ಜಾನಪದ ಸಾಹಿತ್ಯ ಮತ್ತು ಸ್ತ್ರೀ ಚಿಂತನೆ

Main Article Content

ಸುನೈನಾ ಎಂ.ಎಂ.

Abstract

ಈ ಲೇಖನವು ಕನ್ನಡದ ಜಾನಪದ ಸಾಹಿತ್ಯದ ಶ್ರೀಮಂತಿಕೆಯನ್ನು ವಿಶ್ಲೇಷಿಸುತ್ತದೆ. ಮೌಖಿಕ ಪರಂಪರೆಯಿಂದ ಹರಿದು ಬಂದ ಜನಪದ ಸಾಹಿತ್ಯವು ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ತ್ರಿಪದಿಗಳು, ಗಾದೆಗಳು, ಗರತಿಯ ಹಾಡುಗಳು, ಭಜನೆಗಳು, ಕುಣಿತಗಳು ಮುಂತಾದ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವ್ಯಕ್ತವಾಗಿದೆ. ಇವುಗಳಲ್ಲಿ ತಾಯಿ-ತವರು, ಭೂಮಿತಾಯಿ, ದೇವತೆಗಳು, ಪ್ರೀತಿ, ಭಕ್ತಿ, ಸಹೋದರತೆ, ಸಹಬಾಳ್ವೆ ಮತ್ತು ದುಡಿಮೆಯ ಮೌಲ್ಯಗಳು ವ್ಯಕ್ತವಾಗಿವೆ. ಜನಪದ ಸಾಹಿತ್ಯವು ಕೇವಲ ಮನರಂಜನೆ ಮಾತ್ರವಲ್ಲ, ಜೀವನದ ದರ್ಶನ, ನೈತಿಕ ಬೋಧನೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಪ್ರಮುಖ ಸಾಧನವಾಗಿದೆ. ಆಧುನಿಕ ಜಾಗತೀಕರಣದ ಯುಗದಲ್ಲೂ ಜನಪದ ಸಾಹಿತ್ಯದ ಮೌಲ್ಯಗಳು ಸಮಾಜಕ್ಕೆ ಪ್ರೇರಣೆಯಾಗಿ, ಹೊಸ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ಹೀಗಾಗಿ, ಜಾನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾಯಿ ಬೇರಾಗಿದ್ದು, ಹಳೆಬೇರು-ಹೊಸ ಚಿಗುರುಗಳನ್ನು ಸೇರ್ಪಡೆಗೊಳಿಸುವ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ.

Article Details

Section

Research Articles

Author Biography

ಸುನೈನಾ ಎಂ.ಎಂ.

ಕನ್ನಡ ಉಪನ್ಯಾಸಕಿ, ಪಿ.ಸಿ. ಜಾಬಿನ್ ವಿಜ್ಞಾನ, ಮಹಾವಿದ್ಯಾಲಯ(ಬಿ.ಸಿ.ಎ), ಹುಬ್ಬಳ್ಳಿ.

How to Cite

ಸುನೈನಾ ಎಂ.ಎಂ. (2025). ಜಾನಪದ ಸಾಹಿತ್ಯ ಮತ್ತು ಸ್ತ್ರೀ ಚಿಂತನೆ. ಅಕ್ಷರಸೂರ್ಯ (AKSHARASURYA), 8(02), 211 to 219. https://aksharasurya.com/index.php/latest/article/view/1408

References

ಹಲಸಂಗಿ ಗೆಳೆಯರು, (2017), ಗರತಿಯ ಹಾಡುಗಳು, ಕಾವ್ಯಶ್ರೀ ಪ್ರಕಾಶನ, ಬೆಂಗಳೂರು.

ಸೀತಾರಾಮಯ್ಯ ವಿ., (1978), ಜಾನಪದ ಸಾಹಿತ್ಯ, ಸಪ್ನ ಬುಕ್ ಹೌಸ್, ಬೆಂಗಳೂರು.

ನಾಯಕ ಹಾ.ಮಾ., (1967), ಹೊನ್ನ ಬಿತ್ತೇವು ಹೋಲಕೆಲ್ಲ, ಕರ್ನಾಟಕ ಜನಪದ ಅಕಾಡೆಮಿ, ಬೆಂಗಳೂರು.

ಪರಮಶಿವಯ್ಯ ಜಿ.ಶಂ., (2012), ಜನಪದ ಕೆಲವು ಮುಖಗಳು, ಸಾಗರ ಪ್ರಕಾಶನ, ಬೆಂಗಳೂರು.