ಹುನಗುಂದ ಪ್ರದೇಶದ ನಿರ್ಲಕ್ಷಿತ ಐತಿಹಾಸಿಕ ಸ್ಮಾರಕಗಳು

Main Article Content

ಶಿವಾನಂದ ಆರ್. ನಾಗಣ್ಣವರ

Abstract

ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆಯ ಒಂದು ಪ್ರಸಿದ್ಧ ಐತಿಹಾಸಿಕ ಕೇಂದ್ರ. ಬಸವೇಶ್ವರ ನಡೆದಾಡಿದ ಪುಣ್ಯಭೂಮಿ, ಕಲೆ ವಾಸ್ತುಶಿಲ್ಪದ ತೊಟ್ಟಿಲೆಂದು ಹೆಸರಾದ ಐಹೊಳೆಯ ತಾಯ್ನೆಲ. ತಾಲೂಕಿನಲ್ಲಿ ಹಳೆಯ ಶಿಲಾಯುಗದ ಕಾಲದಿಂದ ವಿಜಯನಗರ ಸಾಮ್ರಾಜ್ಯದವರೆಗಿನ ರಾಜಕೀಯ ಚರಿತ್ರೆಯನ್ನು ಹೊಂದಿದ ಪ್ರದೇಶವಾಗಿದೆ. ಈ ತಾಲೂಕಿನ ಪರಿಸರದ ಐಹೊಳೆ, ಸಿದ್ಧನಕೊಳ್ಳ ಪ್ರಮುಖ ಶಿಲಾಯುಗದ ನೆಲೆಗಳಾಗಿದ್ದರೆ, ಹುನಗುಂದ, ಅರಸಿಬೀದಿ, ಐಹೊಳೆ, ಸಿದ್ಧನಕೊಳ್ಳ, ಕರಡಿ, ಕಂದಗಲ್, ನಂದವಾಡಗಿ, ಕೂಡಲಸಂಗಮ, ಬಾದಾಮಿ ಚಾಲುಕ್ಯರ, ಯಾದವರ, ರಾಷ್ಟ್ರಕೂಟರ, ಕಲ್ಯಾಣದ ಚಾಲುಕ್ಯರ ಕಲೆಯ ಕೇಂದ್ರಗಳಾಗಿದ್ದು, ಆಕರ್ಷನೀಯ ದೇವಾಲಯಗಳನ್ನು, ಕೋಟೆಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ಕೆಲವನ್ನು ಹೊರತುಪಡಿಸಿದರೆ ಬಹುಪಾಲು ಮಂದಿರಗಳು ನಿಧಿಗಳ್ಳರ ವಿದ್ವಂಸಕ ಕೃತ್ಯಕ್ಕೆ ಬಲಿಯಾಗಿ ನಾಶವಾಗುತ್ತ ಸಾಗಿವೆ. ಅವುಗಳನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂಬುದನ್ನು ಪರಿಚಯಿಸುವುದೇ ಈ ಲೇಖನದ ಮುಖ್ಯ ಉದ್ದೇಶ.

Article Details

Section

Research Articles

Author Biography

ಶಿವಾನಂದ ಆರ್. ನಾಗಣ್ಣವರ

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ವಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ.

How to Cite

ಶಿವಾನಂದ ಆರ್. ನಾಗಣ್ಣವರ. (2025). ಹುನಗುಂದ ಪ್ರದೇಶದ ನಿರ್ಲಕ್ಷಿತ ಐತಿಹಾಸಿಕ ಸ್ಮಾರಕಗಳು. ಅಕ್ಷರಸೂರ್ಯ (AKSHARASURYA), 9(01), 161 to 169. https://aksharasurya.com/index.php/latest/article/view/1579

References

ಅಪರ್ಣಾ ಕೂ. ಸ., (1996) ದೇವಾಲಯ ವಾಸ್ತುಶಿಲ್ಪ ಪರಿಚಯ. ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಎಂ. ವಿ. ಕೃಷ್ಣರಾವ್., ಕರ್ನಾಟಕ ಇತಿಹಾಸ ದರ್ಶನ ಕರ್ನಾಟಕ ಸಹಕಾರಿ, ಪ್ರಕಾಶನ, ಬೆಂಗಳೂರು.

ಎಚ್.ಎಸ್. ಗೋಪಾಲರಾವ್., ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯರ ದೇವಾಲಯಗಳು. ಒಂದು ಅಧ್ಯಯನ. ನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರ., (1993) .

ಗೋಪಾಲ ಬಾ. ರಾ., ಕಲ್ಯಾಣದ ಚಾಲುಕ್ಯರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಗೋಪಾಲ ಬಾ. ರಾ., ಕರ್ನಾಟಕದ ಕಲೆಗಳು ಸಂ-4 ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಪತ್ತಾರ ಶಿಲಾಕಾಂತ., (2000), ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಪ್ರಾಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಚಿಂಚೋಳಿ ಸುಭಾಸ., (1999) ಪ್ರಾಕ್ತನಶಾಸ್ತ್ರದ ಹಿನ್ನಲೆಯಲ್ಲಿ ಬಿಜಾಪುರ ಜಿಲ್ಲೆಯಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ವಾಸ್ತು ಮತ್ತು ಶಿಲ್ಪಕಲೆಯ ಅಧ್ಯಯನ, ಅಪ್ರಕಟಿತ ಪಿಎಚ್.ಡಿ ಮಹಾಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ರಾಮಚಂದ್ರರಾವ್ ಎಸ್.ಕೆ., ಮೂರ್ತಿಶಿಲ್ಪದ ನೆಲೆ ಹಿನ್ನೆಲೆ ಬೆಂಗಳೂರ ವಿಶ್ವವಿದ್ಯಾಲಯ, ಬೆಂಗಳೂರ.

ಸಿಂಧಗಿ ರಾಜಶೇಖರ., (1982), ಕರ್ನಾಟಕದ ವಾಸ್ತುಶಿಲ್ಪ, ಮತ್ತು ಚಿತ್ರಕಲೆ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಮುನಿಸ್ವಾಮಿ ಆರ್., (1999) (ಸಂ) ಕರ್ನಾಟಕ ರಾಜ್ಯ ಗಾಸೆಟಿಯರ್ ವಿಜಾಪುರ ಜಿಲ್ಲೆ, ಅಭಿಮಾನಿ ಪ್ರಕಾಶನ, ಬೆಂಗಳೂರು.

ಕನ್ನಡ ವಿಶ್ವವಿದ್ಯಾಲಯ, ಹಂಪಿ ಶಾಸನ ಸಂಪುಟ, 9.