ಡಾ. ಬಿ. ಆರ್. ಅಂಬೇಡ್ಕರವರ ದೃಷ್ಟಿಕೋನದಲ್ಲಿ ಮಹಿಳಾ ಸಬಲೀಕರಣ
Main Article Content
Abstract
ಮಹಿಳಾ ಸಬಲೀಕರಣ ಎನ್ನುವುದು ಮಹಿಳೆಯರನ್ನು ಹಳೆಯ ಸಮಾಜದಿಂದ ಹೊರಗಡೆ ತಂದು ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ, ಗೌರವ ನೀಡುವುದು. ಸಬಲೀಕರಣವು ಡಾ. ಬಿ. ಆರ್. ಅಂಬೇಡ್ಕರವರ ದೃಷ್ಟಿಯಲ್ಲಿ ಒಂದು ಮಹತ್ವವಾದ ಹೆಜ್ಜೆಯನ್ನು ಹಾಕುವುದು ಆಗಿತ್ತು. ಮಹಿಳೆಯರಿಗಾಗಿ ಸಂವಿಧಾನದ ಮೂಲಭೂತ ಹಕ್ಕುಗಳ ಮೂಲಕ ಹಲವಾರು ಹಕ್ಕುಗಳನ್ನು ಜಾರಿಗೆ ತಂದರು. ಅಲ್ಲದೆ ಮಹಿಳೆಯರಿಗೆ ವಿಶೇಷವಾದ ಆಸ್ತಿ ಹಕ್ಕು (ಹಿಂದೂ ಕೋಡ್ ಬಿಲ್) ಜಾರಿಗೆ ತಂದಿದ್ದರು. ಪ್ರಾಚೀನ ಕಾಲದಲ್ಲಿ ಮಹಿಳೆಯರ ಮೇಲೆ ಎಸಗುವ ಕೃತ್ಯಗಳಿಗೆ ಕಡಿವಾಣ ಹಾಕಿ ಕಾನೂನು ಕ್ರಮಗಳನ್ನು ಅನುಸರಿಸಿ ಮಹಿಳೆಯರಿಗೆ ಶಿಕ್ಷಣ, ಸಂಘಟನೆ, ಹೋರಾಟ ತತ್ವದ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಹಕ್ಕುಗಳ ಪರಿಪೂರ್ಣ ರಕ್ಷಕರೆಂದು ಪರಿಗಣಿಸಲ್ಪಟ್ಟ ವ್ಯಕ್ತಿ. ಅವರ ದೃಷ್ಟಿಕೋನದಲ್ಲಿ ಮಹಿಳಾ ಸಬಲೀಕರಣ ಕೇವಲ ಮಹಿಳೆಯರ ಅಭಿವೃದ್ಧಿಯೇ ಅಲ್ಲ, ಅದು ಸಮಾಜದ ಒಟ್ಟಾರೆ ಪ್ರಗತಿಯ ಪ್ರಮುಖ ಅಂಶವಾಗಿದೆ. ಅಂಬೇಡ್ಕರ್ ಅವರ ಶಿಕ್ಷಣ, ಹಕ್ಕು ಮತ್ತು ಶಕ್ತಿ ಕುರಿತ ನಿಟ್ಟಿನ ಪ್ರತಿಪಾದನೆಗಳು, ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯ ನೀಡುವತ್ತ ಗಮನ ಹರಿಸುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮರ್ಜಿ. ಸ., (2022), ಡಾ. ಬಿ. ಆರ್. ಅಂಬೇಡ್ಕರ್ ವೀಸಾದ ನಿರೀಕ್ಷೆಯಲ್ಲಿ ನೆನಪುಗಳು. ಲಡಾಯಿ ಪ್ರಕಾಶನ, ಗದಗ.
ನ್ಯಾಯಮೂರ್ತಿ ನಾಗಮೋಹನದಾಸ್. ಹೆಚ್. ಎನ್., (2022) ಸಂವಿಧಾನ ಮತ್ತು ವಚನಗಳು, ನವ ಕರ್ನಾಟಕದ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್.
ಪರಿಹಾರ. ಎಂ. ಎಲ್., ಅಂಬೇಡ್ಕರ್ ಅವರ ಜೀವನ ಮತ್ತು ಸಂದೇಶ, ವಾಸನ ಪಬ್ಲಿಕೇಶನ್.
Singh. S. N., (2016), Dr. B. R. Ambedkar On Women Empowerment, Publisher, Regal Publications.