ಕೈವಾರ ತಾತಯ್ಯನ ಕೀರ್ತನ ವಚನಗಳಲ್ಲಿ ಜೀವನ ದರ್ಶನ.

Main Article Content

ವಿಜಯ ಕುಮಾರ ಎಸ್.

Abstract

ಹದಿನೆಂಟು-ಹತ್ತೊಂಬತ್ತನೇ ಶತಮಾನದ ಪ್ರಸಿದ್ಧ ದ್ವಿಭಾಷಾ ತತ್ವಪದಕಾರರಾದ ಕೈವಾರ ತಾತಯ್ಯನವರ (ಯೋಗಿ ನಾರೇಯಣಪ್ಪ) ಕೀರ್ತನೆಗಳು ಮತ್ತು ವಚನಗಳು ಶ್ರೇಷ್ಠ ಜೀವನ ದರ್ಶನವನ್ನು ಒಳಗೊಂಡಿವೆ. ಭಕ್ತಿ, ಅನುಭಾವ, ಯೋಗರಹಸ್ಯ ಮತ್ತು ಸಾಮಾಜಿಕ ವಿಮರ್ಶೆ ಇವರ ಸಾಹಿತ್ಯದ ಜೀವಾಳ. ಹುಟ್ಟಿನ ಆಧಾರದ ಮೇಲೆ ಮಾಡುವ ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸುವ ಅವರು, ಬ್ರಾಹ್ಮಣ-ಶೂದ್ರ ಎಂಬ ಭೇದವನ್ನು ನಿರಾಕರಿಸುತ್ತಾರೆ. ಕಪಟ ಕುಲಗುರುಗಳನ್ನು ಖಂಡಿಸಿ, ಸದ್ಗುರುವಿನ ಅಗತ್ಯವನ್ನು ಸಾರುತ್ತಾರೆ. ಹೆಣ್ಣು, ಹೊನ್ನು, ಮಣ್ಣು ಮತ್ತು ಪಂಚೇಂದ್ರಿಯಗಳ ವ್ಯಾಮೋಹವನ್ನು ತೊರೆದು ಅಂತರಂಗ ಶುದ್ಧಿಯಿಂದ ಅಮರನಾರಾಯಣನನ್ನು ಒಲಿಸಿಕೊಳ್ಳುವ ಮಾರ್ಗವನ್ನು ಬೋಧಿಸುತ್ತಾರೆ. ಸಾಮಾನ್ಯರ ನುಡಿಯಲ್ಲಿ ವೇದಾಂತ, ಯೋಗ, ಮತ್ತು ಸಂಖ್ಯಾಶಾಸ್ತ್ರದಂತಹ ಗಹನ ವಿಚಾರಗಳನ್ನು ಅಭಿವ್ಯಕ್ತಿಸಿರುವ ಇವರ ಸಾಹಿತ್ಯ, ಸಾಮಾಜಿಕ ಕಳಕಳಿ ಮತ್ತು ಆಧ್ಯಾತ್ಮಿಕ ಉನ್ನತಿಯ ಸಂಗಮವಾಗಿದೆ.

Article Details

Section

Research Articles

Author Biography

ವಿಜಯ ಕುಮಾರ ಎಸ್.

ಕನ್ನಡ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಕೋಟೆ, ಬೆಂಗಳೂರು ಗ್ರಾಮಾಂತರ.

How to Cite

ವಿಜಯ ಕುಮಾರ ಎಸ್. (2023). ಕೈವಾರ ತಾತಯ್ಯನ ಕೀರ್ತನ ವಚನಗಳಲ್ಲಿ ಜೀವನ ದರ್ಶನ. ಅಕ್ಷರಸೂರ್ಯ (AKSHARASURYA), 2(06), 163 to 178. https://aksharasurya.com/index.php/latest/article/view/156

References

ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಜೀವನ ಚರಿತ್ರೆ (2016), ವಾನರಾಶಿ ಬಾಲಕೃಷ್ಣ ಭಾಗವತರ್, ಧರ್ಮಾಧಿಕಾರಿಗಳು, ಶ್ರೀ ಯೋಗಿನಾರೇಯಣ ಯತೀಂದ್ರರ ಮಠ, ಶ್ರೀ ಕ್ಷೇತ್ರ ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.

ಅಮರನಾರೇಯಣ ವೇದಾಂತ ಸಾರಾವಳಿ ಕೀರ್ತನೆಗಳು (2016), ಧರ್ಮಾಧಿಕಾರಿಗಳು, ಶ್ರೀ ಯೋಗಿನಾರೇಯಣ ಯತೀಂದ್ರರ ಮಠ, ಶ್ರೀ ಕ್ಷೇತ್ರ ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.

ಬ್ರಹ್ಮಾಂಡಪುರಿ ಶತಕ (ತೆಲುಗು ಮೂಲ-ಕನ್ನಡ ವ್ಯಾಖ್ಯಾನ) (2010), ಕೈಪು ಲಕ್ಷ್ಮೀ ನರಸಿಂಹಶಾಸ್ತ್ರಿ - ಶ್ರೀ ಯೋಗಿನಾರೇಯಣ ಯತೀಂದ್ರರ ಮಠ, ಶ್ರೀ ಕ್ಷೇತ್ರ ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.

ಮಣ್ಣ ಬಳೆ ನಾದ (ಕೈವಾರ ತಾತಯ್ಯ ಒಂದು ಅಧ್ಯಯನ) (2010), ಡಾ. ಸಿ. ಎಸ್. ದ್ವಾರಕಾನಾಥ್ & ಎಂ. ಬೈರೇಗೌಡ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.