ವಚನ ಕ್ರಾಂತಿ ಮತ್ತು ನಾಟಕ ಸಾಹಿತ್ಯ
Main Article Content
Abstract
ಕನ್ನಡ ನಾಟಕ ಸಾಹಿತ್ಯವು ಪ್ರಾಚೀನ ಕಾಲದಲ್ಲಿ ಜನರ ನಂಬಿಕೆ, ಆಚರಣೆ ಮತ್ತು ಸಂಪ್ರದಾಯದ ಪ್ರದರ್ಶನವಾಗಿದ್ದರೆ, ಆಧುನಿಕ ಕಾಲದಲ್ಲಿ ಅದು ಸ್ವತಂತ್ರ ಕಲೆಯ ರೂಪವನ್ನು ಪಡೆದಿದೆ. ʼಮಿತ್ರವಿಂದ ಗೋವಿಂದʼ ನಾಟಕದಿಂದ ಆರಂಭವಾಗಿ, ಸಂಸ್ಕೃತ ಮತ್ತು ಗ್ರೀಕ್ ರಂಗಭೂಮಿಯ ಪ್ರಭಾವದಲ್ಲಿ ಕನ್ನಡ ನಾಟಕವು ತನ್ನ ಪೂರ್ಣ ಸ್ವರೂಪವನ್ನು ತಲುಪಿತು. ಮೈಸೂರು ಒಡೆಯರ ಕಾಲದಿಂದ ಪ್ರಾರಂಭಗೊಂಡ ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಶಾಕುಂತಲಾ ನಾಟಕ ನಾಂದಿ ಹಾಡಿತು. ಶರಣರ ವಚನ ಚಳುವಳಿ 12ನೇ ಶತಮಾನದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂದೇಶಗಳನ್ನು ಒಳಗೊಂಡಿದ್ದು, ಆಧುನಿಕ ನಾಟಕಕಾರರು ಈ ಚಳುವಳಿಯ ಅಂಶಗಳನ್ನು ಸಮಕಾಲೀನ ಸನ್ನಿವೇಶಗಳಿಗೆ ಹೊಂದಿಕೊಂಡು ನಾಟಕಗಳನ್ನು ರಚಿಸುತ್ತಿದ್ದಾರೆ. ಪಿ. ಲಂಕೇಶರ ʼಸಂಕ್ರಾಂತಿʼ, ಗಿರೀಶ್ ಕಾರ್ನಾಡರ ʼತಲೆದಂಡʼ, ಹೆಚ್.ಎಸ್.ಶಿವಪ್ರಕಾಶರ ʼಮಹಾಚೈತ್ರʼ, ಚಂದ್ರಶೇಖರ್ ಕಂಬಾರ ಅವರ ʼಶಿವರಾತ್ರಿʼ, ಡಾ. ನಟರಾಜ್ ಬೂದಾಳ್, ಡಾ. ವಿಕ್ರಂ ವಿಸಾಜಿ ಅವರ ನಾಟಕಗಳು ವಚನ ಕ್ರಾಂತಿಯ ಪರಂಪರೆಯನ್ನು ನವೀಕೃತವಾಗಿ ಸಮಕಾಲೀನ ದೃಷ್ಟಿಕೋನದಲ್ಲಿ ಪ್ರದರ್ಶಿಸುತ್ತವೆ. ಈ ನಾಟಕಗಳು ಶರಣರ ತತ್ತ್ವಗಳನ್ನು ಸಾಮಾಜಿಕ ನ್ಯಾಯ, ಜಾತಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರಚಾರಕ್ಕೆ ಉಪಯೋಗಿಸುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೃಷ್ಣಕುಮಾರ್ ಪಿ.ಸಿ., (1998), ಸಾಹಿತ್ಯ ಪ್ರವೇಶ, ಚೇತನ ಬುಕ್ ಹೌಸ್, ಮೈಸೂರು.
ಕೀರ್ತಿನಾಥ ಕುರ್ತಕೋಟಿ, (1991), ಯುಗದರ್ಮ ಹಾಗೂ ಸಾಹಿತ್ಯ ದರ್ಶನ, ಮನೋಹರ ಗ್ರಂಥಮಾಲೆ, ಧಾರವಾಡ.
ಗಿರಡ್ಡಿ ಗೋವಿಂದರಾಜು, (1998), ನಾಟಕ ಸಾಹಿತ್ಯ ಮತ್ತು ರಂಗಭೂಮಿ, ಅಕ್ಷರ ಪ್ರಕಾಶನ, ಸಾಗರ.
ನಾಗಭೂಷಣ ಎ.ಆರ್., (1993), ನಾಟಕ ಪ್ರವೇಶಿಕೆ, ಅಕ್ಷರ ಪ್ರಕಾಶನ, ಸಾಗರ.
ಮರುಳಸಿದ್ಧಪ್ಪ ಕೆ., (1993), ಆಧುನಿಕ ಕನ್ನಡ ನಾಟಕ, ಲಿಪಿ ಪ್ರಕಾಶನ, ಬೆಂಗಳೂರು.
ತಿಪ್ಪೆರುದ್ರಸ್ವಾಮಿ ಹೆಚ್., (1987), ವಚನ ಚಳುವಳಿ, ಶ್ರೀ ಶರಣ ಬಸವೇಶ್ವರ ಗ್ರಂಥ ವಿಶ್ವವಿದ್ಯಾಲಯ, ಗುಲಬರ್ಗಾ.
ಜಯಶ್ರೀ ದಂಡೆ (ಸಂ.), ವೀರಣ್ಣ ದಂಡೆ, (2012), ಶರಣರ ಹಳೆಯ ನಾಟಕಗಳು, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿ.ವಿ., ಗುಲಬರ್ಗಾ.