ಕನ್ನಡ ದಿನ ಪತ್ರಿಕೆಗಳಲ್ಲಿ ಮೂಡಿ ಬರುವ ಪೌರಾಣಿಕ ಕಥೆಗಳ ಕುರಿತು ಒಂದು ಅಧ್ಯಯನ
Main Article Content
Abstract
ಸಂಸ್ಕೃತಿ ಅಥವಾ ಧರ್ಮದಲ್ಲಿನ ದಂತಕಥೆಗಳಾದ ಪುರಾಣಗಳು ಆಡುಭಾಷೆ ಅಥವಾ ಲಿಖಿತ ರೂಪದಲ್ಲಿ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಡುತ್ತವೆ. ವಿಜಯವಾಣಿ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಪೌರಾಣಿಕ ಕಥೆಗಳು ಓದುಗರ ಮೇಲೆ ಬೀರುವ ಪ್ರಭಾವವನ್ನು ಪರಿಮಾಣಾತ್ಮಕ ಸಂಶೋಧನಾ ವಿಧಾನ ಮತ್ತು ಪ್ರಶ್ನಾವಳಿ ತಂತ್ರದ ಮೂಲಕ ವಿಶ್ಲೇಷಿಸಲಾಗಿದೆ. ಯುವಜನತೆ ಸೇರಿದಂತೆ ಬಹುತೇಕ ವಾಚಕರು ದಿನಪತ್ರಿಕೆಗಳಲ್ಲಿ ಬರುವ ಪೌರಾಣಿಕ ಕಥೆಗಳನ್ನು ಓದಲು ಹೆಚ್ಚು ಆಸಕ್ತಿ ತೋರುತ್ತಾರೆ. ಈ ಕಥೆಗಳ ಓದುವಿಕೆಯಿಂದ ಜನರಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳು, ಹಿರಿಯರನ್ನು ಗೌರವಿಸುವ ಗುಣ ಹಾಗೂ ಸಹಾಯ ಮಾಡುವ ಮನೋಭಾವ ಬೆಳೆಯಲು ಸಹಕಾರಿಯಾಗಿದೆ ಎಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಸೈಯದ್ ಮುಯಿನ್ (2021), ಆಯ್ದ ಪುರಾಣ ಕಾವ್ಯಗಳಲ್ಲಿ ಪುರುಷ ಭಾವಗಳ ಒಳನೋಟ, ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ.
ಡಾ. ಜಿ. ಜಿ. ಹೆಗಡೆ, ಕನ್ನಡಪ್ರಭ, ಜನವರಿ 2014.
ಎ. ಜೆ. ಸುರೇಶ್, ಕನ್ನಡಪ್ರಭ, ಜನವರಿ 2014.
ಗರ್ಬ್ಬರ್, ಜಿ. & ಗ್ರಾಸ್, ಎಲ್. (1976), ದೂರದರ್ಶನದೊಂದಿಗೆ ಜೀವನ: ಹಿಂಸೆ ಪ್ರೊಫೈಲ್, ಜರ್ನಲ್ ಆಫ್ ಕಮ್ಯುನಿಕೇಶನ್.
ಗರ್ಬ್ಬರ್, ಜಿ., ಗ್ರಾಸ್, ಎಲ್., ಮೋರ್ಗಾನ್, ಎಂ., ಸಿಗೊರಿಲ್ಲಿ, ಎನ್., & ಜಾಕ್ಸನ್-ಬೀಕ್, ಎಂ. (1979), ಶಕ್ತಿಯ ಪ್ರದರ್ಶನ: ಹಿಂಸೆಯ ವಿವರ, ಜರ್ನಲ್ ಆಫ್ ಕಮ್ಯುನಿಕೇಶನ್.
ಕೆ. ಅನಂತರಾಮರಾವ್, ಮಹಾಭಾರತ, ವಿದ್ಯಾ ಪಬ್ಲಿಷಿಂಗ್ ಹೌಸ್, 2015.
ಎಸ್. ಎಲ್. ಶೇಷಗಿರಿರಾವ್, ಗ್ರೀಕ್ ರಂಗಭೂಮಿ ಮತ್ತು ನಾಟಕ, ಸಪ್ನ ಬುಕ್ ಹೌಸ್, ಬೆಂಗಳೂರು, 2013.
ಎಸ್. ಎಲ್. ಶೇಷಗಿರಿರಾವ್, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಪ್ನ ಬುಕ್ ಹೌಸ್, ಬೆಂಗಳೂರು, 2013.