ಕನ್ನಡ ಭಾಷೆ ಮತ್ತು ಅನುವಾದ ಸಾಹಿತ್ಯ
Main Article Content
Abstract
ಕನ್ನಡ ಭಾಷೆ ಮತ್ತು ಅನುವಾದ ಸಾಹಿತ್ಯʼ ಕುರಿತ ಈ ಲೇಖನವು ಕನ್ನಡದಲ್ಲಿನ ಅನುವಾದ ಪರಂಪರೆಯ ಬೆಳವಣಿಗೆ ಮತ್ತು ಮಹತ್ವವನ್ನು ವಿಶ್ಲೇಷಿಸುತ್ತದೆ. ಪ್ರಾಚೀನ ಮೌಖಿಕ ಪರಂಪರೆ ಹಾಗೂ ಶಾಸನಗಳಿಂದ ಹಿಡಿದು, ಮಧ್ಯಕಾಲೀನ ಸಂಸ್ಕೃತ ಸಾಹಿತ್ಯದ ಪ್ರಭಾವ, ವಸಾಹತು ಯುಗದ ಪಾಶ್ಚಾತ್ಯ ಸಾಹಿತ್ಯದ ಆಮದು, ಇತ್ಯಾದಿ ಹಂತಗಳನ್ನು ಈ ಲೇಖನ ಸ್ಪಷ್ಟಪಡಿಸುತ್ತದೆ. ಕನ್ನಡದಲ್ಲಿನ ಅನುವಾದವು ಮೂಲದ ನಕಲು ಅಲ್ಲ, ಬದಲಾಗಿ ಹೊಸ ಅನುಸೃಷ್ಟಿ ಮತ್ತು ಮರುರೂಪವೆಂಬುದಾಗಿ ಲೇಖನ ತೋರಿಸುತ್ತದೆ. ಕುವೆಂಪು, ಬೇಂದ್ರೆ, ಬಿ.ಎಂ. ಶ್ರೀ ಮುಂತಾದ ಗಣ್ಯರ ಕೃತಿಗಳಲ್ಲಿ ಅನುವಾದವು ಸ್ವತಂತ್ರ ಸೃಜನಾತ್ಮಕ ರೂಪ ಪಡೆದಿದೆ. ಬೈಬಲ್, ಖುರಾನ್, ಗೀತೆ ಮೊದಲಾದ ಧಾರ್ಮಿಕ ಗ್ರಂಥಗಳ ಅನುವಾದವೂ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ. ಆಧುನಿಕ ಸಂದರ್ಭದಲ್ಲಿ ಅನುವಾದವು ಕೇವಲ ಸಾಹಿತ್ಯವಷ್ಟೇ ಅಲ್ಲ, ಶಿಕ್ಷಣ, ರಾಜಕೀಯ, ಸಾಮಾಜಿಕ ವಲಯಗಳಲ್ಲಿಯೂ ಮಹತ್ವ ಪಡೆದುಕೊಂಡಿದೆ. ಹೀಗಾಗಿ, ಕನ್ನಡದ ಅನುವಾದ ಸಾಹಿತ್ಯವು ಭಾಷಾ ಸಾಂಸ್ಕೃತಿಕ ಸೇತುವೆಯಾಗಿದ್ದು, ಬೌದ್ಧಿಕ ವಿನಿಮಯ ಮತ್ತು ಸಾಹಿತ್ಯ ಸಂಪತ್ತಿಗೆ ಶ್ರೀಮಂತಿಕೆ ನೀಡಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅನಂತನಾರಾಯಣ ಎಸ್., (1976), ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ, ರಾಜಲಕ್ಷ್ಮೀ ಪ್ರಕಾಶನ, ಬೆಂಗಳೂರು.
ಉಷಾ ಎಂ. (2014), ಭಾಷಾಂತರ ಪ್ರವೇಶಕ್ಕೆ ಇತಿಹಾಸ ಸಿದ್ಧಾಂತ ಮತ್ತು ಪರಿ ಭಾಷೆಗಳು, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೋಹನ ಕುಂಟಾರ್ (ಸಂ), (2015), ಅನುವಾದ ಸಾಹಿತ್ಯ: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ: ಸಂಪುಟ-10, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಹರಿಕೃಷ್ಣ ಭರಣ್ಯ, (2016), ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಸಪ್ನ ಬುಕ್ ಹೌಸ್, ಬೆಂಗಳೂರು.
ಸಿಪಿಕೆ, (2009), ಭಾಷಾಂತರ ಭಾರತಿ, ಶ್ರೀಲಲಿತಾ ಬುಕ್ ಬ್ಯೂರೋ, ಮೈಸೂರು.