ಸ್ಮಾರಕಗಳ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವಲ್ಲಿ ಸರಕಾರ ಮತ್ತು ಯುವ ಜನತೆಯ ಪಾತ್ರ

Main Article Content

ಸದಾಶಿವ ಎಸ್. ಮುಗಳಿ

Abstract

ಭಾರತವು ಅನಾದಿ ಕಾಲದಿಂದಲೂ ತನ್ನ ವಿಶಾಲ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದ್ದು, ಐತಿಹಾಸಿಕ ಮಹತ್ವ ಮತ್ತು ಹಿರಿಮೆಯನ್ನು ಹೊಂದಿರುವ ಅನೇಕಾನೇಕ ಪ್ರಾಚೀನ ತಾಣಗಳು ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿ ನಿಂತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ನೀತಿಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸರಕಾರ ಪ್ರಾಮುಖ್ಯತೆಯನ್ನು ನೀಡುತ್ತಿದೆ. ದೇಶದಾದ್ಯಂತ ಪಸರಿಸಿರುವ ಪ್ರಾಚೀನ ಕಲಾ ಕುರುಹುಗಳನ್ನು ರಕ್ಷಿಸಿ, ಸಂರಕ್ಷಿಸಿ ಮೂಲ ಸ್ವರೂಪದಲ್ಲಿ ಕಾಯ್ದುಕೊಂಡು ಭವ್ಯ ಭಾರತದ ಭವಿತವ್ಯದ ಪೀಳಿಗೆಗೆ ಕೊಂಡೊಯ್ಯುವಲ್ಲಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ಮತ್ತು ಆಯಾ ರಾಜ್ಯ ಸರಕಾರಗಳು ಪ್ರಥಮ ಪ್ರಾಶಸ್ತ್ಯ ನೀಡುತ್ತಿರುವುದು ದೇಶದ ಸಮಗ್ರತೆ ಮತ್ತು ಏಕತೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಸ್ವತಂತ್ರ ಪೂರ್ವದಲ್ಲಿ ಸ್ಥಾಪಿತವಾದ ದೇಶದ ಅತೀ ಹಳೆಯ ಸಂಸ್ಥೆಗಳಲ್ಲಿ ಒಂದಾಗಿರುವ ಪುರಾತತ್ವ ಇಲಾಖೆಯು ಸಂಸ್ಕೃತಿ ಮಂತ್ರಾಲಯದ ಅಡಿಯಲ್ಲಿ ದೇಶದ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನ, ವಿಶ್ವ ಯೋಗ ದಿವಸ, ಅನಿವಾಸಿ ಭಾರತೀಯ ದಿವಸ, ಅಂತರರಾಷ್ಟ್ರೀಯ ಸಭೆ ಸಮ್ಮೇಳನಗಳು, ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಮ್ಮ ಪರಂಪರೆಯ ಸಂವರ್ಧನೆಯಲ್ಲಿ ಕೈಜೋಡಿಸುತ್ತಿವೆ. ಭಾರತ ಇಂದು ವಿಶ್ವದಲ್ಲಿ ಅತ್ಯಧಿಕ ಯುವ ಜನತೆಯನ್ನು ಹೊಂದಿದ ದೇಶವಾಗಿದೆ. ಈ ಯುವ ಜನತೆಯನ್ನು ದೇಶದ ಪರಂಪರೆ, ಪ್ರಾಚೀನ ಕುರುಹುಗಳ ರಕ್ಷಣೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ವಿಪುಲ ಅವಕಾಶಗಳಿವೆ.

Article Details

Section

Research Articles

Author Biography

ಸದಾಶಿವ ಎಸ್. ಮುಗಳಿ

ಮುಖ್ಯಸ್ಥರು, ಇತಿಹಾಸ ವಿಭಾಗ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, (ರಾ.ಚ.ವಿ), ಬೆಳಗಾವಿ.

 

References

ಕಲಬುರ್ಗಿ ಎಂ. ಎಂ., (1980), ಸಮಾಧಿ ಬಲಿದಾನ ವೀರಮರಣ ಸ್ಮಾರಕಗಳು, ಬೆಂಗಳೂರು.

ಕುಲಕರ್ಣಿ ಎಚ್. ಆರ್., (2000), ಕರ್ನಾಟಕದ ಆರಂಭಿಕ ಶಿಲ್ಪಕಲೆ, ಬೆಂಗಳೂರು.

ಗೋಪಾಲ್ ಬಿ. ಆರ್., (1983), ಬನವಾಸಿ ಕದಂಬರು, ಕದಂಬ ಸಾಂಸ್ಕೃತಿಕ ಅಧ್ಯಯನ, ಶಿರಸಿ.

ಗೋಪಾಲ್ ಆರ್. (ಸಂ)., (2010), ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಮೈಸೂರು.

ಮಹಾದೇವ ಸಿ., (2006) ಕರ್ನಾಟಕ ದೇವಾಲಯ ಕೋಶ: ಧಾರವಾಡ ಜಿಲ್ಲೆ, ಕವಿ.ವಿ, ಹಂಪಿ.

ಸುರೇಬಾನಕರ, ಸ್ಮೀತಾ., (2013) ಬೆಳಗಾವಿ ವಾಸ್ತುಶಿಲ್ಪ ನಿಧಿ ಒಂದು ವಿಶ್ಲೇಷಣೆ, ಬೆಳಗಾವಿ.

ಮುಕ್ಕುಂಡಿ, ಶ್ರೀಕಾಂತಾಚಾರ್ಯ., ದೇವಾಲಯಗಳ ಪರಿಕಲ್ಪನೆ,. ವಿಶ್ವಮಧ್ವ ಮಹಾಪರಿಷದ್, ಬೆಂಗಳೂರು.

ಇತಿಹಾಸ ದರ್ಶನದ ಲೇಖನಗಳು, ಅಂತರ್ಜಾಲದ ಬಳಕೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ವಿವಿಧ ರಾಜ್ಯ ಪುರಾತತ್ವ ಇಲಾಖೆಯ ಕೈಪಿಡಿಗಳು

Fergusson J., (1866), Architecture in Dharwad & Mysore, Bombay.

Gerard Foekema., (2003), Chalukyan Architecture, Delhi.

Ghose, A., (2022), Conservation and Restoration of Cultural Heritage, Agamkala Prakashan.

Batra N.L., (1997), Heritage Conservation, Aryan Books.

Nagar S.L., (2002), Protection Conservation and Preservation of Indian Monuments, Aryan Books.