂಡ್ ಬಿಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಅದರಿಂದ ಭಾರತದ ಸ್ವಾತಂತ್ರ್ಯ ಪ್ರೇಮಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿತ್ತು. ಯುದ್ಧದ ಕಾರಣ ವಸ್ತುಗಳ ಬೆಲೆ ಬಹಳ ಹೆಚ್ಚಾಗಿದ್ದವು, ಅಲ್ಲದೆ ಅನೇಕ ವಸ್ತುಗಳು ಪೇಟೆಯಲ್ಲಿ ಸಿಗುತ್ತಿರಲಿಲ್ಲ. ಬ್ರಿಟಿಷರು ಸಿಂಗಾಪುರ, ಮಲಯಾ ಮೊದಲಾದ ದೇಶಗಳಿಂದ ಹಿಂದೆ ಸರಿಯುತ್ತಿದ್ದರು. ಈ ಸುದ್ದಿ ತಿಳಿದ ಭಾರತೀಯರು ಆ ವರ್ಷ ವಸಾಹತುಶಾಹಿಯಿಂದ ಬಂಧಮುಕ್ತವಾಗಲು ಅಂದರೆ ಭಾರತದಿಂದ ಬ್ರಿಟೀಷರನ್ನು ಓಡಿಸಲು ಪಣ ತೊಟ್ಟರು. ಕ್ರಿಪ್ಸನ ಸಲಹೆಗಳು ವಿಫಲವಾದವು. ಮುಸ್ಲಿಂ ಲೀಗ್ ಪ್ರತ್ಯೇಕ ರಾಷ್ಟ್ರಕ್ಕೆ ಅಂಟಿಕೊಂಡಿತ್ತು. ಭಾರತದ ಮೇಲೆ ಜಪಾನಿಯರು ನುಗ್ಗಿ ಬರುತ್ತಿದ್ದರು. ಈ ಹಿನ್ನಲೆಯಲ್ಲಿ ಕ್ವಿಟ್ ಇಂಡಿಯಾ ಠರಾವನ್ನು ಅಂಗೀಕರಿಸಲಾಯಿತು. 1942ರ ಜುಲೈ 14 ರಂದು ವಾರ್ದಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಗಾಂಧೀಜಿಯ ಸಲಹೆಯಂತೆ “ಭಾರತ ಬಿಟ್ಟು ತೊಲಗಿ” ಎಂಬ ನಿರ್ಣಯವನ್ನು ಅಂಗೀಕರಿಸಿ ಬ್ರಿಟಿಷರಿಗೆ ರಾಜಕೀಯ ಒಪ್ಪಂದಕ್ಕೆ ಬರಲು 24 ದಿನಗಳ ಅಂತಿಮ ಗಡುವು ನೀಡಿತು, ಇದಕ್ಕೆ ಬ್ರಿಟಿಷರು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಆದಕಾರಣ 1942ರ ಆಗಸ್ಟ್ 8ರಂದು ಮುಂಬೈನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ “ಮಾಡು ಇಲ್ಲವೆ ಮಡಿ” ಎಂಬ ಧ್ಯೇಯದೊಂದಿಗೆ ಹೋರಾಟದ ಕಿಚ್ಚನ್ನು ಹಚ್ಚಲಾಯಿತು. ಈ ಒಂದು ಧ್ಯೇಯ ವಾಕ್ಯ ಇಡೀ ಭಾರತದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಈ ಅಧಿವೇಶನಕ್ಕೆ ಬೆಳಗಾವಿಯಿಂದ ಗಂಗಾದರರಾವ್ ದೇಶಪಾಂಡೆ, ಪುಂಡಲೀಕಜಿ ಕಾತಗಾಡೆ, ರಾಮಚಂದ್ರ ವಡವಿ, ಚನ್ನಪ್ಪ ವಾಲಿ, ಅಪ್ಪಣ್ಣಗೌಡ ಪಾಟೀಲ್, ಅಣ್ಣೂ ಗುರೂಜಿ, ಶ್ರೀರಂಗ ಕಾಮತ, ಹೂಲಿ ವೆಂಕಟರೆಡ್ಡಿ ಮುಂತಾದ ನಾಯಕರು ಹೋದರು. ಮರುದಿನ ಅಂದರೆ ಆಗಸ್ಟ್ 9 ರಂದು ಗಾಂಧೀಜಿ, ನೆಹರು ಹಾಗೂ ಇತರ ಪ್ರಮುಖ ನಾಯಕರ ಬಂಧನವಾಯಿತು. ಈ ಸುದ್ದಿ ಇಡೀ ದೇಶದಲ್ಲೆಡೆ ಕಾಡ್ಗಿಚ್ಚಿನಂತೆ ಪಸರಿಸಿತು. ಕರ್ನಾಟಕವೂ ಇದರಿಂದ ಹೊರತಾಗಿರಲಿಲ್ಲ. ರಾಜ್ಯದ ನಾನಾ ಕಡೆ ಜಿಲ್ಲಾ, ತಾಲೂಕು ಹಾಗೂ ಗ್ರಾಮಗಳ ಮಟ್ಟದಲ್ಲಿ ಹೋರಾಟದ ರೂಪರೇಷೆಗಳು ಸಿದ್ಧಗೊಂಡವು.

Article Details

Section

Research Articles

Author Biography

ತಿಪ್ಪಣ್ಣ ಧ. ಡಂಗಿ

ಮುಖ್ಯಸ್ಥರು, ಇತಿಹಾಸ ವಿಭಾಗ, ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ. ಪದವಿ ಮಹಾವಿದ್ಯಾಲಯ, ಮಹಾಲಿಂಗಪುರ.

How to Cite

ತಿಪ್ಪಣ್ಣ ಧ. ಡಂಗಿ. (2025). ಬೆಳಗಾವಿ ಜಿಲ್ಲೆಯಲ್ಲಿ 1942ರ ಕ್ವಿಟ್ ಇಂಡಿಯಾ ಚಳುವಳಿ. ಅಕ್ಷರಸೂರ್ಯ (AKSHARASURYA), 9(06), 97 to 104. https://aksharasurya.com/index.php/latest/article/view/1706

References

ಕೆ.ಎನ್. ಅಶ್ವತಪ್ಪ – ಸಮಗ್ರ ಭಾರತದ ಇತಿಹಾಸ ಸಂಪುಟ2, ಸುಭಾಸ ಸ್ಟೋರ್ಸ್ ಪಬ್ಲಿಷರ್ಸ್ 2007 ಪುಟ 1698,1701.

ಬೆಳಗಾವಿ ಸಿರಿ, ಸ್ಮರಣ ಸಂಚಿಕೆ, 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 2003 ಪುಟ113.

ಸೂರ್ಯನಾಥ ಕಾಮತ, ಬೆಳಗಾವಿ ಡಿಸ್ಟ್ರಿಕ್ಟ್ ಗ್ಯಾಜೆಟೀಯರ್, 1987, ಬೆಂಗಳೂರು, ಪುಟ151, 152, 153, 154, 155.

ಸೋಮಲಿಂಗ ಅ. ಮಳಗಲಿ ಹಾಗೂ ಅಚ್ಯುತ ರಾ.ವಡವಿ (ಲೇ), ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಮತ್ತು ಗಾಂಧೀಜಿ, ಬೆಳಗಾವಿ, 2010, ಪುಟ 250.

ಸಚಿತ್ರ ಭಾರತ, ಪುಟ250, 251, 252.

ಎಲ್.ಎಸ್.ಶಾಸ್ತ್ರೀ (ಲೇ), ಸ್ವಾತಂತ್ರ್ಯ ಸಂಗ್ರಾಮ, ಬೆಳಗಾವಿ, 2006, ಪುಟ108, 109, 110, 115, 116, 118, 120, 136, 137.

ಚ ಸರೋಜಿನಿ ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಮೂರುಸಾವಿರಮಠ ಹುಬ್ಬಳಿ. ಪುಟ339,340.