ಉತ್ತರ ಕರ್ನಾಟಕದ ಪ್ರತ್ಯೇಕತೆಯ ಬೇಡಿಕೆ: ಸಾಧ್ಯತೆ ಮತ್ತು ಸವಾಲುಗಳು

Main Article Content

ಸಿದ್ದಪ್ಪ ಮ್ಯಾಗೇರಿ
ಸ್ವಾಮಿ ಹೆಚ್.

Abstract

ಸ್ವಾತಂತ್ರ್ಯದ ನಂತರ ಭಾರತದಲ್ಲಿದ್ದ ನೂರಾರು ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಂದಿಗೆ ಸೇರಿಸಲು ಭಾರತ ಸರ್ಕಾರ ನೀತಿ ನಿರೂಪಣೆಗಳನ್ನು ಕೈಗೊಂಡು, ಸರ್ದಾರ್ ವಲ್ಲಭಭಾಯ್ ಪಟೇಲರವರ ನೇತೃತ್ವದಲ್ಲಿ ಸ್ಟೇಟ್ಸ್ ಮಿನಿಸ್ಟ್ರಿಯನ್ನು ರಚಿಸಲಾಯಿತು. ಅದರಂತೆ ವಿ. ಪಿ. ಮೆನನ್ ರವರ ಸಹಾಯ ಮತ್ತು ಸಲಹೆಯನ್ನು ಪಡೆದು ಪಟೇಲರು ಬಹುತೇಕ ದೇಶೀಯ ಸಂಸ್ಥಾನಗಳನ್ನು ಒಕ್ಕೂಟದಲ್ಲಿ ವಿಲೀನಗೊಳಿಸಿದರು. ಇದು ಒಂದು ಭಾಗವಾದರೆ, ಕರ್ನಾಟಕವು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಇತರೆ ಎಲ್ಲ ಕ್ಷೇತ್ರಗಳಲ್ಲಿ ಅಸಮತೋಲನದಿಂದ ಕೂಡಿದ ವಿವಿಧ ರಾಜಕೀಯ ಹಿತಾಸಕ್ತಿಗಳನ್ನು ಒಳಗೊಂಡು ತನ್ನದೇ ಆದ ವಿಶಿಷ್ಟ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದ ಪ್ರದೇಶಗಳ ಸೇರ್ಪಡೆಯೊಂದಿಗೆ ಒಂದು ಸಮಗ್ರ ರಾಜ್ಯವಾಗಿ ರೂಪಗೊಂಡಿರುವುದನ್ನು ಕಾಣಬಹುದು. ಕರ್ನಾಟಕ ರಚನೆಯಾಗುವುದಕ್ಕಿಂತ ಮೊದಲೇ ಅಲ್ಲಿ ಅತ್ಯಂತ ತೀವ್ರವಾದ ಪ್ರಾದೇಶಿಕ ಅಸಮತೋಲನಗಳು ಪ್ರಮುಖವಾಗಿ ಆ ಅಸ್ತಿತ್ವಕ್ಕೆ ಬಂದಿರುವುದು ವಿಪರ್ಯಾಸವೇ ಹೌದು. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪ್ರಾದೇಶಿಕ ಸಂಶೋಧನೆ ಎಂಬ ಪರಿಕಲ್ಪನೆಯ ಚಿಂತನೆಗಳು ಕಾಣಸಿಗುತ್ತವೆ. ಅದರಂತೆ ಭಾರತದಲ್ಲಿಯೂ ಈ ಅಂಶವು ಕೆಲವೊಂದು ರಾಜ್ಯಗಳ ಪಾರಂಪರಿಕ ಐತಿಹಾಸಿಕ ಹಿನ್ನೆಲೆಯಿಂದ ತಿಳಿಯುತ್ತದೆ. ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನದ ಮೂಲಗಳನ್ನು ಗಮನಿಸಿದಾಗ, ಮುಖ್ಯವಾಗಿ ಕರ್ನಾಟಕವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಾಗಿ ವಿಭಜಿಸಿಕೊಂಡು ಆಧುನಿಕತೆಯ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಇಂದು ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿರುವುದು ಗಮನಾರ್ಹವಾಗಿದೆ. ಏಕೀಕೃತ ಕರ್ನಾಟಕವಾಗಿ ಆರು ದಶಕಗಳೇ ಕಳೆದರೂ ಸಹ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಲ್ಲಬೇಕಾದ ನ್ಯಾಯಯುತ ಸೌಲಭ್ಯಗಳು ದೊರೆಯದೆ, ಸರ್ಕಾರದ ಮಲತಾಯಿ ಧೋರಣೆಯ ನೀತಿಗಳಿಗೆ ಒಳಗಾಗಿ ನಿರ್ಲಕ್ಷ್ಯಗೊಂಡಿದೆ. ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರಾರಂಭವಾದ ಅನೇಕ ಪ್ರಾಧಿಕಾರಗಳು ರಾಜಕೀಯ ನಾಯಕರುಗಳ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಯ ಪಾಲಾಗದೆ, ಅವೆಲ್ಲವೂ ಕೇವಲ ರಾಜಕಾರಣಿಗಳ ಜನಪ್ರಿಯತೆಗೆ ಅಸ್ತ್ರವಾಗುತ್ತಿವೆಯೇ? ಎಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಉತ್ತರ ಕರ್ನಾಟಕ ಅಭಿವೃದ್ಧಿಯ ಹೆಸರಿನಲ್ಲಿ ಆಯಾ ಪ್ರಾಧಿಕಾರಗಳ ಆಶಯಗಳಲ್ಲಿನ ನಂಬಿಕೆಯೂ ಅದರ ನೀತಿಗಳ ಅನುಷ್ಠಾನದಲ್ಲಿ ಇರಲಿಲ್ಲವೇ? ಪ್ರಾದೇಶಿಕವಾದ ಅಭಿವೃದ್ಧಿಯನ್ನು ತರಲು ಸರ್ಕಾರ ತಂದಿರುವ ನೀತಿಗಳು ಉತ್ತರ ಕರ್ನಾಟಕದ ಜನರಿಗೆ ಪೂರಕವಾಗಿಲ್ಲವೇ? ಎಂಬ ಕೆಲವು ಪ್ರಶ್ನೆಗಳೊಂದಿಗೆ ಉತ್ತರ ಕರ್ನಾಟಕದ ಜನರ ಬೇಡಿಕೆಯಾದ ಪ್ರತ್ಯೇಕತೆ ಅಥವಾ ಪ್ರತ್ಯೇಕ ರಾಜ್ಯದ ಬೇಡಿಕೆಯ ಸಾಧ್ಯತೆ ಮತ್ತು ಸವಾಲುಗಳ ಕುರಿತಾದ ಅಧ್ಯಯನವೇ ಪ್ರಸ್ತುತ ಲೇಖನದ ಭಾಗವಾಗಿದೆ.

Article Details

Section

Research Articles

Author Biographies

ಸಿದ್ದಪ್ಪ ಮ್ಯಾಗೇರಿ

ಸಂಶೋಧನಾರ್ಥಿ, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ.

ಸ್ವಾಮಿ ಹೆಚ್.

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ

How to Cite

ಸಿದ್ದಪ್ಪ ಮ್ಯಾಗೇರಿ, & ಸ್ವಾಮಿ ಹೆಚ್. (2025). ಉತ್ತರ ಕರ್ನಾಟಕದ ಪ್ರತ್ಯೇಕತೆಯ ಬೇಡಿಕೆ: ಸಾಧ್ಯತೆ ಮತ್ತು ಸವಾಲುಗಳು. ಅಕ್ಷರಸೂರ್ಯ (AKSHARASURYA), 8(06), 140 to 147. https://aksharasurya.com/index.php/latest/article/view/1547

References

ಗೋಪಾಲ್ ರಾವ್ ಎಚ್. ಎಸ್., 2012, ಕರ್ನಾಟಕ ಏಕೀಕರಣ ಇತಿಹಾಸ, ನವ ಕರ್ನಾಟಕ ಪಬ್ಲಿಕೇಶನ್ಸ್.

ಅಥಣಿ ಬಸಪ್ಪ, ತಡಸದ ಕಮಲಾಕ್ಷಿ, ರಾಮಸ್ವಾಮಿ ಹರೀಶ್‌, 2023, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ರಾಜಕಾರಣ, ಜಡಭಾರತ ಪ್ರಕಾಶನ, ಧಾರವಾಡ.

ಚಂದ್ರಶೇಖರ್ ಎಸ್., 2005, ಏಕೀಕರಣ ಒಂದು ಕಥನ, ಸತ್ಯ ಶ್ರೀ ಪ್ರಿಂಟರ್ಸ್, ಬೆಂಗಳೂರು.

ಗವಿಮಠ ಬಿ. ಎಸ್., 2011, ಬೆಳಗಾವಿ: ಕನ್ನಡ-ಕನ್ನಡಿಗ, ಪ್ರಗತಿ ಪ್ರಿಂಟ್, ಬೆಂಗಳೂರು.

ನಾಗಭೂಷಣ್ ಡಿ. ಎಸ್., 2009, ಕನ್ನಡ, ಕರ್ನಾಟಕ ಸಂಕಥನಗಳು, ವಿಸ್ಮಯ ಪ್ರಕಾಶನ, ಮೈಸೂರು.

ಜಾಮದಾರ್ ಶಿವಾನಂದ, 2016, ತಾರತಮ್ಯ, ಮನೋಹರ್ ಗ್ರಂಥಮಾಲಾ, ಧಾರವಾಡ.

ಚಂದ್ರ ಪೂಜಾರಿ ಎಂ., 2018, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಅಸಾದಿ ಮುಜಾಫರ್, 2017, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು, ಲಡಾಯಿ ಪ್ರಕಾಶನ, ಗದಗ.

ಕೇಶವ್ ಶರ್ಮಾ ಕೆ., 2011, ವಸಾಹತುಶಾಹಿ ಅನುಭವ, ಪೂರ್ಣಪ್ರಕಾಶನ, ಶಿವಮೊಗ್ಗ.

ಎ ಕ್ರಿಟಿಕಲ್ ಅನಾಲಿಸಿಸ್ ಆಫ್ ಡಾ. ಡಿ. ಎಂ. ನಂಜುಂಡಪ್ಪ ಕಮಿಟಿ ರಿಪೋರ್ಟ್, ಡಾ. ವಿಜಯಕುಮಾರ್ ಸಾಲಿಮನಿ.

https://swarajyamag.com/ideas/north-karnataka-statehood-we-need-a-new-states-reorganisation-commission

https://www.shankariasparliament.com/article/north-karnatakas-sectarian-call

https://vajiramandravi.com/ques-upsc-notes/regionalism/what-is-regionalism