ಬೆಳಗಾವಿ ಪ್ರದೇಶದ ಬ್ರಾಹ್ಮಣೇತರ ಚಳುವಳಿ

Main Article Content

ಎಂ.ಎಸ್. ಮಠಪತಿ

Abstract

1873ರಲ್ಲಿ ಮಹಾತ್ಮಾ ಪುಲೆಯವರಿಂದ ಆರಂಭಗೊಂಡ ಸತ್ಯಶೋಧಕ ಸಮಾಜ ಚಳುವಳಿಯು ಆಧುನಿಕ ಭಾರತದ ಬ್ರಾಹ್ಮಣೇತರ ಚಳುವಳಿಯಾಗಿದೆ. ಅವರ ಬೆಂಬಲಿಗರು ಹಾಗೂ ಅನುಯಾಯಿಗಳಿಂದ ಅದು ಇಡೀ ಮಹಾರಾಷ್ಟ್ರ, ಉತ್ತರ ಕರ್ನಾಟಕ, ಮೈಸೂರು ಹಾಗೂ ಮದ್ರಾಸ್ ಪ್ರದೇಶಗಳಿಗೂ ಹರಡಿತು. ಈ ಚಳುವಳಿಯು ಧಾರವಾಡ, ಬಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿತ್ತು. ಈ ಚಳುವಳಿಯ ಇನ್ನೊಂದು ಸ್ವರೂಪ ಎಂದರೆ ಕೇವಲ ಬ್ರಾಹ್ಮಣ ವಿರೋಧಿ ಚಳುವಳಿ ಆಗಿರದೆ ಅದು ಶೇಡಜಿಗಳ ಅಂದರೆ ‘ಬನಿಯಾ’ ಅಥವಾ ‘ಲೇವಾದೇವಿದಾರ’ರ ವಿರೋಧಿ ಚಳುವಳಿಯಾಗಿತ್ತು. ಬೆಳಗಾವಿ ಪ್ರದೇಶದಲ್ಲಿ ಬ್ರಾಹ್ಮಣೇತರ ಚಳುವಳಿಯು ಆರಂಭಗೊಂಡ ಹಿನ್ನಲೆಯಲ್ಲಿ ಹಲವಾರು ರೀತಿಯಲ್ಲಿ ಚಳುವಳಿಗಳು ಆರಂಭಗೊಂಡವು, ಇವುಗಳಿಂದ ಹಲವಾರು ವ್ಯಕ್ತಿಗಳು ಚಳವಳಿಯ ಪ್ರಮುಖ ಉದ್ದೇಶಗಳನ್ನು ತಿಳಿದುಕೊಂಡು, ಚಳುವಳಿಯಲ್ಲಿ ಪಾಲ್ಗೊಂಡರು. ಇದರಿಂದ ಹಲವಾರು ರೀತಿಯ ಸಂಘ ಸಂಸ್ಥೆಗಳು ಸ್ಥಾಪನೆಗೊಂಡವು. ಈ ಕಾರಣಗಳಿಂದ ಬ್ರಾಹ್ಮಣೇತರ ವರ್ಗಗಳಿಗೆ ಅನುಕೂಲವಾಯಿತು.

Article Details

Section

Research Articles

Author Biography

ಎಂ.ಎಸ್. ಮಠಪತಿ

ಪ್ರಾಚಾರ್ಯರು, ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ, ಬನಹಟ್ಟಿ.

How to Cite

ಎಂ.ಎಸ್. ಮಠಪತಿ. (2025). ಬೆಳಗಾವಿ ಪ್ರದೇಶದ ಬ್ರಾಹ್ಮಣೇತರ ಚಳುವಳಿ. ಅಕ್ಷರಸೂರ್ಯ (AKSHARASURYA), 9(01), 181 to 184. https://aksharasurya.com/index.php/latest/article/view/1581

References

ಮಠಪತಿ ಎಂ.ಎಸ್ (2025)., ವಸಾಹತುಕಾಲೀನ ಬೆಳಗಾವಿ ಜಿಲ್ಲೆ : ಚಾರಿತ್ರಿಕ ಹಾಗೂ ಸಮಾಜೋ-ಆರ್ಥಿಕ ಅಧ್ಯಯನ (1799-1947) ಪಿ.ಎಚ್‌ಡಿ ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು. 83-87

ಜೇಮ್ಸ್ ಎಂ. ಕ್ಯಾಂಪಬೆಲ್ಲ್., ಗ್ಯಾಜೆಟಿಯರ್ ಆಫ್ ಇಂಡಿಯಾ. ಬೆಳಗಾವಿ. ಪು. 375-82.

ಜೇಮ್ಸ್ ಎಂ. ಕ್ಯಾಂಪಬೆಲ್ಲ್., ಗ್ಯಾಜೆಟಿಯರ್ ಆಫ್ ಇಂಡಿಯಾ. ಬೆಳಗಾವಿ. ಪುಟ. 401-406

ಶೀಲಾಧರ ಮುಗಳಿ ಮತ್ತು ಖಾತೇದಾರ ಎ.ಡಿ., (2010), ಬೆಳಗಾವಿ ಜಿಲ್ಲೆಯ ಬ್ರಾಹ್ಮಣೇತರ ಚಳುವಳಿ, ಪೂರ್ವೋಕ್ತ, ಪು. 580

ಎಚ್. ಎಸ್. ಗೋಪಾಲರಾವ್., (2012), ಕರ್ನಾಟಕ ಏಕೀಕರಣ ಇತಿಹಾಸ. ಪು. 56.