ಸಾಮಾಜಿಕ ಪರಿವರ್ತನೆಗೆ ಶ್ರೀ ಬಸವೇಶ್ವರ ಮತ್ತು ಮಹಾತ್ಮ ಜ್ಯೋತಿಬಾಪುಲೆರವರ ಕೊಡುಗೆಗಳು

Main Article Content

ಶ್ರೀಧರ ಸಿ. ಕಾಂಬಳೆ

Abstract

ಭಾರತದ ಸಮಾಜೋ-ಧಾರ್ಮಿಕ ಇತಿಹಾಸದಲ್ಲಿ ಬಸವೇಶ್ವರ, ಜ್ಯೋತಿಬಾ ಫುಲೆ, ಅಂಬೇಡ್ಕರ್ ಅವರ ಚಿಂತನೆಗಳಿಗೆ, ಅವರದೇ ಆದ ಮಹತ್ವವಿರುವುದು ನಾವೆಲ್ಲ ಬಲ್ಲೆವು. ಸನಾತನರ ಬುಡಕ್ಕೆ ನಡುಕ ಹುಟ್ಟಿಸಿದ ಬುದ್ಧ-ಬಸವಾದಿ ಶರಣರ ಈ ಎರಡು ಚಿಂತನ ಧಾರೆಗಳು ನಾಡಿನಗಲಕ್ಕೂ ಶೋಷಿತರ ಬಾಳಿಗೆ ಬೆಳಕು ನೀಡುವಲ್ಲಿ ಇಂದಿಗೂ ಹೆಣಗಾಡುತ್ತಲೇ ಇವೆ.
ಧಾರ್ಮಿಕ-ಸಾಮಾಜಿಕ ನೆಲೆಯ ಮಹಾನ್ ಸಾಧಕರ ಚಿಂತನೆಗಳನ್ನು ಮಡಿವಂತರು ಕಾಲ ಸಂದರ್ಭದಲ್ಲಿ ಅಡಗಿಸುತ್ತಾ ಬಂದಿರುವ ಅನೇಕ ಉದಾಹಣೆಗಳನ್ನು ನಾವು ಪಟ್ಟಿ ಮಾಡುತ್ತಾ ಹೋದರೆ ಚರಿತ್ರೆ ನಮಗೆ ದಾಖಲೆಯನ್ನು ಒದಗಿಸುತ್ತದೆ. ಹೊಲಗೇರಿಯನ್ನು ಶಿವಾಲಯ ಎಂದು ಕರೆದ ಬಸವಣ್ಣ ಅಸ್ಪೃಶ್ಯರಲ್ಲಿದ್ದ ಕೀಳು ಭಾವನೆಯನ್ನು ದೂರ ಮಾಡಿದ. “ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಎಂದೆನಿಸಯ್ಯ” ಎಂದು ಹೇಳುತ್ತಲೇ ಜಾತಿಯನ್ನು ಮೈಮನದಲ್ಲಿ ತುಂಬಿಕೊಂಡವರಿಗೆ ತನ್ನ ಅಂತಃಕರಣದಿಂದಲೇ ಸಮಾನತೆಯ ಔನ್ನತ್ಯವನ್ನು ಪ್ರತಿಪಾದಿಸಿದ ಬುದ್ಧ, ಬಸವ, ಫುಲೆ, ಅಂಬೇಡ್ಕರ್ ಇವರನ್ನು ನೆನೆಯುವುದೇ ಒಂದು ಭಾಗ್ಯ. ಅದರಲ್ಲೂ ಅವರು ಮಾಡಿದ ಸಾಧನೆಗಳನ್ನು ಮನನ ಮಾಡಿಕೊಳ್ಳುವುದೆಂದರೆ ಅದೊಂದು ಪರಮಾನಂದದ ಕೆಲಸ. ಅಂತಹ ಆದರ್ಶ ಜೀವಿಗಳು ಜನತೆಗೆ, ನಾಡಿಗೆ, ದೇಶಕ್ಕೆ ದೊಡ್ಡ ಮಾದರಿಯಾಗಿದ್ದಾರೆ.

Article Details

Section

Research Articles

Author Biography

ಶ್ರೀಧರ ಸಿ. ಕಾಂಬಳೆ

ಇತಿಹಾಸ ಸಹ ಪ್ರಾಧ್ಯಾಪಕರು, ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯ, ಸಿಂದಗಿ.

How to Cite

ಶ್ರೀಧರ ಸಿ. ಕಾಂಬಳೆ. (2025). ಸಾಮಾಜಿಕ ಪರಿವರ್ತನೆಗೆ ಶ್ರೀ ಬಸವೇಶ್ವರ ಮತ್ತು ಮಹಾತ್ಮ ಜ್ಯೋತಿಬಾಪುಲೆರವರ ಕೊಡುಗೆಗಳು. ಅಕ್ಷರಸೂರ್ಯ (AKSHARASURYA), 9(01), 185 to 193. https://aksharasurya.com/index.php/latest/article/view/1582

References

ಸಿದ್ಧಲಿಂಗಯ್ಯ, ವಚನ ಚಳುವಳಿ ಮತ್ತು ದಲಿತರು, ಪುಟ 65

ಬಸವನಾಳ ಎಸ್.ಎಸ್: ಬಸವೇಶ್ವರರ ವಚನಗಳು, ಪುಟ 12-13

ಪೋತೆ ಎಚ್.ಟಿ: ಅವೈದಿಕ ಚಿಂತನೆ, ಪುಟ 25

ಸಬರದ ಬಸವರಾಜ: ಬಸವೇಶ್ವರ ಮತ್ತು ಪುರಂದರದಾಸ, ಪುಟ 14

ಕೆ.ಕೆ. ಕವಲೇಕರ: ನಾನ್ ಬ್ರಾಹ್ಮಿಣ ಮೂಮೆಂಟ್ ಇನ್ ಸೌಥ್ ಇಂಡಿಯಾ, ಪುಟ 46

ಕೀರ್ ಧನಂಜಯ್: ಮಹಾತ್ಮ ಜ್ಯೋತಿರಾವ ಫುಲೆ: ಫಾದರ್ ಆಫ್ ಇಂಡಿಯನ್ ಸೋಶಿಯಲ್ ರೆವಲ್ಯೂಷನ್, ಪುಟ 18-20

ಎನ್.ಆರ್. ಶಿವರಾಂ: ಡಾ. ಅಂಬೇಡ್ಕರ್ ದರ್ಶನ, ಪುಟ 25-26

ಕೀರ್ ಧನಂಜಯ್: ಡಾ. ಅಂಬೇಡ್ಕರ್ ಲೈಫ್ ಆ್ಯಂಡ್ ಮಿಷನ್, ಪುಟ 45-48

ಮ.ನ. ಜವರಯ್ಯ: ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ, ಪುಟ 35-36