ಕನ್ನಡದ ಕಟ್ಟಾಳು: ಫಕೀರಪ್ಪ ಹಳಕಟ್ಟಿಯವರು
Main Article Content
Abstract
ಈ ನೆಲದ ಇತಿಹಾಸವನ್ನು ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಅಧ್ಯಯನ ಮಾಡುವ ಮಹತ್ವದ ಕಾರ್ಯದಲ್ಲಿ ಲಿಖಿತ ದಾಖಲೆಯಾದ ಸಾಹಿತ್ಯದ ಒಳನೋಟಗಳು ಅಪಾರ ನೆರವು ನೀಡುತ್ತವೆ. ಹಾಗೆಯೇ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕನಗೈದಾಗ ಆಯಾ ಕಾಲದ ಸಾಮಾಜಿಕ ಸನ್ನಿವೇಶದಲ್ಲಿ ನಡೆಯುವ ಸಂಘರ್ಷಗಳ ಅಭಿವ್ಯಕ್ತಿಯಾಗಿ ಅಧ್ಯಯನ ಮಾಡುತ್ತಿರುವುದು ಕೂಡ ವಾಸ್ತವದಲ್ಲಿ ಕಂಡುಬರುತ್ತದೆ. ಇದಕ್ಕೆ ಹನ್ನೆರಡನೇ ಶತಮಾನದ ಶರಣರ ವಚನ ಘಟ್ಟವು ಕೂಡ ಹೊರತಾಗಿಲ್ಲ. ವಚನ ಸಾಹಿತ್ಯದ ಸುಗ್ಗಿಯ ಕಾಲದಲ್ಲಿ ಮೈಮುರಿದು ಎದ್ದ ಸಾಮಾಜಿಕ ಆಂದೋಲನವು ಅಂದಿನ ಸಮಾಜಕ್ಕೆ ಹೊಸ ತಿರುವು ಹಾಗೂ ಅರಿವನ್ನು ತಂದುಕೊಟ್ಟಿತು. ವಚನ ಸಾಹಿತ್ಯವು ಜಾಗತಿಕ ಮೌಲ್ಯಗಳನ್ನು ಒಳಗೊಂಡಿದೆ. ಇದು ಜಾತಿ, ಮತ, ಧರ್ಮವನ್ನು ಮೀರಿದ್ದು, ಸಮಾನತೆ ಸಾರುವ ಏಕೈಕ ಸಂವಿಧಾನ. ಇಂತಹ ಹಿರಿಮೆ, ಗರಿಮೆ ಹೊಂದಿರುವ ವಚನ ಸಾಹಿತ್ಯವು ಭಾಷೆ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಚಾರ-ವಿಚಾರಗಳನ್ನು ಒತ್ತಟ್ಟಿಗೆ ನೋಡಿದಾಗ ಹೊಸತನದ ಬೆಳಕಿನ ಪ್ರಭಾವಳಿ ಎಲ್ಲೆಡೆಯಲ್ಲಿ ಹರಡಿದ್ದನ್ನು ವಚನ ಪಿತಾಮಹ ಫ.ಗು. ಹಳಕಟ್ಟಿಯವರು ತಮ್ಮ ಶಿವಾನುಭವ, ನವಕರ್ನಾಟಕ ಪತ್ರಿಕೆಗಳ ಮೂಲಕ, ಗ್ರಂಥ ಸಂಪಾದನೆಗಳ ಮೂಲಕ ಕಟ್ಟಿಕೊಟ್ಟಿದ್ದನ್ನು ಕಾಣಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪಾಟೀಲ ಬಿ.ಎಂ., (2023) ಬಸವ ಲೋಕ, ದ್ವೈಮಾಸಿಕ ಪತ್ರಿಕೆ, ಸಂಪುಟ 11. ಸಂಚಿಕೆ 3. ಪ್ರ. ಫ.ಗು.ಹಳಕಟ್ಟಿ ಟ್ರಸ್ಟ್ ರಯಬಾಗ ರಸ್ತೆ, ನಾಗರಾಳ.
ಪಾಟೀಲ ಬಿ.ಎಂ., (2006) ವಚನ ಗುಮ್ಮಟ. ಪ್ರ. ಹಿತಚಿಂತಕ ಪ್ರಕಾಶನ, ಮಹಾಲಿಂಗಪುರ.
ರಾಠೋಡ ಪಂಡಿತ., (2014) ಫ.ಗು. ಹಳಕಟ್ಟಿಯವರ ಪತ್ರಿಕಾ ಸಾಹಿತ್ಯ. ಪ್ರ. ಶುಭಚಂದ್ರ ಪ್ರಕಾಶನ ಧಾರವಾಡ.
ನಂದೀಮಠ ಎಸ್.ಸಿ., (1964) ವಚನ ಪಿತಾಮಹರು ಕಣ್ಮರೆಯಾದರು, (ಸಂ) ವೀರಶೈವ, ಸಂಪಾದಕೀಯ. ಸಂ 5.
ಸಂಕನಾಳ ಯಲಗುರೇಶ., ವಚನಪಿತಾಮಹ ರಾವ್ ಬಹದ್ದೂರ ಡಾ. ಫ.ಗು. ಹಳಕಟ್ಟಿ, ಶರಣ ಪತ್ರಿಕೆ, ಸಂ.23, ಸಂ. 3, ಪುಟ 120-124.
ಗುಂಜಾಳ್ ಶಿವಪುತ್ರಪ್ಪ., (1980) ವಚನಶಾಸ್ತ್ರ ಪಿತಾಮಹ ಶರಣ ಫ.ಗು. ಹಳಕಟ್ಟಿ, ಕಲ್ಯಾಣ ಕಿರಣ, ಸಂ.6.
ವಚನ ಪಿತಾಮಹರನ್ನು ನೆನೆದು, ಸಂಪಾದಕರು, ಶಿವಾನುಭವ (ಬಸವತತ್ವ ಪ್ರಚಾರಸಮಿತಿ ಧಾರವಾಡ), ಸಂ. 11, ಸಂ.5-6.
ಮಾಳವಾಡ ಸ.ಸ., (1980) ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ, ಉದಯ ಸುವರ್ಣಮಹೋತ್ಸವ ಸ್ಮರಣ ಸಂಚಿಕೆ.
ಬಡಿಗಣ್ಣವರು ಸದಾಶಿವ ವಿ., (1980) ವಚನ ಪಿತಾಮಹ ಡಾ. ಹಳಕಟ್ಟಿಯವರು, ಶರಣ ಪತ್ರಿಕೆ, ಸಂ. 6, ಸಂ. 4.