ವಸಾಹತು ಶಾಹಿ ಕಾಲದ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿ

Main Article Content

ಎಸ್.ಎಂ. ಹೆಳವರ

Abstract

ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗಳು ಪ್ರಾರಂಭವಾದವು. ಜಾತಿಯತೆ, ಅಸ್ಪೃಶ್ಯತೆ, ಅಂಧಶ್ರದ್ಧೆ, ಮೂಢನಂಬಿಕೆ, ಅಜ್ಞಾನ, ಅಂಧಕಾರ, ಮಹಿಳೆಯರ ಮೇಲಿನ ಅನ್ಯಾಯ ಹಾಗೂ ಹಿಂದುಳಿದ ವರ್ಗಗಳ ಶೋಷಣೆಯನ್ನು ಪರಿಹರಿಸಲು ಅನೇಕ ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು. ಪ್ರಾರ್ಥನಾ ಸಮಾಜ, ಆರ್ಯ ಸಮಾಜ, ಲಿಂಗಾಯತ ಮಠಗಳು ಧಾರ್ಮಿಕ ಸಾಮಾಜಿಕ ಸುಧಾರಣೆಗಳಲ್ಲಿ ಮುಂಚೂಣಿಗೆ ಬಂದವು. ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ, ಶಾಹೂ ಮಹಾರಾಜರು, ಅಂಬೇಡ್ಕರ್, ದಯಾನಂದ ಸರಸ್ವತಿ ಮುಂತಾದವರ ಪ್ರೇರಣೆಯಿಂದ ಅಸ್ಪೃಶ್ಯತೆ ನಿವಾರಣೆ, ಮಹಿಳಾ ಶಿಕ್ಷಣ, ವಿಧವಾ ಮರುವಿವಾಹ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟಗಳು ನಡೆದವು. ಕ್ರೈಸ್ತ ಮಿಷನರಿಗಳು ಶಿಕ್ಷಣದ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಚಳುವಳಿಗಳು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಬಯಕೆಗಳನ್ನು ಬಿತ್ತಿದವು. ಸಾಮಾಜಿಕ ಜಾಗೃತಿಯಿಂದ ರಾಷ್ಟ್ರೀಯ ಚಳುವಳಿಗೂ ಬಲ ಒದಗಿ ಬಂದಿತು. ಹೀಗಾಗಿ ವಸಾಹತುಶಾಹಿ ಕಾಲದ ಬಾಂಬೆ ಕರ್ನಾಟಕದ ಸಾಮಾಜಿಕ ಚಳುವಳಿಗಳು ಸಮಾಜ ಸುಧಾರಣೆಯೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆಯಾದವು.

Article Details

Section

Research Articles

Author Biography

ಎಸ್.ಎಂ. ಹೆಳವರ

ಇತಿಹಾಸ ವಿಭಾಗದ ಮುಖ್ಯಸ್ಥರು, ಎಸ್.ಪಿ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗ, ಹಾರೂಗೇರಿ.

How to Cite

ಎಸ್.ಎಂ. ಹೆಳವರ. (2025). ವಸಾಹತು ಶಾಹಿ ಕಾಲದ ಬಾಂಬೆ ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿ. ಅಕ್ಷರಸೂರ್ಯ (AKSHARASURYA), 9(01), 52 to 59. https://aksharasurya.com/index.php/latest/article/view/1562

References

ಅನುಪಮ ಹೆಚ್. ಎಸ್. (2015), ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಪುಲೆ. ಲಡಾಯಿ ಪ್ರಕಾಶನ, ಗದಗ.

ಕೃಷ್ಣಮೂರ್ತಿ ಕೆ. (2020), ಸಾವಿತ್ರಿಬಾಯಿ ಪುಲೆ. ಕಲಾಕುಸುಮ ಕ್ರಿಯೇಷನ್‌,

ಕೊಗಟನೂರ ಶಂಕರಾನಂದ ಎಸ್., ಬಾಂಬೆ ಕರ್ನಾಟಕದ ಸಾಮಾಜಿಕ ಚಳುವಳಿಗಳು. ನವ-ಕರ್ನಾಟಕ ಪ್ರಕಾಶನ, ಹುಬ್ಬಳ್ಳಿ.

ಅರ್ಚನ ಎಂ. ಎಸ್. (2017), ಆಧುನಿಕ ಭಾರತದ ಇತಿಹಾಸ. ಚೈತ್ರ ಪ್ರಕಾಶನ, ಬೆಂಗಳೂರು.

ಕಣವಿ ಎಸ್. ಜಿ., ಆಧುನಿಕ ಕರ್ನಾಟಕದ ಇತಿಹಾಸ. ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಣ, ಧಾರವಾಡ.

ಪಾಟೀಲ ಆರ್., ಕರ್ನಾಟಕದಲ್ಲಿ ಸಾಮಾಜಿಕ ಚಳುವಳಿಗಳು. ಪ್ರಗತಿ ಪ್ರಕಾಶನ, ಬೆಂಗಳೂರು.

ಕಪ್ಪಗೋಳ ಬಿ., ಆಧುನಿಕ ಭಾರತದ ಸಮಾಜ ಸುಧಾರಕರು. ಬೆಳಗಾವಿ ಪ್ರಕಾಶನ.

ಪೋತೆ ಹೆಚ್. ಟಿ., ಅಂಬೇಡ್ಕರ ಭಾರತ. ಸ್ವಪ್ನ ಬುಕ್ ಹೌಸ್, ಬೆಂಗಳೂರು.

ಪಾಟೀಲ ಶಂಕರಗೌಡ ಡಿ., ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಕರ್ನಾಟಕ. ನವ ಕರ್ನಾಟಕ ಪ್ರಕಾಶನ.