ಕನ್ನಡ ಭಾಷೆಯ ಕೊಡುಗೆ ವಿಶ್ವ ಸಾಹಿತ್ಯದೆಡೆಗೆ

Main Article Content

ವಿ. ವಾಯ್. ಪಾಟೀಲ

Abstract

ಪ್ರಪಂಚದಲ್ಲಿರುವ ಪ್ರತಿ ಪ್ರದೇಶಗಳ ಜನರ ಜೀವನ, ರೀತಿ-ನೀತಿ, ವಿಚಾರ ತಿಳಿಯಬೇಕಾದರೆ, ಅಲ್ಲಿ ಬಳಸಲ್ಪಡುವ ಭಾಷೆ ಮುಖ್ಯವಾಗಿರುತ್ತದೆ. ಆ ಭಾಷೆಯಲ್ಲಿ ರಚಿತವಾದ ಸಾಹಿತ್ಯದ ಮೂಲಕ ಅಲ್ಲಿನ ಜನರ ಸಂಸ್ಕೃತಿ, ಪ್ರಗತಿ, ವಿಚಾರಧಾರೆಗಳು ಮೂಡಿಬರುತ್ತವೆ. “ನಾಲಗೆ ತನ್ನ ಕುಲವನ್ನು ಅರುಹುತ್ತದೆ” ಎಂಬ ಮಾತಿನಂತೆ, “ಒಂದು ಭಾಷೆ ಅಲ್ಲಿನ ಜನರ ಭಾವನೆ, ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಗಳನ್ನು ತಿಳಿಸುತ್ತದೆ. ಅದರಂತೆ ಕನ್ನಡವೂ ಒಂದು ಪ್ರಬುದ್ಧ ಭಾಷೆಯಾಗಿದೆ. ಕನ್ನಡ ಭಾಷೆ ಕರ್ನಾಟಕದ ಜನತೆಯ ಜೀವನಾಡಿಯಾಗಿ, ಸರ್ಕಾರದ ಆಡಳಿತ ಭಾಷೆಯಾಗಿ ಬಳಕೆಯಾಗುತ್ತಿದೆ. ಕನ್ನಡ ಭಾಷೆ ಕರ್ನಾಟಕದ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅವರ ವಿಶಿಷ್ಟ ಸಂಸ್ಕೃತಿ, ಪರಂಪರೆ, ನೃತ್ಯ, ಸಂಗೀತ, ಕಲೆ ಇತ್ಯಾದಿಗಳನ್ನು ಸಂರಕ್ಷಿಸಿ, ವ್ಯಕ್ತಪಡಿಸುವ, ಆ ಮೂಲಕ ಮುಂದಿನ ಜನಾಂಗಕ್ಕೆ ಒದಗಿಸುವ ಜವಾಬ್ದಾರಿಯನ್ನು ಆ ಭಾಷೆಯ ಸಾಹಿತ್ಯ ಹೊಂದಿರುತ್ತದೆ. ಅದರಂತೆ ಕನ್ನಡ ಭಾಷೆಗೆ ಸುಮಾರು 1500 ವರ್ಷಗಳ ಸಾಹಿತ್ಯಿಕ ಚರಿತ್ರೆ ಇದೆ. ಈ ಅಗಾಧ ಚರಿತ್ರೆಯಲ್ಲಿ ಆಗಿಹೋದ ಶ್ರೇಷ್ಠ ಕವಿಗಳು, ಅವರ ಸಾಹಿತ್ಯ ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ, ತನ್ನ ಚರಿತ್ರೆ ಹಾಗೂ ವೈಶಿಷ್ಟ್ಯತೆಯಿಂದ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತವಾಗಿದ್ದು, ರಾಷ್ಟ್ರ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಆ ದಿಶೆಯಲ್ಲಿ ಕನ್ನಡದಲ್ಲಿ ಮೂಡಿಬಂದ ಸಾಹಿತ್ಯ ವಿಶ್ವಕ್ಕೆ ವಿಶೇಷವಾದ ಸಂದೇಶ ನೀಡುತ್ತದೆ.

Article Details

Section

Research Articles

Author Biography

ವಿ. ವಾಯ್. ಪಾಟೀಲ

ಉಪನ್ಯಾಸಕರು, ಕನ್ನಡ ವಿಭಾಗ, ಜೆ.ಎಸ್.ಎಸ್. ಸಂಸ್ಥೆಯ ಎಸ್. ಟಿ. ಸಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬನಹಟ್ಟಿ.

How to Cite

ವಿ. ವಾಯ್. ಪಾಟೀಲ. (2025). ಕನ್ನಡ ಭಾಷೆಯ ಕೊಡುಗೆ ವಿಶ್ವ ಸಾಹಿತ್ಯದೆಡೆಗೆ. ಅಕ್ಷರಸೂರ್ಯ (AKSHARASURYA), 9(02), 168 to 175. https://aksharasurya.com/index.php/latest/article/view/1612

References

ಮರುಳಸಿದ್ದಪ್ಪ ಕೆ, ನಾಗರಾಜ ಕಿ. ರಂ., (1979), ಸಂಪಾದಕರು. ವಚನ ಕಮ್ಮಟ - (ಪ್ರಿಂಟೆಕ್ ಪ್ರಿಂಟರ್ಸ, ಬೆಂಗಳೂರು)

ಕೇಶವ ಭಟ್ಟ. ಎಂ. (2006), ಸಂಪಾದಕರು, ನಾಡೋಜ ಪಂಪ: (ಮುಳಿಯ ತಿಮ್ಮಪ್ಪಯ್ಯ). (ಮಯೂರ ಪ್ರಿಂಟ್ ಆಡ್ಸ್, ಬೆಂಗಳೂರು)

ಬಸವರಾಜು ಎಲ್ (2003), ಪಂಪನ ಆದಿಪುರಾಣ ಕಥಾಮೃತ: (ಗೀರಾ ಬುಕ್ ಹೌಸ್, ಮೈಸೂರು)

ಕುವೆಂಪು. (1933), ಪಾಂಚಜನ್ಯ. ಉದಯ ರವಿ ಪ್ರಕಾಶನ, ಮೈಸೂರು

ಶ್ರೀ ಉತ್ತಂಗಿ ಚನ್ನಪ್ಪ., (1999), ಸರ್ವಜ್ಞನ ವಚನಗಳು ಸಂಪಾದಕರು. ಪ್ರಕಾಶ ಸಾಹಿತ್ಯ, ಬೆಂಗಳೂರು

ಶೇಷಗಿರಿರಾವ್ ಎಲ್. ಎಸ್., ಡಾ. ಚಿದಾನಂದಮೂರ್ತಿ ಎಂ., ಚಂದ್ರಶೇಖರ ರಾ. ನಂ., ಕನ್ನಡ ಕನ್ನಡಿಗ ಕರ್ನಾಟಕ