ಮುಧೋಳ ಪರಿಸರದ ಪುರಾತತ್ವ ನೆಲೆಗಳ ಸಂರಕ್ಷಣೆ
Main Article Content
Abstract
ಮುಧೋಳ ಎಂಬುದು ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರದಿಂದ ವಾಯವ್ಯ ದಿಕ್ಕಿಗೆ 60 ಕಿ.ಮೀ. ದೂರದಲ್ಲಿದೆ. ಈ ಪ್ರದೇಶವನ್ನು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಳುಕ್ಯರು, ಕಲಚೂರಿಗಳು, ಬಿಜಾಪುರ ಆದಿಲ್‌ಶಾಹಿಗಳು, ಮರಾಠಾ ಸಂಸ್ಥಾನಿಕರು ಮತ್ತು ಬ್ರಿಟಿಷರು ಆಳ್ವಿಕೆ ಮಾಡಿದ್ದಾರೆ. ಈ ಪರಿಸರದ ಅನೇಕ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮೂರ್ತಿಶಿಲ್ಪಗಳು ಮತ್ತು ಇತರೆ ಪುರಾತತ್ವೀಯ ಅವಶೇಷಗಳು ಇದೊಂದು ಪ್ರಮುಖ ಐತಿಹಾಸಿಕ ನೆಲೆ ಎನ್ನುವುದನ್ನು ಸಾಬೀತುಪಡಿಸುತ್ತವೆ. ‘ಮುಧೋಳ’ ಎಂಬ ಸ್ಥಳನಾಮದ ಕುರಿತು ಇಲ್ಲಿನ ಸ್ಥಳೀಯ ಶಾಸನಗಳೇ ಉಲ್ಲೇಖಗಳನ್ನು ನೀಡುತ್ತವೆ. ಮುಧೋಳದಲ್ಲಿರುವ ಕಲ್ಮೇಶ್ವರ ದೇವಾಲಯದಲ್ಲಿನ ಶಾಸನವು ‘ಮುದವಳನಾಡು’ಎಂಬ ಸ್ಥಳನಾಮದ ಉಲ್ಲೇಖವನ್ನು ನೀಡುತ್ತದೆ. ‘ಮುದವಳನಾಡು’ ಎಂಬುದೇ ಪ್ರಸ್ತುತ ಮುಧೋಳ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದೇ ನಗರದಲ್ಲಿರುವ ಗವಿಮಠದಲ್ಲಿನ ಶಾಸನವು ಮುಧೋಳನ್ನು ‘ಮುದುವೊಳಲ’ಎಂಬ ಹೆಸರಿನಿಂದ ಗುರುತಿಸುತ್ತದೆ. ಅಲ್ಲದೆ ಇಂದಿನ ಮುಧೋಳ ನಗರಕ್ಕೆ ಹಿಂದೆ ‘ಮುದುವೊಳಲು’ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತೆಂಬುದು ರನ್ನನ ಆಗಮಿಕ ಗ್ರಂಥವಾದ ‘ಅಜಿತತೀರ್ಥಂಕರ ಪುರಾಣ ತಿಲಕ’ದಿಂದಲೂ ತಿಳಿದುಬರುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ದೇವರಕೊಂಡಾರೆಡ್ಡಿ ಮತ್ತು ಇತರರು (ಸಂ.), (2006), ಬಾಗಲಕೋಟೆ ಜಿಲ್ಲೆಯ ಶಾಸನ ಸಂಪುಟ-9, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಬೆಳವಾಡಿ. ಎಸ್. ಎಸ್., (2017), ರನ್ನ ಮತ್ತು ಅವನ ಕೃತಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಯತಗಲ್ ಅಮರೇಶ (ಸಂ), (2020), ಶಾಸನ ಅಧ್ಯಯನ, ಸಂಪುಟ-11, ಸಂಚಿಕೆ-02, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಸಿಂದಗಿ ರಾಜಶೇಖರ್, (1988), ಕರ್ನಾಟಕ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಸುಜಾತಾ ಪಬ್ಲಿಕೇಶನ್, ಧಾರವಾಡ.
ಮಲ್ಲಿಕಾರ್ಜುನ ಕೆ. (ಸಂ), (2012), ಡಾ. ಬಿ.ಆರ್. ಹಿರೇಮಠರ ಶಾಸನ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಚಿದಾನಂದಮೂರ್ತಿ ಎಂ., (2016), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು.