ಐತಿಹಾಸಿಕ ಪಾರಂಪರಿಕ ತಾಣ ಬೆಳಗಲಿ

Main Article Content

ಮಹಾಲಿಂಗ ರಂಗಾಪೂರ

Abstract

ಬಾದಾಮಿ ಚಾಲುಕ್ಯರು ಹಾಗೂ ಕಲ್ಯಾಣ ಚಾಲುಕ್ಯರ ಆಡಳಿತಾವಧಿಯಲ್ಲಿದ್ದ ಒಂದು ನಾಡು ಬೆಳಗಲಿ. ಇಂದಿನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಒಂದು ಪಟ್ಟಣ ಪಂಚಾಯತಿ ಆಗಿರುವ ಈ ಗ್ರಾಮವು ಕವಿಚಕ್ರವರ್ತಿ ರನ್ನನ ಜನ್ಮಸ್ಥಳ ಎಂದು ಹೇಳಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಗುರುತಿಸಿರುವ 2015-2025 ವರೆಗಿನ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯ 14 ತಾಣಗಳು ಮಾತ್ರ ಇದ್ದವು. ಸದ್ಯ ಹೊಸದಾಗಿ 13 ತಾಣಗಳನ್ನು ಗುರುತಿಸಿದ್ದು ಅವುಗಳಲ್ಲಿ ಸ್ಥಾನ ಪಡೆದ ಒಂದು ಸ್ಥಳವೆಂದರೆ ಅದು ಬೆಳಗಲಿಯ ಅಮೃತೇಶ್ವರ ದೇವಾಲಯವಾಗಿದೆ. ಇದು ಮಾತ್ರವಲ್ಲದೆ ಇಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯ, ಪರಮಾನಂದ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ರೂಪಿಣಿ ದೇವಾಲಯಗಳು ಇರುವುದಲ್ಲದೆ ಸಾಕಷ್ಟು ಸಂಖ್ಯೆಯ ಶಾಸನಗಳು ಕಂಡುಬಂದಿರುವುದರಿಂದ ಇದೊಂದು ಪ್ರಮುಖ ಐತಿಹಾಸಿಕ ಸ್ಥಳವೆಂದು ಹೇಳಬಹುದಾಗಿದೆ. ಅನೇಕ ಪೌರಾಣಿಕ ಸಾಹಿತ್ಯ ಮತ್ತು ಪರಂಪರೆಗಳ ತಾಣವಾಗಿದೆ. ಗ್ರಾಮದಲ್ಲಿ ಒಟ್ಟು 60 ಶಿವಲಿಂಗಗಳಿದ್ದು ಹೀಗಾಗಿ ಇಲ್ಲಿ ಶೈವರ ಆಳ್ವಿಕೆ ಇತ್ತು ಎನ್ನಬಹುದಾಗಿದೆ. ಇಲ್ಲಿ ಈ ಊರಿನ ಗತವೈಭವವನ್ನು ಸಾರುವ ಅವಶೇಷಗಳು ಇನ್ನೂ ಕೂಡ ಲಭ್ಯವಾಗುತ್ತಿವೆ.

Article Details

Section

Research Articles

Author Biography

ಮಹಾಲಿಂಗ ರಂಗಾಪೂರ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೇರದಾಳ.

How to Cite

ಮಹಾಲಿಂಗ ರಂಗಾಪೂರ. (2025). ಐತಿಹಾಸಿಕ ಪಾರಂಪರಿಕ ತಾಣ ಬೆಳಗಲಿ. ಅಕ್ಷರಸೂರ್ಯ (AKSHARASURYA), 9(01), 143 to 147. https://aksharasurya.com/index.php/latest/article/view/1576

References

ಪೂಜಾರಿ ಸಿದ್ದರಾಜ, ಕಾಡದೇವರ ಜಯವಂತ., (1995), ಬೆಳವಲದ ಬೆಡಗು

ಲಠ್ಠೆ ಎಂ. ಎಸ್‌. (1977), ಸಾಹಿತ್ಯ ಸಂತುಷ್ಠಿ

ಶ್ರೀ ದೇಸಾಯಿ ಪಾಂಡುರಂಗರಾಯರು ರನ್ನನ ಮುದುವೊಳಲು-.

ಶೇಷಗಿರಿರಾವ್‌ ಡಿ. ವಿ. (1973) ರನ್ನ ಭಾಗ-1

ಸ್ಥಳೀಯ ಬಿವಿವಿಎಸ್‌ ಹೈಸ್ಕೂಲ್‌ ಶಿಕ್ಷಕರಾದ ಶ್ರೀ ಕೆ.ಎ. ದಡೂತಿ ಸರ್‌, ಶ್ರೀ ಎ.ಎಂ. ಕಂಬಾರ ಸರ್‌, ಶಿಕ್ಷಕರಾದ ಶ್ರೀ ಎಸ್‌. ಕೆ. ಹನಗಂಡಿ ಸರ್‌, ಸ್ಥಳೀಯ ಹಿರಿಯರಾದ ಶ್ರೀ ಆರ್‌. ಎಂ ನೀಲನ್ನವರ ರವರು ನೀಡಿದ ಮಾಹಿತಿ.

ಗೋಲಬಾಂವಿ ಸಕ್ಕುಬಾಯಿ., (2023), ರನ್ನ ಬೆಳಗಲಿ ಪಟ್ಟಣದ ಸಾಂಸ್ಕೃತಿಕ ಅಧ್ಯಯನ ಕಿರು ಪ್ರಬಂಧ.