ವಿಶ್ವಪಾರಂಪರಿಕ ತಾಣ ಪಟ್ಟದಕಲ್ಲಿನ ಸ್ಮಾರಕಗಳ ಸಂರಕ್ಷಣೆ ಹಾಗೂ ಜವಾಬ್ದಾರಿಗಳು

Main Article Content

ಎಸ್. ಎಸ್. ಘಂಟಿಮಠ

Abstract

ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಸ್ಥಳವಾಗಿದ್ದು, ಬಾದಾಮಿಗೆ 10 ಕಿ.ಮೀ ದೂರದಲ್ಲಿದೆ. ಮಲಪ್ರಭಾ ನದಿಯ ದಡದಲ್ಲಿರುವ ಇದಕ್ಕೆ ಕಸುವೊಳಲು ಅಥವಾ ಕಿಸುವೊಳಲು ಎಂದು ಕರೆಯುವರು. ಇಲ್ಲಿ ಕ್ರಿ.ಶ 6ನೇ ಶತಮಾನದಿಂದ 10ನೇ ಶತಮಾನದವರೆಗೂ ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಗೇರಿತ್ತು.
“ಸ್ಥಳೀಯ ಶಾಸನಗಳಲ್ಲಿ ಇದನ್ನು ಪಟ್ಟಬಂಧೋತ್ಸಹ ಸಕಲ ವಿಷಯ ಪಟ್ಟಣಾಧಿಪತಿ ಶ್ರೀಮತಿ ಕಿಸುವೊಳಲ್” ಎಂದು ಕರೆಯುವರು. ಇದನ್ನು 1987 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ಚಾಲುಕ್ಯ ರಾಜರಾದ ವಿಜಯಾದಿತ್ಯ ಮತ್ತು 2ನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡಿರುವ 10 ದೇವಾಲಯಗಳಿವೆ. ಚಾಲುಕ್ಯರ ಕಾಲದಲ್ಲಿ ಪಟ್ಟದಕಲ್ಲು ವಾಸ್ತುಶಿಲ್ಪದ ಪ್ರಯೋಗಶಾಲೆಯಾಗಿತ್ತು. ಹೀಗಾಗಿ ದ್ರಾವಿಡ, ವೇಸರ ಹಾಗೂ ನಾಗರ ಶೈಲಿಯ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಪಟ್ಟದಕಲ್ಲಿನ ಪ್ರಮುಖ ದೇವಾಲಯಗಳೆಂದರೆ: ವಿರೂಪಾಕ್ಷ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಪಾಪನಾಥ ದೇವಾಲಯ, ಗಳಗನಾಥ ದೇವಾಲಯ, ಜೈನ ನಾರಾಯಣ ದೇವಾಲಯ ಮುಂತಾದವುಗಳು.

Article Details

Section

Research Articles

Author Biography

ಎಸ್. ಎಸ್. ಘಂಟಿಮಠ

ಮುಖ್ಯಸ್ಥರು, ಇತಿಹಾಸ ವಿಭಾಗ, ಕುಮಕಾಲೆ ಪದವಿ ಮಹಾವಿದ್ಯಾಲಯ, ಮುಧೋಳ.

How to Cite

ಎಸ್. ಎಸ್. ಘಂಟಿಮಠ. (2025). ವಿಶ್ವಪಾರಂಪರಿಕ ತಾಣ ಪಟ್ಟದಕಲ್ಲಿನ ಸ್ಮಾರಕಗಳ ಸಂರಕ್ಷಣೆ ಹಾಗೂ ಜವಾಬ್ದಾರಿಗಳು. ಅಕ್ಷರಸೂರ್ಯ (AKSHARASURYA), 9(01), 42 to 46. https://aksharasurya.com/index.php/latest/article/view/1560

References

Sundar A., (2008), Pattadakala. Publisher: Archaeological Survey Of India.

Jeorge Mishell., (2004), Badami. Aihole. Pattadakal. Jaico Publishing House.

Jeorge Mishell., (2002), Pattadakala, Monumental Legacy. Publisher: Oxford University.

Aditi Shah., (2020), Pattadakala : Cradle of Architecture.