ಕನ್ನಡಕ್ಕಾಗಿ ಬಾಳಿದ ಚಳುವಳಿಗಾರ: ತಮ್ಮಣ್ಣಪ್ಪ ಚಿಕ್ಕೋಡಿಯವರು

Main Article Content

ರತ್ನಾ ಪಾಟೀಲ

Abstract

ತಮ್ಮಣ್ಣಪ್ಪನಂತವರು ಕನ್ನಡ ಕೆಲಸಕ್ಕಾಗಿ ಟಂಕ ಕಟ್ಟಿ ನಿಲ್ಲದೆ ಇದ್ದರೆ ಉತ್ತರ ಕರ್ನಾಟಕ ಸಂಪೂರ್ಣ ಮರಾಠಿಮಯವಾಗುತ್ತಿತ್ತು, ಅದರಲ್ಲೂ ಜಮಖಂಡಿ, ಮುಧೋಳ್, ಸಾಂಗ್ಲಿ ಸಂಸ್ಥಾನಗಳಲ್ಲಿ ಕನ್ನಡದ ಅಸ್ತಿತ್ವವೇ ಇಲ್ಲದಂತಾಗುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಮರಾಠಿ ದಬ್ಬಾಳಿಕೆಯನ್ನು ಕಂಡು ತಮ್ಮಣ್ಣಪ್ಪನವರು ತತ್ತರಿಸಿ ಹೋದರು. ಕನ್ನಡದ ದುಃಸ್ಥಿತಿಯನ್ನು ಕಂಡು ಅದರ ಉಳಿವಿಗಾಗಿ ಟಂಕ ಕಟ್ಟಿ ನಿಂತರು. ಕೇವಲ ಮುಲ್ಕಿ ಪರೀಕ್ಷೆಯನ್ನು ಪಾಸು ಮಾಡಿದ್ದರು. ತಮ್ಮಣ್ಣಪ್ಪನವರು ಬಹಳ ಬುದ್ಧಿವಂತರು, ಜ್ಞಾನದಾಹಿಗಳು, ಸಮಾಜೋಭಿವೃದ್ಧಿಗಾಗಿ ಹಂಬಲಿಸಿದವರು. ಕನ್ನಡ ನಾಡು ನುಡಿ ಸಂಸ್ಕೃತಿಯ ಏಳಿಗೆಗಾಗಿ ನಾಡಿನ ಹಲವಾರು ಗಣ್ಯರೊಡನೆ ಕೂಡಿ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿದರಲ್ಲದೆ ಸಕ್ರಿಯವಾಗಿ ಪಾಲ್ಗೊಂಡು ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲು ಇಡೀ ತಮ್ಮ ಬದುಕನ್ನು ಸವಿಸಿದವರು. ಗಡಿನಾಡಿನ ಕನ್ನಡದ ಹುಲಿ ಎಂದು ಕೀರ್ತಿ ಗಳಿಸಿದರು.

Article Details

Section

Research Articles

Author Biography

ರತ್ನಾ ಪಾಟೀಲ

ಉಪನ್ಯಾಸಕರು, ಎಸ್.ಟಿ. ಸಿ ಮಹಾವಿದ್ಯಾಲಯ, ಬನಹಟ್ಟಿ.

How to Cite

ರತ್ನಾ ಪಾಟೀಲ. (2025). ಕನ್ನಡಕ್ಕಾಗಿ ಬಾಳಿದ ಚಳುವಳಿಗಾರ: ತಮ್ಮಣ್ಣಪ್ಪ ಚಿಕ್ಕೋಡಿಯವರು. ಅಕ್ಷರಸೂರ್ಯ (AKSHARASURYA), 9(02), 142 to 145. https://aksharasurya.com/index.php/latest/article/view/1607

References

ಕುಳ್ಳಿ ಜಯವಂತ., (1980), ತಮ್ಮನಪ್ಪ ಚಿಕ್ಕೋಡಿ

ಅಕ್ಕಿ ಉಮಾ ಕೊಟ್ಟಪ್ಪ., ಚಿಕ್ಕೋಡಿ ಕುಟುಂಬ

ಕುಳ್ಳಿ ಜಯವಂತ್ ಎಸ್., (2017), ತಮ್ಮನಪ್ಪ ಚಿಕ್ಕೋಡಿ., ಉಷಾ ಪರಿಣಯ