ಬೇಂದ್ರೆಯವರ ಕಾವ್ಯ: ಜನಪದ ಸಾಹಿತ್ಯದ ಪ್ರಭಾವ
Main Article Content
Abstract
ಬೇಂದ್ರೆಯವರು ನವೋದಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರು ಕಾವ್ಯ ಕೃತಿಯಿಂದ ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆನಿಸಿಕೊಂಡವರು. ʼಜಗದ ಕವಿ ಯುಗದ ಕವಿʼ ಎಂದೇ ಪ್ರಸಿದ್ಧಿಯಾಗಿದ್ದು ಹೀಗೆ. ಆಧುನಿಕ ಕಾಲದ ಕಾವ್ಯಕ್ಕೆ ಅತ್ಯಂತ ಸತ್ವಶಾಲಿಯಾದಂತಹ ಕವನಗಳನ್ನು ನೀಡುವುದರ ಮೂಲಕ ಆ ಕಾಲದ ಕಾವ್ಯಕ್ಕೆ ಕಸುವನ್ನೂ, ಚಿಂತನೆಯ ಸತ್ವವನ್ನೂ, ಬೇಂದ್ರೆಯವರ ಕಾವ್ಯದಲ್ಲಿ ಮನಗಾಣಬಹುದು. ಬೇಂದ್ರೆಯವರ ಕಾವ್ಯದ ಪ್ರೇರಣೆ ಮತ್ತು ಪ್ರಭಾವಗಳನ್ನು ಗುರುತಿಸುವಾಗ ಕನ್ನಡ ಸಾಹಿತ್ಯದ ಬಹುದೊಡ್ಡದಾದ ಪರಂಪರೆಯೊಂದನ್ನು ಕವಿ ತಮ್ಮ ಕವಿತಾ ಸಾಮರ್ಥ್ಯಕ್ಕೆ ಇಟ್ಟುಕೊಂಡಿದ್ದು ಅರಿವಾಗುತ್ತದೆ. ಇದರೊಂದಿಗೆ ಜನಪದ ಸಾಹಿತ್ಯವು ಅವರ ಕಾವ್ಯವನ್ನು ಪ್ರಭಾವಿಸಿರುವುದನ್ನು ಕಾಣುತ್ತೇವೆ. ಈ ನಿಟ್ಟಿನಲ್ಲಿ ಪ್ರಸ್ತುತ ಈ ಲೇಖನದಲ್ಲಿ ಬೇಂದ್ರೆಯವರ ಕಾವ್ಯದಲ್ಲಿ ಜನಪದ ಸಾಹಿತ್ಯದ ಪ್ರಭಾವವನ್ನು ಪರಾಮರ್ಶಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ರಾಘವೇಂದ್ರರಾವ್ ಎಚ್.ಎಸ್., (1995), ಹಾಡೇ ಹಾದಿ ತೋರಿಸಿತು, ಕನ್ನಡ ಕ್ರೈಸ್ತ್ ಕಾಲೇಜು, ಬೆಂಗಳೂರು.
ರುಕ್ಮಿಣಿ ಪರ್ವತಿ, (1982), ಅಂಬಿಕಾತನಯದತ್ತರ ಭಾವಗೀತೆಗಳು, ಉಷಾ ಸಾಹಿತ್ಯ ಮಾಲೆ, ಮೈಸೂರು.
ನಾಗರಾಜ ಡಿ.ಆರ್., (1987), ಶಕ್ತಿ ಶಾರದೆಯ ಮೇಳ, ಅಕ್ಷರ ಪ್ರಕಾಶನ, ಹೆಗ್ಗೋಡು.
ರಾಜಪುರೋಹಿತ ಬಿ.ಬಿ., (1998), ಬೇಂದ್ರೆಯವರ ಕಾವ್ಯಭಾಷೆ, ಕ.ವಿ.ವಿ. ಧಾರವಾಡ.
ಬಸು ಬೇವಿನಗಿಡದ, (2013), ಬೆಳಕಿನ ಹಕ್ಕಿ: ಬೇಂದ್ರೆ ನಿಸರ್ಗ ಕಾವ್ಯ, ಸುಂದರ ಪ್ರಕಾಶನ, ಧಾರವಾಡ.
ಆನಂದಕುಮಾರ ಎಂ ಜಕ್ಕಣ್ಣವರ, (2021) ಬೇಂದ್ರೆ ಕಾವ್ಯದದಲ್ಲಿ ಪ್ರೇಮ: ವಿವಿಧ ಆಯಾಮಗಳು, ಅಪ್ರಕಟಿತ ಪಿಎಚ್.ಡಿ ಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ.