ಬೆಳಗಾವಿ ಪ್ರದೇಶದ ಕಾನೂನುಭಂಗ ಚಳುವಳಿ, ಸ್ವದೇಶಿ ಕರ ನಿರಾಕರಣ ಚಳುವಳಿ ಹಾಗೂ ಆರ್ಥಿಕ ಪರಿಣಾಮಗಳು
Main Article Content
Abstract
ಪ್ರಸ್ತುತ ಲೇಖನವು ಮುಂಬೈ-ಕರ್ನಾಟಕ ಪ್ರದೇಶದಲ್ಲಿ, ವಿಶೇಷವಾಗಿ ಬೆಳಗಾವಿ ವಿಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಯ ಮಹತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ. 1924ರ ಗಾಂಧೀಜಿಯವರ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಚಳುವಳಿಗೆ ಒಂದು ದಿಕ್ಸೂಚಿಯಾಯಿತು. ಇದರ ನಂತರ, ಈ ಪ್ರದೇಶದಲ್ಲಿ ಕಾನೂನುಭಂಗ ಚಳುವಳಿ (ಉಪ್ಪಿನ ಸತ್ಯಾಗ್ರಹ), ಕರ ನಿರಾಕರಣ ಚಳುವಳಿ, ಮತ್ತು ಸ್ವದೇಶಿ ಚಳುವಳಿಗಳು ತೀವ್ರಗೊಂಡವು. ಅಂಕೋಲಾ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರಗಳು ಬ್ರಿಟಿಷರ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದವು. ಸ್ವದೇಶಿ ಮತ್ತು ಖಾದಿ ಪ್ರಚಾರದಿಂದ ದೇಶೀಯ ಉದ್ಯಮಗಳು, ಗುಡಿ ಕೈಗಾರಿಕೆಗಳು ಬಲಗೊಂಡವು. ಈ ಎಲ್ಲಾ ಚಳುವಳಿಗಳು ಜನಸಾಮಾನ್ಯರನ್ನು ಸಂಘಟಿಸಿ, ಜಾಗೃತಿ ಮೂಡಿಸಿ, ದೇಶೀಯ ಆರ್ಥಿಕತೆಯನ್ನು ಬಲಪಡಿಸಿ, ಅಂತಿಮವಾಗಿ ಬ್ರಿಟಿಷರು ದೇಶ ಬಿಟ್ಟು ಹೋಗಲು ಪ್ರಮುಖ ಪ್ರೇರಣೆಯಾದವು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ಎನ್. ಪಿ. ಶಂಕರನಾರಾಯಣರಾವ್
ಕರ್ನಾಟಕದ ಇತಿಹಾಸ, ಸೂರ್ಯನಾಥ ಕಾಮತ್
ಅಂಬೇಡ್ಕರ್‌ರವರ ಬರಹಗಳು, ಭಾಷಣಗಳು.
ಜ್ಯೋತಿಬಾ ಪುಲೆ, ಡಾ. ಸದಾಶಿವ ಮಿರ್ಜಿ
ಸ್ತ್ರೀ ವಿಮೋಚನಾ ಹೋರಾಟಗಳು, ಮಂಗಲಾ ಕಾಳೆ, ಅನಾರ್ಯ ಪ್ರಕಾಶನ, ಧಾರವಾಡ, 1996
Freedom Struggle, Bipan Chandra, Amales Tripathi
Modern Indian History, V.D. Mahajan
A History of India Volume One, Romila Thapar
Karnataka and Balagavi, Gazetteer