ರಾಷ್ಟ್ರೀಯ ಚಳವಳಿಯಲ್ಲಿ ಡಾ. ಎಚ್. ನರಸಿಂಹಯ್ಯನವರ ಪಾತ್ರ

Main Article Content

ರಾಘವೇಂದ್ರ ಜಿ.ಎನ್.

Abstract

ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಅಮೂಲ್ಯವಾದದ್ದು ಮತ್ತು ಅನನ್ಯವಾದದ್ದು. ಈ ದಿಕ್ಕಿನಲ್ಲಿ ಗುರುತಿಸಬಹುದಾದ ಹಲವಾರು ಕನ್ನಡಿಗರು ಅಜರಾಮರರಾಗಿದ್ದಾರೆ. ಅಂತಹವರಲ್ಲಿ ಒಬ್ಬರು ಡಾ. ಹೊಸೂರು ನರಸಿಂಹಯ್ಯನವರು. ಸಮಾಜ ಸೇವಕರು, ಗಾಂಧಿವಾದಿ, ಸರಳಜೀವಿ, ಮಾನವತಾವಾದಿ, ವಿಚಾರವಾದಿ, ಅಧ್ಯಾಪಕರು, ಶಿಕ್ಷಣ ತಜ್ಞರು, ಕರ್ಮಯೋಗಿ, ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಕೊಡುಗೆಯನ್ನು ನೀಡಿದವರು, ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಯೌವನದ ಸಂದರ್ಭದಲ್ಲಿ ಸ್ವಾತಂತ್ರ್ಯದ ದೀವಿಗೆ ಪ್ರಜ್ವಲಿಸಲು ತಮ್ಮ ಅಮೂಲ್ಯವಾದ ಜೀವನವನ್ನು ಮುಡುಪಾಗಿಟ್ಟವರು. ಕ್ವಿಟ್ ಇಂಡಿಯಾ ಚಳುವಳಿ ಹಾಗೂ ಮೈಸೂರು ಚಲೋ ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನ ಬಿಡುಗಡೆಗಾಗಿ ದುಡಿದವರು. ನರಸಿಂಹಯ್ಯನವರು ಪ್ರಜಾಪ್ರಭುತ್ವದ ಮೌಲ್ಯಗಳು ಬೆಳೆಯಲು ತಮ್ಮ ಅಮೂಲ್ಯವಾದ ಜೀವನವನ್ನು ಸವಿಸಿದವರು. ಗಾಂಧೀವಾದಿಯಾಗಿ, ಸರಳ ಸಜ್ಜನಿಕೆಯ ಜೀವನವನ್ನು ಸಮಾಜಕ್ಕೆ ಸಂದೇಶವಾಗಿ ನೀಡಿದವರು. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಗೌರಿಬಿದನೂರು, ಬಾಗೇಪಲ್ಲಿ, ಬೆಂಗಳೂರು ಮತ್ತು ತಮ್ಮ ಹುಟ್ಟೂರು ಹೊಸೂರಿನಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ಕಾರಣಕರ್ತರು. ಬಡ ಕುಟುಂಬದಲ್ಲಿ ಹುಟ್ಟಿ ಅನೇಕ ಕಷ್ಟಗಳನ್ನು ಎದುರಿಸಿ ಅಧ್ಯಯನಶೀಲತೆಯನ್ನು ಬೆಳೆಸಿಕೊಂಡು, ದೇಶಭಕ್ತರಾಗಿ ರಾಷ್ಟ್ರೀಯ ಹೋರಾಟದ ಹಾದಿಯಲ್ಲಿ ನಡೆದು, ಸ್ವಾತಂತ್ರ್ಯಾನಂತರ ಕುಲಪತಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಂದು ಹೊಸ ದೆಸೆಯನ್ನು ಕೊಟ್ಟವರು ಇವರೇ. ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ವೈಜ್ಞಾನಿಕ ವಿಚಾರಗಳನ್ನು ಶಾಸನಸಭೆಯಲ್ಲಿ ಚರ್ಚಿಸಿ, ಅವುಗಳ ಅನುಷ್ಠಾನಕ್ಕಾಗಿ ದುಡಿದರು.

Article Details

Section

Research Articles

Author Biography

ರಾಘವೇಂದ್ರ ಜಿ.ಎನ್.

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ. ದಾಸರಹಳ್ಳಿ, ಬೆಂಗಳೂರು.

How to Cite

ರಾಘವೇಂದ್ರ ಜಿ.ಎನ್. (2025). ರಾಷ್ಟ್ರೀಯ ಚಳವಳಿಯಲ್ಲಿ ಡಾ. ಎಚ್. ನರಸಿಂಹಯ್ಯನವರ ಪಾತ್ರ. ಅಕ್ಷರಸೂರ್ಯ (AKSHARASURYA), 9(06), 16 to 20. https://aksharasurya.com/index.php/latest/article/view/1695

References

ಎಚ್. ನರಸಿಂಹಯ್ಯ, ಹೋರಾಟದ ಹಾದಿ (ಆತ್ಮಕಥೆ) ಅಭಿನವ, ವಿಜಯನಗರ, ಬೆಂಗಳೂರು, 1995

ಬಿ. ಗಂಗಾಧರಮೂರ್ತಿ, ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ, ಕರ್ನಾಟಕ ವಿಧಾನಮಂಡಲ ಗ್ರಂಥಾಲಯ ಸಮಿತಿ, ವಿಧಾನಸೌಧ, ಬೆಂಗಳೂರು, 2005

ಅಶೋಕ ಕುಮಾರ ರಂಜೇರೆ, ಡಾ. ಎಚ್. ನರಸಿಂಹಯ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, 1995

PARLIAMENTARY AFFAIRS AND LEGISLATION SECRETARIAT, NOTIFICATION NO. DPAL 30 SHASHANA 2025, BENGALURU, DATED: 07.04.2025