ತೇರದಾಳ ಪರಿಸರದ ಬೃಹತ್ ಶಿಲಾಯುಗದ ನೆಲೆಗಳು

Main Article Content

ರಮೇಶ ಕುಂಬಾರ

Abstract

‘ಚರಿತ್ರೆ’ ಕೇವಲ ಗತಕಾಲದ ಕಥನವಲ್ಲ. ಬದಲಾಗಿ ಅದು ವರ್ತಮಾನದ ಮಾನವನ ಸಮಗ್ರ ಮತ್ತು ವ್ಯವಸ್ಥಿತ ದಾಖಲೆಯೂ ಹೌದು. ಚರಿತ್ರೆ ಮಾನವನ ಸಮಗ್ರ ಜೀವನಕ್ರಮ ಮತ್ತು ಘಟನಾವಳಿಗಳನ್ನು ಕಾಲಾನುಕ್ರಮದಲ್ಲಿ ಅಧ್ಯಯನ ಮಾಡುವ ಜ್ಞಾನ ಶಿಸ್ತುವಾಗಿದ್ದು, ಮಾನವ ಪ್ರಗತಿಯನ್ನು ಅರಿಯಲು ಅದು ಸಹಾಯಕವಾಗಿದೆ. ಚರಿತ್ರೆಯನ್ನು ಮರೆತವನು ಚರಿತ್ರೆಯನ್ನು ಸೃಷ್ಟಿಸಲಾರ. “ಚರಿತ್ರೆ ಎಂದರೆ ಅದು ಸಮಯ ಸಂದರ್ಭದ ಕೂಸು ಮತ್ತು ಅದು ಯಾವಾಗಲೂ ಇತಿಹಾಸಕಾರನ ಆಯ್ಕೆಯಾಗಿರುತ್ತದೆ” ತಾಲೂಕು ಕೇಂದ್ರ ಜಮಖಂಡಿಯಿಂದ ಪಶ್ಚಿಮಕ್ಕೆ 29 ಕಿ.ಮೀ. ದೂರದಲ್ಲಿರುವ ತೇರದಾಳವು ಹಲವಾರು ವಿಭಿನ್ನ ವೈಶಿಷ್ಟ್ಯತೆಗಳಿಗೆ ಹೆಸರುವಾಸಿಯಾಗಿದೆ. ತೇರದಾಳ ಪರಿಸರದ 5 ಕಿ.ಮೀ. ಅಂತರದಲ್ಲಿಯೇ ಉತ್ತರಕ್ಕೆ ಕೃಷ್ಣಾ ನದಿ ಪೂರ್ವದತ್ತ ಹರಿಯುತ್ತಿದೆ. ಇದು ಅಂದಿನ ದಿನಮಾನಗಳಲ್ಲಿ ಜನವಸತಿ ನೆಲೆಗಟ್ಟುಗಳ ಅವಶೇಷಗಳಿಂದ ತುಂಬಿದೆ. ಅಲ್ಲದೆ ಇದೇ ಪರಿಸರದ 4 ಕಿ.ಮೀ. ದೂರದಲ್ಲಿ ‘ಕಡ್ಲಿಪಲ್ಲಿ’ ಎಂಬ ಗುಡ್ಡದ ಉತ್ತರ ದಿಕ್ಕಿಗೆ ಬರುವ ಹಳಿಂಗಳಿ, ಹನಗಂಡಿ, ಮದನಮಟ್ಟಿ, ಆಸಂಗಿಯ ಸುತ್ತಮುತ್ತಲಿನ ಪರಿಸರದಲ್ಲಿ ಬೃಹತ್ ಶಿಲಾಯುಗದ ಗೋರಿಗಳಿದ್ದು ಸುಮಾರು 1000ಕ್ಕಿಂತ ಹೆಚ್ಚು ಕಂಡುಬರುತ್ತವೆ.

Article Details

Section

Research Articles

Author Biography

ರಮೇಶ ಕುಂಬಾರ

ಉಪನ್ಯಾಸಕರು, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ರಬಕವಿ, ಬನಹಟ್ಟಿ.

References

ರಮೇಶ ಕುಂಬಾರ., (2020) ತೇರದಾಳ ಪರಿಸರದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ. ಜ್ಞಾನದೀಪ ಫೌಂಡೇಶನ್ ತೇರದಾಳ.

ಅಂಬಳಿಕೆ ಹಿರಿಯಣ್ಣ., (2009) ಕನ್ನಡ ವಿಷಯ ವಿಶ್ವಕೋಶ, ಇತಿಹಾಸ ಮತ್ತು ಪುರಾತತ್ವ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.

ಇರ್ಫಾನ್ ಹಬೇಬ್., (2008) ಪ್ರದೀಪ್ ಬೆಳಗಲ್ (ಅನು), ಪೂರ್ವೇತಿಹಾಸ, ಚಿಂತನ ಪ್ರಕಾಶನ, ಬೆಂಗಳೂರು.

ಇರ್ಫಾನ್ ಹಬೇಬ್ (ಮೂ.ಲೇ)., (2011) ಪ್ರದೀಪ್ ಬೆಳಗಲ್ ಮತ್ತು ಇತರರು (ಅನು), ಸಿಂಧೂ ನಾಗರಿಕತೆ, ಚಿಂತನ ಪುಸ್ತಕ, ಬೆಂಗಳೂರು.

ಕೋಸಾಂಬಿ ಡಿ. ಡಿ., (2011) (ಮೂ.ಲೇ) ವೇಣುಗೋಪಾಲ ಟಿ.ಎಸ್. ಮತ್ತು ಶೈಲಜಾ (ಅನು), ಪ್ರಾಚೀನ ಭಾರತಿದ ಸಂಸ್ಕೃತಿ ಮತ್ತು ನಾಗರಿಕತೆ ಚಾರಿತ್ರಿಕ ರೂಪರೇಷೆ, ಚಿಂತನ ಪ್ರಕಾಶನ, ಬೆಂಗಳೂರು.

ನರಸಿಂಹಮೂರ್ತಿ ಎ.ವಿ.: (2010) ಕರ್ನಾಟಕ ಪುರಾತತ್ವ ಕೆಲವು ಅಧ್ಯಯನಗಳು, ಪ್ರಸಾರಾಂಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ, ಮೈಸೂರು.

ವಾಸುದೇವ ಬಡಿಗೇರ.: (2010) ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ-5 ಬಸವನ ಬಾಗೇವಾಡಿ. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.