ಜಾನಪದ ಸಾಹಿತ್ಯದ ಮೇಲೆ ಆಧುನಿಕತೆಯ ಪ್ರಭಾವ

Main Article Content

ಮೋಹನಕುಮಾರ್ ಡಿ.

Abstract

ಭಾರತದ ಸಂಸ್ಕೃತಿಯ ಸಮೃದ್ಧಿಯನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಅಂಶವೆಂದರೆ ಜಾನಪದ ಸಾಹಿತ್ಯ. ಈ ಸಾಹಿತ್ಯವು ಗ್ರಾಮೀಣ ಬದುಕಿನ ನಿಜ ಸ್ವರೂಪವನ್ನು, ಜನರ ಭಾವನೆಗಳನ್ನು, ಆಚಾರ-ವಿಚಾರಗಳನ್ನು ಮತ್ತು ಜೀವನದ ಸೂಕ್ಷ್ಮತೆಯನ್ನು ತನ್ನಲ್ಲಿ ಒಳಗೊಂಡಿದೆ. ಇಂತಹ ಜಾನಪದ ಸಾಹಿತ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಇಂದು ಆಧುನಿಕ ಯುಗದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಜಾನಪದ ಸಾಹಿತ್ಯ ಎಂಬುದು ಜ್ಞಾನಮೂಲದಿಂದ ಹುಟ್ಟಿದದ್ದು ಅಲ್ಲ, ಅದು ಅನುಭವಗಳಿಂದ, ಜನಜೀವನದ ಸತ್ಯ ಘಟನೆಗಳಿಂದ ಮತ್ತು ಕಾಲಕ್ರಮೇಣ ಜನರು ಸಂಗ್ರಹಿಸಿಕೊಂಡ ಜ್ಞಾನದಿಂದ ರೂಪಗೊಂಡಿದ್ದು. ಇದು ಸಾಹಿತ್ಯದ ಅತೀ ಹಳೆಯ ರೂಪವಾಗಿದ್ದು, ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ಬಂದಿದೆ. ಜಾನಪದವು ಹಳ್ಳಿಗೆ ಮಾತ್ರವೇ ಸೀಮಿತವಾದದ್ದು, ಅನಕ್ಷರಸ್ಥರ ಸ್ವತ್ತು, ಅರ್ಥಹೀನ ಆಚರಣೆಗಳ ಮೊತ್ತ – ಇವೆಲ್ಲಾ ಗತಿಸಿ ಹೋದ ಅಭಿಪ್ರಾಯಗಳು. ಜಾನಪದವು ಸಮಾಜದ ಉನ್ನತ ಹಾಗೂ ನಿರಂತರವಾಗಿ ಸೃಷ್ಟಿ ಆಗುವಂತದ್ದು. ಸಮಾಜದ ಬದಲಾವಣೆಯೊಂದಿಗೆ ಜಾನಪದವು ಬೆಳೆಯುತ್ತಾ ಹಾಗೂ ಬದಲಾಗುತ್ತಾ ಬರುತ್ತದೆ. ಬದಲಾಗದಿರುವಂತಹ ಯಾವುದೇ ಸಂಕೀರ್ಣತೆಯು ಜಾನಪದದಲ್ಲಿಲ್ಲ. ಒಂದು ವೇಳೆ ಅಂತಹ ಅಂಶಗಳಿದ್ದರೂ ಅವುಗಳು ಗೊತ್ತಾಗದಂತೆ ಅಳಿದು ಹೋಗಿರುವುದನ್ನು ನೋಡಬಹುದು. ಅವುಗಳು ಅಳಿದು ಹೋಗಿ ನಂತರ ಹೊಸತು ಸೃಷ್ಟಿಯಾಗುತ್ತದೆ. ಜಾನಪದವು ಎಲ್ಲಾ ಕಾಲಕ್ಕೆ ಸ್ವೀಕೃತವಾದದ್ದು, ಆಧುನಿಕತೆಯನ್ನೊಳಗೊಂಡು ಮುಂದುವರೆಯುತ್ತದೆ.

Article Details

Section

Research Articles

Author Biography

ಮೋಹನಕುಮಾರ್ ಡಿ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ.

How to Cite

ಮೋಹನಕುಮಾರ್ ಡಿ. (2025). ಜಾನಪದ ಸಾಹಿತ್ಯದ ಮೇಲೆ ಆಧುನಿಕತೆಯ ಪ್ರಭಾವ. ಅಕ್ಷರಸೂರ್ಯ (AKSHARASURYA), 8(02), 181 to 190. https://aksharasurya.com/index.php/latest/article/view/1406

References

ಚಕ್ಕೆರೆ ಶಿವಶಂಕರ್, (2010), ಜಾನಪದ ಪ್ರವೇಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಗಂಗಾನಾಯಕ್ ಕೆ.ಎನ್. (ಪ್ರ. ಸಂ), (2011), ಜಾನಪದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಗಾಯತ್ರೀ ನಾವಡ, (2018), ಜನಪದ ಸಾಹಿತ್ಯ ಸಂಚಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಬಸವರಾಜು ತೋಟಹಳ್ಳಿ, (2008), ಜನಪದ ಸಂಸ್ಕೃತಿಯ ನೆಲೆಗಳು, ದೇವಿ ಪ್ರಕಾಶನ, ಬೆಂಗಳೂರು.