ಬ್ರಿಟೀಷರ ವಿರುದ್ಧ ಹಲಗಲಿ ಬೇಡ ಜನಾಂಗದ ಹೋರಾಟ

Main Article Content

ಎಲ್.ಎಂ. ಕಲ್ಯಾಣಶೆಟ್ಟಿ

Abstract

ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೇಷ್ಠ–ಕನಿಷ್ಟ ಎನ್ನುವ ಭೇದಭಾವವನ್ನಳಿದು ಭಾಗವಹಿಸಿದವರೆಲ್ಲ ಮಹಾತ್ಮರಾಗದಿದ್ದರೂ ಹುತಾತ್ಮರಾಗಿದ್ದಾರೆ. ವೀರ ಪರಂಪರೆಯನ್ನು ವಿಶಿಷ್ಟವಾಗಿ ಬೆಳೆಸಿಕೊಟ್ಟ ನಾಡು ಈ ಭರತಭೂಮಿ. 1820 ರಿಂದ 1858ರ ಕಾಲಘಟ್ಟ ಭಾರತದ ಇತಿಹಾಸದಲ್ಲಿ ಅತೀ ಪ್ರಮುಖ ಘಟ್ಟ. ಇದೇ ಅವಧಿಯಲ್ಲಿ ಪ್ರಥಮ ಸಂಗ್ರಾಮದಂತಹ ಪ್ರಮುಖವಾದ ಘಟನೆಗಳು ಸಂಭವಿಸಿದವು. ಭಾರತ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹತ್ತಾರು ಪ್ರದೇಶದಲ್ಲಿ ಬ್ರಿಟೀಷರ ವಿರುದ್ಧ ಬಂಡಾಯ, ಚಳುವಳಿಗಳು, ಸಂಘರ್ಷಗಳು ನಡೆದುಹೋದವು. ಅವುಗಳಲ್ಲಿ ಕರ್ನಾಟಕದ ಬದಾಮಿ, ಕಿತ್ತೂರು, ಕೊಡಗು, ನರಗುಂದ, ಮುಂಡರಗಿ, ಸುರಪುರಗಳಲ್ಲಿ ಬ್ರಿಟೀಷರ ನೀತಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟಗಳು ನಡೆದವು. ಕೆಲವು ಹೋರಾಟಗಳು ಕ್ರಾಂತಿಕಾರಿ ಸ್ವರೂಪದ್ದಾಗಿದ್ದವು. ಇವೆಲ್ಲವುಗಳಿಗಿಂತಲೂ ಹಲಗಲಿಯ ಬೇಡರ ಹೋರಾಟ ಚಿರಸ್ಮರಣೀಯ. ಏಕೆಂದರೆ ಬ್ರಿಟೀಷರ ಶಸ್ತ್ರಾಸ್ತ್ರ ಕಾಯಿದೆ ವಿರುದ್ಧ ಶೂರತನದಿಂದ ಹೋರಾಟ ನಡೆಸಿದರು. ಬ್ರಿಟೀಷರಿಗೆ ತಮ್ಮ ಶಸ್ತ್ರಗಳನ್ನ ಒಪ್ಪಿಸಲು ನಿರಾಕರಿಸಿ ತಮ್ಮ ಜೀವಗಳನ್ನೇ ಪಣಕ್ಕಿಟ್ಟು ಹೋರಾಡಿದ ಘಟನೆ ಇತಿಹಾಸದ ಪುಟದಲ್ಲಿ ಸ್ಮರಣೀಯವಾದುದು. ಯಾರ ನೆರವೂ ಇಲ್ಲದೆ ಹೋರಾಡಿ ನೂರಾರು ಜನ ಪ್ರಾಣ ತೆತ್ತರು. ಬೇಟೆಯಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದ ಜನರ ಮೇಲೆ ಆಕ್ರಮಣ ನಡೆಸಿದ ಬ್ರಿಟೀಷರ ಕೃತ್ಯವನ್ನು ಯಾರೂ ಕ್ಷಮಿಸಲಾರರು.

Article Details

Section

Research Articles

Author Biography

ಎಲ್.ಎಂ. ಕಲ್ಯಾಣಶೆಟ್ಟಿ

ಉಪನ್ಯಾಸಕಿಯರು, ಕನ್ನಡ ವಿಭಾಗ, ಶ್ರೀ ಎಸ್.ಆರ್ ಕಂಠಿ ಪದವಿ ಮಹಾವಿದ್ಯಾಲಯ, ಮುಧೋಳ.

 

How to Cite

ಎಲ್.ಎಂ. ಕಲ್ಯಾಣಶೆಟ್ಟಿ. (2025). ಬ್ರಿಟೀಷರ ವಿರುದ್ಧ ಹಲಗಲಿ ಬೇಡ ಜನಾಂಗದ ಹೋರಾಟ. ಅಕ್ಷರಸೂರ್ಯ (AKSHARASURYA), 9(06), 30 to 37. https://aksharasurya.com/index.php/latest/article/view/1697

References

ಮಂಜುನಾಥ ಬೇವಿನಕಟ್ಟಿ, ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿಯ ಬಂಡಾಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2009

ಕ್ಯಾತನಹಳ್ಳಿ ರಾಮಣ್ಣ, ಫ್ಲೀಟರು ಸಂಗ್ರಹಿಸಿದ ಲಾವಣಿಗಳು, ಕೆ.ಆರ್.ಐ., ಮೈಸೂರು ವಿಶ್ವವಿದ್ಯಾಲಯ, 1991

ವಸಂತಕುಮಾರ್.ಬಿ.ವಿ., ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕಹಲಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, 2022

ಕ್ಯಾತನಹಳ್ಳಿ ರಾಮಣ್ಣ, ಹಲಗಲಿಯ ಬೇಡರು, ವಿಸ್ಮಯ ಪ್ರಕಾಶನ, ಮೈಸೂರು, 2009

ಜೀಲಾನಿ ಎಸ್.ಎ., ಬಿಜಾಪುರ ಜಿಲ್ಲಾ ಗೆಜೆಟಿಯರ್, ಕರ್ನಾಟಕ ಸರ್ಕಾರ, 2006

ಎಡ್ಗರ್ ಥರ್ಸ್ಟನ್, ಕಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರ್ನ ಇಂಡಿಯಾ, ಸಂ1, ಎ ಮತಿ ಬಿ, ಸರ್ಕಾರಿ ಮುದ್ರಣಾಲಯ, ಮದ್ರಾಸ್, 1909

ಇಂಡಿಯನ್ ಆಂಟಿಕ್ವೆರಿ, ಸಂ16, 1887

ಹಾಲಪ್ಪ.,ಜಿ.ಎಸ್. ಹಿಸ್ಟರಿ ಆಫ್ ಫ್ರೀಡಂ ಮೂವ್‌ಮೆಂಟ್ ಇನ್ ಕರ್ನಾಟಕ, ಸಂ1, ಮೈಸೂರು ಸರ್ಕಾರ, 1961

ರಾಮಸ್ವಾಮಿ ಎಸ್.ಆರ್., ಎ ಪ್ಯಾಸೇಜ್ ಥ್ರೂ ಇಂಡಿಯಾ, ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು 2022