ಹುಣಸೂರು ಪರಿಸರದ ಜೈನ ಬಸದಿಗಳ ಚಾರಿತ್ರಿಕ ಹಿನ್ನಲೆ

Main Article Content

ಸುಧಾ

Abstract

ಕರ್ನಾಟಕದಲ್ಲಿ ತೇಗದ ನಾಡೆಂದೇ ಹೆಸರಾಗಿರುವ ಹುಣಸೂರು ಪ್ರದೇಶವು ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದು, ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಇದು ಒಂದಾಗಿದೆ. ಲಕ್ಷ್ಮಣ ತೀರ್ಥ ನದಿಯ ಎರಡು ಇಕ್ಕೆಲುಗಳಲ್ಲಿ ಬೆಳೆದು ನಿಂತಿರುವ ಈ ಪ್ರದೇಶ ಮೈಸೂರಿನಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ, ಅಂದರೆ ಜಿಲ್ಲಾ ಕೇಂದ್ರದಿಂದ 47 ಕಿ.ಮಿ. ದೂರದಲ್ಲಿದ್ದು, ಇದು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಮಲೆನಾಡಿನ ಸೆರಗಿನಲ್ಲಿ ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿದೆ. ಅಲ್ಲದೆ ಇದು ಗಿರಿ ಪ್ರದೇಶಗಳಿಂದ ಕೂಡಿರುವ ವೈಶಿಷ್ಟ್ಯಪೂರ್ಣ ಅರೆಮಲೆನಾಡಾಗಿದ್ದು, ಸುತ್ತಲ ಜಿಲ್ಲೆ ಮತ್ತು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಆಯಕಟ್ಟಿನ ಸ್ಥಳದಲ್ಲಿದ್ದು, ಪ್ರಗತಿ ಪಥದಲ್ಲಿ ಇದು ಮುನ್ನಡೆಯುತ್ತಿದೆ. ಈ ಪ್ರದೇಶವನ್ನು ಟಿಪ್ಪು ಸುಲ್ತಾನನು ತನ್ನ ಸೈನಿಕ ನೆಲೆಯಾಗಿ ಉಪಯೋಗಿಸುತ್ತಿದ್ದನು ಮತ್ತು 1882ರಲ್ಲಿ ಇದು ತಾಲ್ಲೂಕು ಆಗಿ ಏಳಿಗೆಗೆ ಬಂದಿತು. ಈ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರೂ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳೂ ಆದ ದಿವಂಗತ ಡಿ. ದೇವರಾಜ ಅರಸು ಹಾಗೂ ಕನ್ನಡ ಸಿನಿಮಾ ರಂಗಕ್ಕೆ ಅಪಾರ ಕೊಡುಗೆ ನೀಡಿ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹುಣಸೂರು ಎಂದೇ ಪ್ರಸಿದ್ಧಿಗಳಿಸಿ, ನಾಯಕ ನಟರಾಗಿ, ನಿರ್ದೇಶಕ, ನಿರ್ಮಾಪಕ, ಸಂಭಾಷಣಾಕಾರ, ಗೀತರಚನಾಕಾರರಾಗಿ ಬಹುಮುಖ ಪ್ರತಿಭೆ ತೋರಿದ ಹುಣಸೂರು ಕೃಷ್ಣಮೂರ್ತಿ ಇಂತಹ ಮಹನೀಯರಿಗೆ ಜನ್ಮ ನೀಡಿದ ಸ್ಥಳವೇ ಹುಣಸೂರು.

Article Details

Section

Research Articles

Author Biography

ಸುಧಾ

ಇತಿಹಾಸ ಉಪನ್ಯಾಸಕಿ, ಎಸ್.ಜಿ.ಎಂ.ಕೆ.ಪಿ.ಯು ಕಾಲೇಜ, ಬಾದಾಮಿ.

References

ಶ್ಯಾಮಸುಂದರ್.ಬಿ,, (2011) ಹುಣಸೂರು ತಾಲ್ಲೂಕ ಗ್ಯಾಸೆಟಿಯರ್, ಕರ್ನಾಟಕ ಸರ್ಕಾರದ ಪ್ರಕಟಣೆ, ಬೆಂಗಳೂರು ಪುಟ ಸಂಖ್ಯೆ-140, 141.

ಕನ್ನಡ ವಿಶ್ವಕೋಶ, ಸಂ-8, ಪು.ಸಂ:356 ಮತ್ತು 357

ರೆಸ್ ಬಿ.ಎಲ್., ಮೈಸೂರು ಅಂಡ್ ಕೂರ್ಗ್ ಫ್ರಮ್ ದ ಇನ್ಸ್ಕ್ರಿಪ್ಷನ್ಸ್, ಪು-23.

ಚಿದಾನಂದಮೂರ್ತಿ ಎಂ – ಕ,ಶಾ,ಸಾಂ,ಅ, ಪು-1