ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಬೈ ಕರ್ನಾಟಕದ ಪಾತ್ರ: ಒಂದು ಐತಿಹಾಸಿಕ ವಿಶ್ಲೇಷಣೆ
Main Article Content
Abstract
ಕರ್ನಾಟಕದ ಏಕೀಕರಣ ಎಂಬ ಮಹಾನ್ ಕಾರ್ಯದಲ್ಲಿ ನಾಡಿನ ಎಲ್ಲ ಭಾಗದ ಹೋರಾಟಗಾರರು, ಸಂಘ-ಸಂಸ್ಥೆಗಳು, ಪತ್ರಿಕೆಗಳು ಭಾಗವಹಿಸಿದ್ದರೂ, ಏಕೀಕರಣ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವವನ್ನು ಮತ್ತು ಆರಂಭಿಕ ಹೋರಾಟವನ್ನು ಮುಂಬೈ ಕರ್ನಾಟಕದ ನಾಯಕರುಗಳು ಮತ್ತು ಸಂಘಸಂಸ್ಥೆಗಳು ವಹಿಸಿವೆ. ಮೈಸೂರು ಭಾಗದ ಜನತೆ ಮಹಾರಾಜರ ಆಡಳಿತದ ಅನುಕೂಲತೆಗಳನ್ನು ಮತ್ತು ಭಾಷಾ ಅಸ್ಮಿತೆಯ ಕೊರತೆಯನ್ನು ಅನುಭವಿಸದಿರುವುದೇ ಆ ಭಾಗದಲ್ಲಿ ಏಕೀಕರಣ ಚಳುವಳಿ ಪ್ರಾರಂಭದಲ್ಲಿ ಬೆಳೆದು ಬರದಿರುವುದಕ್ಕೆ ಕಾರಣವಾಗಿದ್ದು, ಆಲೂರು ವೆಂಕಟರಾಯರು ಹೇಳುವಂತೆ, “ಮೈಸೂರು ಸಂಸ್ಥಾನದ ಜನತೆ ತಾಯಿಯ ತೊಡೆಯ ಮೇಲೆ ಮಲಗಿ ಹಾಲು ಕುಡಿದವರು. ಆದ್ದರಿಂದ ಅವರಿಗೆ ಕರ್ನಾಟಕದ ಏಕೀಕರಣದ ಕಲ್ಪನೆ ಇರಲು ಸಾಧ್ಯವಿಲ್ಲʼʼ ಎಂದು ಹೇಳಿದರು. ಮುಂದೆ 1927 ರಲ್ಲಿ ರಾಜಕೀಯ ನಾಯಕರು ಮತ್ತು ಗಣ್ಯರ ಸಹಿ ಪಡೆದು ಕರ್ನಾಟಕ ಏಕೀಕರಣದ ಸಾರ್ವತ್ರಿಕ ಮನವಿಗೆ ಸಹಿ ಮಾಡಿದ ಬಹುತೇಕರು ಮುಂಬೈ ಕರ್ನಾಟಕ ಭಾಗದವರೇ ಆಗಿದ್ದರು. ಒಟ್ಟಿನಲ್ಲಿ ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಗಾಗಿ ಕನ್ನಡಿಗರು ಹೋರಾಡಿದ್ದು, ಈ ಹೋರಾಟಕ್ಕೆ ನಾಂದಿ ಹಾಕಿ ಏಕೀಕೃತ ಕರ್ನಾಟಕದ ರಚನೆಗೆ ಪ್ರಮುಖ ಕೊಡುಗೆಯನ್ನು ಮುಂಬೈ ಕರ್ನಾಟಕ ವಹಿಸಿರುವುದನ್ನು ನೋಡಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗೋಪಾಲ್ ರಾವ್ ಎಚ್ಎಸ್(,(2012) ಕರ್ನಾಟಕ ಏಕೀಕರಣ ಇತಿಹಾಸ ನವ ಕರ್ನಾಟಕ ಪಬ್ಲಿಕೇಶನ್ಸ್.
ಅಥಣಿ ಬಸಪ್ಪ, ತಡಸದ ಕಮಲಾಕ್ಷಿ, ರಾಮಸ್ವಾಮಿ ಹರೀಶ್, (2023), ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ರಾಜಕಾರಣ, ಜಡಭಾರತ ಪ್ರಕಾಶನ, ಧಾರವಾಡ.
ಚಂದ್ರಶೇಖರ್ ಎಸ್, (2005), ಏಕೀಕರಣ ಒಂದು ಕಥನ ಸತ್ಯ ಶ್ರೀ ಪ್ರಿಂಟರ್ಸ್ ಬೆಂಗಳೂರು.
ಗವಿಮಠ ಬಿಎಸ್, (2011), ಬೆಳಗಾವಿ ಕನ್ನಡ ಕನ್ನಡಿಗ ಪ್ರಗತಿ ಪ್ರಿಂಟ್ ಬೆಂಗಳೂರು.
ನಾಗಭೂಷಣ್ ಡಿಎಸ್, (2009), ಕನ್ನಡ ಕರ್ನಾಟಕ ಸಂಕಥನಗಳು ವಿಸ್ಮಯ ಪ್ರಕಾಶನ ಮೈಸೂರು
ಪ್ರೊ. ಷೇಕ್ ಅಲಿ ಕರ್ನಾಟಕ ಚರಿತ್ರೆ
ಗೋವಿಂದರಾಜು. ಸಿ. ಆರ್. - ಕರ್ನಾಟಕ ಏಕೀಕರಣ ಹಾಗೂ ನಾಮಕರಣ
ಪಾಲಾಕ್ಷ – ಕರ್ನಾಟಕ ಇತಿಹಾಸ
Aparanti N R – History of Karnataka
Kamath Suryanath U - A Concise History of Karnataka