ಮೈಸೂರು ಕಾಂಗ್ರೆಸ್‌ನಲ್ಲಿ ಕಡಿದಾಳ್ ಮಂಜಪ್ಪನವರ ಪಾತ್ರ
Main Article Content
Abstract
ಕಡಿದಾಳ್ ಮಂಜಪ್ಪನವರು ‘ಮೈಸೂರಿನ ಗಾಂಧಿ’ ಎಂದು ಪ್ರಸಿದ್ಧರಾಗಿದ್ದು, ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆರಂಭದಲ್ಲಿ ಬಡತನದಲ್ಲಿದ್ದರೂ ಉನ್ನತ ಶಿಕ್ಷಣ ಪಡೆದು ವಕೀಲ ವೃತ್ತಿ ಆರಂಭಿಸಿದರು. ಅವರು ಮೈಸೂರು ಕಾಂಗ್ರೆಸ್‌ನ ಸದಸ್ಯರಾಗಿ 1937ರಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಮೊದಲ ಕಾರ್ಯದರ್ಶಿಯಾದರು. ಪ್ರಜಾಪಕ್ಷಗಳನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಮೂಲಕ ಸಂಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ ಜವಾಬ್ದಾರಿಯುತ ಸರ್ಕಾರದ ಸ್ಥಾಪನೆಗಾಗಿ ನಡೆದ ಶಿವಪುರ ಸಮಾವೇಶ ಮತ್ತು ಅರಣ್ಯ ಸತ್ಯಾಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾಸಕರಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು. ಗೇಣಿದಾರರ ಕುಟುಂಬದಿಂದ ಬಂದ ಇವರು ಗೇಣಿದಾರರ ಸಂಘ ಮತ್ತು ರೈತ ಸಂಘಗಳನ್ನು ಸ್ಥಾಪಿಸಿ, ಅಂತಿಮವಾಗಿ ಕರ್ನಾಟಕದಲ್ಲಿ ಭೂಸುಧಾರಣೆಗೆ ಅಡಿಪಾಯ ಹಾಕಿದರು. ರಾಜಕಾರಣಿಗಳು ಪ್ರಾಮಾಣಿಕರಾಗಿರಬೇಕು ಎಂದು ಪ್ರತಿಪಾದಿಸಿದ ಮಂಜಪ್ಪನವರು ಜನಸೇವೆಗಾಗಿಯೇ ತಮ್ಮ ಅಧಿಕಾರವನ್ನು ಬಳಸಿದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪುಟ್ಟಣ್ಣ ವೈ.ಎಸ್., ನಾನು ಕಂಡ ಮಲೆನಾಡು, ಪ್ರಕಾಶಕರು ಶ್ರೀ ಕೆ.ಎಂ.ದಿನೇಶ್, ಬೆಂಗಳೂರು, 1994, ಪು ಸಂ 122.
ಬಸವರಾಜ, ಶಿವಮೊಗ್ಗ ರೈತ ಚಳುವಳಿ, ಸಮುದಾಯ ಪ್ರಕಾಶನ, ಬೆಂಗಳೂರು, 1981, ಪು ಸಂ 174
ಬಿಳುಮನೆ ರಾಮದಾಸ್, ಭೂಸುಧಾರಣಾ ರೂವಾರಿ ಕಡಿದಾಳ್ ಮಂಜಪ್ಪ, ಪ್ರಕಟಣೆ, ಕಡಿದಾಳ್ ಮಂಜಪ್ಪನವರ ಜನ್ಮಶತಮಾನೋತ್ಸವ, ಸಮಿತಿ, ಬೆಂಗಳೂರು, 2007, ಪು ಸಂ 241
ಬೋರಲಿಂಗಯ್ಯ ಹಿ.ಚಿ., ಹುಚ್ಚಪ್ಪ ಮಾಸ್ತರ ಎನ್.(ಸಂ), ಕಾಗೋಡು ಚಳುವಳಿ, ಸುವರ್ಣ ಸಂಪುಟ, ಮಲೆನಾಡು ಜನಪದ ಲೋಕ, ಸಾಗರ, 2002, ಪು ಸಂ 165.
ಜನಹೋರಾಟ ದಿನಪತ್ರಿಕೆ, (22.12.2001).
ಮುಝಫರ್ ಅಸ್ಸಾದಿ, ಭಾರತ ಮತ್ತು ಕರ್ನಾಟಕದಲ್ಲಿ ರೈತ ಹೋರಾಟಗಳು, ಅರಿವು ಬರಹ, ಸಂಚಿಕೆ (14, 1998). , ಪು ಸಂ 34
ರಾಜನ್ ಎಂ.ಎ.ಎಸ್., ಕರ್ನಾಟಕದಲ್ಲಿ ಭೂಸುಧಾರಣೆ ನಾನು ಸಹ ಹತ್ತಿರದಿಂದ ಕಂಡೆ, ಡಿ.ವಿ.ಎಸ್. ಪ್ರಕಾಶನ, ಗಾಂಧಿನಗರ, ಬೆಂಗಳೂರು, 1987, , ಪು ಸಂ 196.
ರಾಜಶೇಖರ್ ಜಿ., ಕಾಗೋಡು, ಸತ್ಯಾಗ್ರಹ, ಲಕ್ಷರ ಪ್ರಕಾಶನ, ಹೆಗ್ಗೋಡು, 1980. , ಪು ಸಂ 179.
ಲಕ್ಷ್ಮಣ್ ತೆಲಗಾವಿ (ಸಂ), ಚರಿತ್ರೆ ಅಧ್ಯಯನ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, 2005, , ಪು ಸಂ 134.
ವಿಷ್ಣುಮೂರ್ತಿ ಹೆಚ್.ಸಿ.(ಸಂ), ಗೋಪಾಲಗೌಡ ಶಾಂತವೇರಿ, ಅಂತರಂಗ ಬಹಿರಂಗ, ಅನನ್ಯ ಪ್ರಕಾಶನ, ಧಾರವಾಡ, 1999. , ಪು ಸಂ 141.