ಕಿತ್ತೂರು ತಾಲೂಕಿನ ಐತಿಹಾಸಿಕ ಸ್ಮಾರಕಗಳು

Main Article Content

ರಾಮಕೃಷ್ಣ ಇಲಕಲ್ಲ

Abstract

‘ಓಲ್ಡ್ ಈಸ್ ಗೋಲ್ಡ್’ ಎಂಬ ನಾಣ್ಣುಡಿಯಂತೆ, ಹಳೆಯದೆಲ್ಲಾ ಉತ್ತಮವಾಗಿರುತ್ತದೆ. ಪ್ರಾಚೀನ ಸಂಸ್ಕೃತಿಯ ನೆಲೆಗಳು, ಸಮಾಧಿಗಳು, ದೇವಾಲಯಗಳು, ಸ್ಥಂಭಗಳು, ವಿಗ್ರಹಗಳು, ಶಿಲ್ಪಕಲೆಗಳು, ಶತಮಾನಗಳ ಹಿಂದಿನ ವಸ್ತುಗಳು ಹಾಗೂ ಪಾರಂಪರಿಕ ಕಟ್ಟಡಗಳು, ಅರಮನೆ, ಬಸದಿ, ಕೋಟೆ, ಸಮಾಧಿಗಳು, ಇತ್ಯಾದಿ. ಇವೆಲ್ಲವೂ ಪ್ರಾಚೀನ ಪರಂಪರೆಯ ಕಲೆ, ಜ್ಞಾನ, ವಿಜ್ಞಾನ, ವಾಸ್ತು ವಿದ್ಯೆ, ಸಂಸ್ಕೃತಿ, ಸಂಪ್ರದಾಯ, ನಂಬಿಕೆಗೆ ಪ್ರಬಲ ಸಾಕ್ಷಿಗಳು ಆಗಿವೆ. ಎಲೆ ಮರೆ ಕಾಯಿಯಂತೆ ಉಳಿದ ಇತಿಹಾಸ ಹೇಳುವ ಸ್ಮಾರಕಗಳು ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಕಂಡುಬರುತ್ತವೆ. ಈ ಐತಿಹಾಸಿಕ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ಪ್ರಮುಖ ಸ್ಮಾರಕಗಳು ಕಿತ್ತೂರು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಂಡುಬಂದಿವೆ. ಅಂತಃ ಐತಿಹಾಸಿಕ ಪ್ರಮುಖ ಸ್ಮಾರಕಗಳ ಪರಿಚಯವನ್ನು ಈ ಲೇಖನದ ಮೂಲಕ ಮಂಡಿಸಿರುವೆ. ಇದಕ್ಕಾಗಿ ಸ್ಥಳೀಯ ಅಧ್ಯಯನ ಮತ್ತು ಸಂಬಂಧಿಸಿದ ಐತಿಹಾಸಿಕ ದಾಖಲೆಗಳನ್ನು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ, ಕಿತ್ತೂರು ಇವರ ಸಹಕಾರದ ಮೂಲಕ ಅಧ್ಯಯನ ಮಾಡಿರುವೆ.

Article Details

Section

Research Articles

Author Biography

ರಾಮಕೃಷ್ಣ ಇಲಕಲ್ಲ

ಸಹಾಯಕ ಪ್ರಾದ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಿತ್ತೂರು.

References

ಪುರಾತತ್ವ ಇಲಾಖೆ ಸರಕಾರಿ ದಾಖಲೆಗಳು, ಕಿತ್ತೂರು ಮ್ಯೂಸಿಯಂ, ಕಿತ್ತೂರು

ಬೆಳಗಾವಿ ಜಿಲ್ಲೆಯ ಪುರಾತತ್ವ ವರದಿಗಳು

ಕರ್ನಾಟಕ ಸರಕಾರದ ಪುರಾತತ್ವ ಮತ್ತು ಪರಂಪರೆಯ ಇಲಾಖೆಯ ದಾಖಲೆಗಳು.

https://damh-kdh.github.io/KDH-GIS

ಸಂಬಂಧಿಸಿದ ಸ್ಥಳೀಯ ದಾಖಲೆಗಳು

ನೇರ ಸಂದರ್ಶನದ ಮೂಲಕ ಸ್ಥಳೀಯ ಜನರ ಮೌಖಿಕ ಆಧಾರಗಳು

ಸಮಗ್ರ ಕರ್ನಾಟಕ ಇತಿಹಾಸ, ಕೆ. ಸದಾಶಿವ, 2022

ಕಿತ್ತೂರು ಸಂಸ್ಥಾನದ ಇತಿಹಾಸ. ಕರ್ನಾಟಕ ಸರ್ಕಾರ, ಪುರಾತತ್ವ ಮತ್ತು ಪರಂಪರೆಯ ಇಲಾಖೆ.

https://archaeology.karnataka.gov.in/en