ಆಧುನಿಕ ಜಗತ್ತಿನಲ್ಲಿ ಭಾಷಾ ಅನುವಾದದ ಪ್ರಾಮುಖ್ಯತೆ
Main Article Content
Abstract
ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಮತ್ತು ದೇವ ವಾಣಿ ಎಂದು ಕರೆಯಲ್ಪಡುತ್ತದೆ. ಇದು ಭಾರತದ ಪ್ರಾಚೀನ, ಧಾರ್ಮಿಕ ಗ್ರಂಥಗಳಾದ ವೇದಗಳು, ಮಹಾಭಾರತ ಮತ್ತು ರಾಮಾಯಣದ ಭಾಷೆಯಾಗಿದೆ. ಸಂಸ್ಕೃತವು ಭಾರತೀಯ ಸಾಹಿತ್ಯ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಮೂಲ ಸ್ತಂಭವಾಗಿದೆ. ಇದರ ಅಧ್ಯಯನವೂ ಜ್ಞಾನ ಮತ್ತು ವಿಜ್ಞಾನದ ಪ್ರಗತಿಗೆ ಹಾಗೂ ಭಾರತದ ಭಾಷೆಗಳ ಏಕತೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಸಂಸ್ಕೃತದಲ್ಲಿ ಅಪಾರವಾದ ಜ್ಞಾನ ಮತ್ತು ಸಾಹಿತ್ಯವಿದೆ. ಕಾಳಿದಾಸನ ಕೃತಿಗಳು, ಭಗವದ್ಗೀತೆ ಮತ್ತು ವೇದಗಳು ಸಂಸ್ಕೃತದಲ್ಲಿಯೇ ರಚಿತವಾಗಿವೆ. ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಪ್ರಾಚೀನ ಗ್ರಂಥಗಳು ಸಂಸ್ಕೃತದಲ್ಲಿವೆ. ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಸಂಸ್ಕಾರಗಳು ಸಂಸ್ಕೃತದಲ್ಲಿ ನಡೆಯುತ್ತವೆ. ಅನೇಕ ಭಾರತೀಯ ಭಾಷೆಗಳು ಸಂಸ್ಕೃತದಿಂದಲೇ ಹುಟ್ಟಿಕೊಂಡಿವೆ, ಅಥವಾ ಅದರ ಪ್ರಭಾವಕ್ಕೆ ಒಳಗಾಗಿವೆ ಎಂದು ಹೇಳಬಹುದು. ಭಾರತೀಯ ಭಾಷೆಗಳ ನಡುವೆ ಏಕತೆಯನ್ನು ಬೆಳೆಸಲು ಸಹಾಯವಾಗಿದೆ. ಸಂಸ್ಕೃತ ಅಧ್ಯಯನವೋ ಭಾರತೀಯ ಪೂರ್ವಜರ ಜ್ಞಾನ, ತತ್ವಶಾಸ್ತ್ರ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಈ ಆಧುನಿಕ ಜಗತ್ತಿನಲ್ಲಿ ಭಾಷಾ ಅನುವಾದ ಎನ್ನುವುದು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ವಿವಿಧ ಭಾಷಾ ಹಿನ್ನೆಲೆಯ ಜನರಿಗೆ ಅರ್ಥ ಮಾಡಿಕೊಳ್ಳಲು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಲು ಭಾಷಾಂತರವು ಅನುವು ಮಾಡಿಕೊಡುತ್ತದೆ. ಸಂಸ್ಕೃತಿ ಮತ್ತು ಸಾಹಿತ್ಯದ ಪ್ರಸಾರಕ್ಕಾಗಿ ಅನುವಾದವು ಬಹಳ ಮುಖ್ಯವಾಗಿದೆ. ಸಾಹಿತ್ಯ, ಕಲೆ ಮತ್ತು ಇತರ ಸಂಸ್ಕೃತಿಗಳನ್ನು ಪ್ರಪಂಚದಾದ್ಯಂತ ಹರಡಲು ಸಹಾಯ ಮಾಡುತ್ತದೆ. ಭಾಷಾ ಅನುವಾದವು ಒಂದು ಭಾಷೆಯ ಸಂದೇಶವನ್ನು ಇನ್ನೊಂದು ಭಾಷೆಗೆ ಅರ್ಥ, ಸಂದರ್ಭ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಸಂರಕ್ಷಿಸಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಜಾಗತಿಕ ಸಂವಹನವನ್ನು ಸುಧಾರಿಸುವುದು, ಸಾಹಿತ್ಯ ಮತ್ತು ಜ್ಞಾನವನ್ನು ಹಂಚಿಕೊಳ್ಳುವುದು, ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳನ್ನು ಬೆಳೆಸುವುದು, ಮತ್ತು ವಿವಿಧ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದರಲ್ಲಿ ಇದರ ಮಹತ್ವವಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವೇಣಿಮಾಧವ ಶಾಸ್ತ್ರಿ ಜೋಶಿ, (2010) ಮಹಾಮಾಯಿ, ರೂಪಾ ಪಬ್ಲಿಕೇಶನ್ಸ್, ಧಾರವಾಡ.
ಮುಗಳಿ ರಂ.ಶ್ರೀ., (2021), ಕನ್ನಡ ಸಾಹಿತ್ಯ ಚರಿತ್ರೆ, ಪ್ರತಿಭಾ ಮುದ್ರಣ, ಧಾರವಾಡ.
ಕೃಷ್ಣಮೂರ್ತಿ ಕಿತ್ತೂರ, (2014), ಭಾರತೀಯ ಸಾಹಿತ್ಯ ಸಮೀಕ್ಷೆ, ಕನ್ನಡ ಅಧ್ಯಯನ ಪೀಠ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಕೃಷ್ಣಮೂರ್ತಿ ಕೆ., (2018), ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ ಚರಿತ್ರೆ, ಸಂಶೋಧನಾ ಪ್ರತಿಷ್ಠಾನ, ಮೈಸೂರು.
ಭೈರಪ್ಪ ಎಸ್.ಎಲ್., (2018), ಧರ್ಮಶ್ರೀ, ಪ್ರಕಾಶನ ಸಾಹಿತ್ಯ ಭಂಡಾರ, ಬೆಂಗಳೂರು.
ಭೈರಪ್ಪ ಎಸ್.ಎಲ್., (1998), ಸಾರ್ಥ, ಸಾಹಿತ್ಯ ಪ್ರಕಾಶನ ಬೆಂಗಳೂರು.