ಸ್ಮಾರಕ ಶಿಲ್ಪಗಳ ಪಾರಂಪರಿಕ ಮಹತ್ವ
Main Article Content
Abstract
ಪ್ರಾಚೀನ ಭಾರತದ ಇತಿಹಾಸದಲ್ಲಿ ಅರಸರ ಯಶಸ್ಸಿಗೆ ಶ್ರಮಿಸಿದ ಹಾಗೂ ಬೆನ್ನೆಲುಬಾಗಿ ನಿಂತಿದ್ದ ಸಾಮಾನ್ಯ ವರ್ಗದ ಜನರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದ ಹಲವು ಉದಾಹರಣೆಗಳು ಸಿಗುತ್ತವೆ. ನಮ್ಮ ಪರಿಸರದಲ್ಲಿ ಕಂಡುಬರುವ ವೀರಗಲ್ಲು, ಮಾಸ್ತಿಗಲ್ಲು, ನಿಷಿಧಿಗಲ್ಲು ಹಾಗೂ ಇತರೆ ಬಲಿದಾನ ಶಿಲ್ಪಗಳಂತಹ ಸ್ಮಾರಕ ಶಿಲ್ಪಗಳು ತ್ಯಾಗದ ಸಂಕೇತವಾಗಿ ನಮಗೆ ಕಂಡುಬರುತ್ತವೆ. ಬೇರೆ ಕಾಲಾವಧಿಯಲ್ಲಿ ನಿರ್ಮಿತಗೊಂಡಿರುವ ಸ್ಮಾರಕ ಶಿಲ್ಪಗಳೂ ಸಮಕಾಲೀನ ಇತಿಹಾಸದ ಪ್ರಮುಖವಾದ ಆಕರಗಳೆನ್ನಬಹುದು. ವಿವಿಧ ಕಾರಣಗಳಿಂದ ಮರಣ ಹೊಂದಿದ ವ್ಯಕ್ತಿಗಳ ನೆನಪಿಗಾಗಿ ನಿಲ್ಲಿಸಿರುವಂತಹ ಶಿಲೆಗಳಾಗಿವೆ. ಬೃಹತ್ ಶಿಲಾಯುಗದಿಂದಲೇ ಇವುಗಳನ್ನು ನೆಡುವ ರೂಢಿ ಇತ್ತೆಂದು ನಮಗೆ ತಿಳಿದು ಬರುವ ಸಂಗತಿಯಾಗಿದೆ. ಸ್ಮಾರಕ ಶಿಲ್ಪಗಳು ವಿವಿಧ ಕಾರಣಗಳಿಗಾಗಿ ಮಡಿದ ವ್ಯಕ್ತಿಗಳ ತ್ಯಾಗ-ಬಲಿದಾನಗಳ ಸಂಕೇತವಾಗಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶ್ರೀಕಂಠಯ್ಯ,ತೀ.ನಂ, (1949), ಕವಿ ರನ್ನ ಗಧಾಯುದ್ಧ ಸಂಗ್ರಹಂ, ಮೈಸೂರು.
ಶೇಷಶಾಸ್ತ್ರಿ, ಆರ್., (2005), ಶಾಸನ ಸಂಚಯ, ಬೆವಿವಿ.
ಪರಮಶಿವಮೂರ್ತಿ.ಡಿ.ವಿ., (1999) ಕನ್ನಡ ಶಾಸನ ಶಿಲ್ಪ, ಕವಿವಿ, ಹಂಪಿ.
ಕಲಬುರ್ಗಿ.ಎಂ.ಎಂ., ಸಮಾಧಿ-ಬಲಿದಾನ-ವೀರ ಮರಣ, ಸ್ಮಾರಕಗಳು.
ಚಿದಾನಂದಮೂರ್ತಿ.ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ, ಬೆಂಗಳೂರು.
ನಾಗೇಗೌಡ.ಹೆಚ್.ಎಲ್., ಪ್ರವಾಸಿ ಕಂಡ ಇಂಡಿಯಾ, ಸಂಪುಟ-1.
Setter.S., (1986) Inviting Death, KU Dharwad.
Altekar.A.S., The Position of Women in Hindu Civilization.
ಕ್ಷೇತ್ರಕಾರ್ಯದ ಮಾಹಿತಿ.