ದೇವನೂರ ಮಹಾದೇವರ ಕಥೆಗಳು: ಜಾಗತೀಕರಣ ಮತ್ತು ದಲಿತರು

Main Article Content

ಸುನಿಲ್ ಬಿ. ವೈ.

Abstract

ಜಾಗತೀಕರಣವು ಮನುಷ್ಯ ಸಂಬಂಧಗಳಿಗಿಂತ ಲಾಭದ ದುರಾಸೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದು ಸಾಮಾಜಿಕ ಸಂಬಂಧಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ದೇವನೂರ ಮಹಾದೇವರ ಕಥೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಜಾಗತೀಕರಣದ ಪ್ರಭಾವದಿಂದಾಗಿ ಕೃಷಿ ಕಾರ್ಮಿಕರು ಮತ್ತು ಕೆಳವರ್ಗದ ಜನರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಆಧುನಿಕತೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂಬ ಅರಿವು ಮಹಾದೇವರ ಕತೆಗಳಲ್ಲಿ ಎದ್ದು ಕಾಣುತ್ತದೆ. ದಲಿತರು ಕೇವಲ ಹಸಿವಿನಿಂದ ಮುಕ್ತರಾದರೆ ಸಾಲದು, ತಮ್ಮ ಸಾಂಸ್ಕೃತಿಕ ಬೇರುಗಳನ್ನು ಮತ್ತು 'ಮಾರಿಗುಡಿ'ಯಂತಹ ಸ್ವಾಯತ್ತ ಲೋಕವನ್ನು ಉಳಿಸಿಕೊಳ್ಳುವ ಮೂಲಕ ಪುರೋಹಿತಶಾಹಿ ಹಾಗೂ ಜಾಗತೀಕರಣದ ಕೊಳ್ಳುಬಾಕ ಸಂಸ್ಕೃತಿಯನ್ನು ಎದುರಿಸಬೇಕು ಎಂಬ ಲೋಕನೋಟವನ್ನು ಈ ಕಥೆಗಳು ಕಟ್ಟಿಕೊಡುತ್ತವೆ.

Article Details

Section

Research Articles

Author Biography

ಸುನಿಲ್ ಬಿ. ವೈ.

ಸಂಶೋಧನಾರ್ಥಿ, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

How to Cite

ಸುನಿಲ್ ಬಿ. ವೈ. (2023). ದೇವನೂರ ಮಹಾದೇವರ ಕಥೆಗಳು: ಜಾಗತೀಕರಣ ಮತ್ತು ದಲಿತರು. ಅಕ್ಷರಸೂರ್ಯ (AKSHARASURYA), 2(06), 45 to 53. https://aksharasurya.com/index.php/latest/article/view/143

References

ಎಲ್ಲ ಕಥೆ ಕಾದಂಬರಿಗಳು (2015), ದೇವನೂರ ಮಹಾದೇವ, ಅಭಿನವ ಪ್ರಕಾಶನ, ಬೆಂಗಳೂರು.

ವಿಮರ್ಶೆಯ ಪರಿಭಾಷೆ, ಓ. ಎಲ್. ನಾಗಭೂಷಣ.

ಕಾದಂಬರಿ ಸ್ವರೂಪ ಹೊಸಚಿಂತನೆ, ಜಿ. ಎಸ್. ಅಮೂರ.

ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ, ನಟರಾಜ್ ಹುಳಿಯಾರ್, ಪಲ್ಲವ ಪ್ರಕಾಶನ.

ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಎಲ್. ಎಸ್. ಶೇಷಗಿರಿರಾವ್.

ಕನ್ನಡ ಕಥನ ಸಾಹಿತ್ಯ: ಸಣ್ಣಕತೆ, ಜಿ. ಎಸ್. ಅಮೂರ.

ಕಥನ ಪ್ರೀತಿ, ಟಿ. ಪಿ. ಅಶೋಕ.

ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ದಾರಿ, ಪ್ರೊ. ಎಲ್. ಎಸ್. ಶೇಷಗಿರಿರಾವ್.

ಕನ್ನಡ ಸಣ್ಣ ಕಥೆಗಳು (2017), ಸಂಪಾದಕರು: ಜಿ. ಹೆಚ್. ನಾಯಕ.