ಸಾಮಾಜಿಕ ಸಮಾನತೆಯಲ್ಲಿ ಬಸವೇಶ್ವರರ ಚಿಂತನೆ
Main Article Content
Abstract
ಜನಸಾಮಾನ್ಯರ ಆಡು ಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ ಕಹಳೆ ಮೊಳಗಿಸಿದ ಬಸವಣ್ಣ ಬಾಲ್ಯದಿಂದಲೇ ಅವರ ಚಿಂತನಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸ್ವಭಾವ ಎದ್ದು ಕಾಣುತ್ತಿತ್ತು. ಉದಾಹರಣೆಗೆ 8ನೇ ವಯಸ್ಸಿನಲ್ಲಿ ಹೆತ್ತವರು ಉಪನಯನ ಮಾಡಲು ಮುಂದಾದಾಗ ಬಸವಣ್ಣ ಅದನ್ನು ನಿರಾಕರಿಸಿದರು. ಅಷ್ಟೇ ಅಲ್ಲ, ಕುಟುಂಬವನ್ನೇ ತೊರೆದು ಕೂಡಲಸಂಗಮಕ್ಕೆ ನಡೆದರು. ಅಲ್ಲಿ ಜಾತವೇದ ಮುನಿಗಳ ಶಿಷ್ಯರಾಗಿ ವೇದ ಮತ್ತು ಉಪನಿಷತ್ತುಗಳ ಅಧ್ಯಯನದಲ್ಲಿ ತೊಡಗಿದರು. ಸಮತೋಲನಕ್ಕಾಗಿ ಹೋರಾಡಿದ ನೇತಾರ, ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಧಿಕ್ಕರಿಸಿ ಗುಣಾತ್ಮಕ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕರಾಗಿದ್ದಾರೆ. ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿ, ತಮ್ಮದೇ ನೆಲೆಯಿಂದ ಯುಗಮಾನದ ಶಕ್ತಿಯಾಗಿ, ವಿಶ್ವಗುರು, ಭಕ್ತಿ ಭಂಡಾರಿ, ನಡೆದಾಡುವ ದೈವ, ಜಗಜ್ಯೋತಿಯಾಗಿ ನಿಂತಿರುವ ಸಾಂಸ್ಕೃತಿಕ ನಾಯಕರೆಂದರೆ ಬಸವಣ್ಣನವರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿದಾನಂದಮೂರ್ತಿ ಎಂ. (1967), ಬಸವಣ್ಣನವರು. ಸಪ್ನಾ ಬುಕ್ ಹೌಸ್, ಬೆಂಗಳೂರು;
ಬಸವರಾಜ ಕಡ್ಲಿ. (2020), ಶರಣ ಸಂಸ್ಕೃತಿ. ಬಸವ ಜ್ಯೋತಿ ಪ್ರಕಾಶನ, ಜಮಖಂಡಿ.
ಸಮಗ್ರ ವಚನ ಸಂಪುಟ. (2021) ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಹಳಕಟ್ಟಿ ಫ.ಗು. (2007), ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ;
ನಾಗೇಶ ಎಚ್.ವಿ. (2021), ಸಾಮಾಜಿಕ ಚಿಂತನೆ: ಒಂದು ಅಧ್ಯಯನ. ಭಾರತ ಪ್ರಕಾಶನ, ಧಾರವಾಡ;
ಕಲ್ಮಠ ಶೀಲವಂತರ. (2006), ಭಾರತೀಯ ರಾಜನೀತಿ ವಿವೇಚಕರು: ತುಲನಾತ್ಮಕ ಸರ್ಕಾರ ಮತ್ತು ರಾಜಕೀಯ. ವಿದ್ಯಾನಿಧಿ ಪ್ರಕಾಶನ, ಗದಗ;
ಶಂಕರ ರಾವ್. (2012), ಸಾಮಾಜಿಕ ಚಿಂತನೆಯ ಅಧ್ಯಯನ. ಜೈ ಭಾರತ್ ಪ್ರಕಾಶನ, ಮಂಗಳೂರು;
ಗುರುರಾಜ ಜೋಶಿ & ಮಹಾದೇವ ಜೋಶಿ, (2016), ಭಾರತದ ರಾಜನೀತಿ ವಿವಚಕರು: ತುಲನಾತ್ಮಕ ಸರ್ಕಾರ ಮತ್ತು ರಾಜಕೀಯ. ರೂಪಾ ಪ್ರಕಾಶನ, ಧಾರವಾಡ;