ಹಾವೇರಿ ಜಿಲ್ಲೆಯಲ್ಲಿ ಅರಣ್ಯ ಸತ್ಯಾಗ್ರಹ
Main Article Content
Abstract
ಹಾವೇರಿ ಜಿಲ್ಲೆಯ ಅರಣ್ಯ ಸತ್ಯಾಗ್ರಹವು ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಬ್ರಿಟಿಷರ ಕಠಿಣ ಅರಣ್ಯ ಕಾನೂನು ಮತ್ತು ಗೋಮಾಳ ಮೇಲಿನ ತೆರಿಗೆಯ ವಿರುದ್ಧ ನಡೆದ ಒಂದು ಪ್ರಮುಖ ಅಹಿಂಸಾತ್ಮಕ ಚಳುವಳಿಯಾಗಿತ್ತು. ಶಿಗ್ಗಾವಿ, ಹಾನಗಲ್ಲ, ಬ್ಯಾಡಗಿ ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ಇದು ವ್ಯಾಪಿಸಿತ್ತು. ಆಲದಕಟ್ಟಿ, ಕಣ್ಣೂರು, ಸಂಗೂರು ಮುಂತಾದ ಗ್ರಾಮಗಳಲ್ಲಿ ಜನರು ‘ಹುಲಬನ್ನಿ ಲೀಲಾವ’ (ಗೋಮಾಳ ತೆರಿಗೆ) ನಿರಾಕರಿಸಿದರು. ಬಂಕಾಪುರದಲ್ಲಿ ಸೇಂದಿ ಗಿಡ ಕಡಿಯುವ ಕಾರ್ಯಕ್ರಮ ಹಾಗೂ ನೀರಲಗಿ ಗ್ರಾಮದ ಬಳಿ ಮರಗಳ ಸಂಹಾರ ನಡೆಯಿತು. ಮುದವೀಡು ಕೃಷ್ಣರಾಯರು ಬಂಕಾಪುರ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಹಿರೇಕೆರೂರು ತಾಲೂಕಿನ ನಾಗವಂದ ಗ್ರಾಮದ ಹಾರಿಕಟ್ಟಿ ಜಂಗಲ್‌ನಲ್ಲಿ ಕಾನೂನು ಭಂಗ ಮತ್ತು ಅರಣ್ಯ ನಾಶ ಮಾಡಲಾಯಿತು. ಈ ಸತ್ಯಾಗ್ರಹವು ಸ್ಥಳೀಯ ಜನರ ಹಕ್ಕು, ಸ್ವಾಭಿಮಾನ ಮತ್ತು ಪರಿಸರ ಪ್ರಜ್ಞೆಯನ್ನು ಎತ್ತಿ ಹಿಡಿಯಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಂಕರನಾರಾಯಣ ರಾವ್ ಎನ್. ಪಿ., ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ಪ್ರಕಾಶಕರು ನವಕರ್ನಾಟಕ ಪಬ್ಲಿಕೇಶನ್, ಬೆಂಗಳೂರು. 2011, ಪು ಸಂ 285.
ಕೆಂಚಳ್ಳಿ ಹೇಮಪ್ಪ ಬಸವಣ್ಯಪ್ಪ, ಹಾವೇರಿ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು. (ಅಪ್ರಕಟಿತ ಪಿ ಎಚ್ ಡಿ ಸಂಶೋಧನಾ ಮಹಾಪ್ರಬಂಧ ) ಕನ್ನಡ ವಿ ವಿ ಹಂಪಿ, ಪು ಸಂ 122
ಕಾಮತ್ ಸೂರ್ಯನಾಥ, ಧಾರವಾಡ ಜಿಲ್ಲಾ ಗ್ಯಾಸೆಟಿಯರ, ಬೆಂಗಳೂರು, 1995, ಪು ಸಂ 134.
ಅದೇ ಪು ಸಂ 286
ಅದೇ ಪು ಸಂ 287
ಕೆಂಚಳ್ಳಿ ಹೇಮಪ್ಪ ಬಸವಣ್ಯಪ್ಪ, ಹಾವೇರಿ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು. (ಅಪ್ರಕಟಿತ ಪಿ ಎಚ್ ಡಿ ಸಂಶೋಧನಾ ಮಹಾಪ್ರಬಂಧ) ಕನ್ನಡ ವಿ ವಿ ಹಂಪಿ, ಪು ಸಂ 124
ಅದೇ ಪು ಸಂ 125
ಅದೇ ಪು ಸಂ 126