ಶರಣರ ನಡೆ-ನುಡಿ
Main Article Content
Abstract
ಶರಣರ ನಡೆ-ನುಡಿಗಳು ಮಾನವ ಜೀವನಕ್ಕೆ ಮಾರ್ಗದರ್ಶಕ ಶಕ್ತಿಯಾಗಿದೆ. ಗುರುತತ್ವ, ಸತ್ಯ, ತಾಳ್ಮೆ, ಪ್ರೀತಿ, ಸಹನೆ, ಸಮಾನತೆ, ದೈವಭಕ್ತಿ ಇವುಗಳ ಸಮ್ಮಿಶ್ರಣವೇ ಶರಣರ ಬದುಕಿನ ಮೂಲಾಧಾರ. ಶರಣರು ತಮ್ಮ ಜೀವನವನ್ನು ಕೇವಲ ತ್ಯಾಗಮಯವನ್ನಾಗಿಸದೆ, ಸಮಾಜಮುಖಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನ ಮಾದರಿಯನ್ನು ತೋರಿಸಿದ್ದಾರೆ. “ಮಾತೇ ಮುತ್ತು, ಮಾತೇ ಮೃತ್ಯು” ಎಂಬ ತತ್ತ್ವದೊಂದಿಗೆ, ಶರಣರು ಮಾತು, ನಡೆ-ನುಡಿ, ಕಾರ್ಯಗಳಲ್ಲಿ ಶ್ರೇಷ್ಠ ಆದರ್ಶಗಳನ್ನು ಬೆಳೆಸಿಕೊಂಡರು. ಇಂದಿನ ಜಾಗತೀಕರಣ, ಆಧುನೀಕರಣದ ಅಲೆಗಳಲ್ಲಿ ಮನುಷ್ಯ ಕೃತಕತೆಯ ಹಿಂದೆ ಓಡುತ್ತಿರುವಾಗ ಶರಣರ ಜೀವನ ಮನುಕುಲಕ್ಕೆ ನಿಜವಾದ ದಾರಿದೀಪವಾಗಿದೆ. ಮಾನವೀಯತೆ, ಸತ್ಯ, ಭಕ್ತಿ, ಶುದ್ಧತೆ, ಸಹಜತೆ, ಮತ್ತು ಸಮಾನತೆಯ ಜೀವನವೇ ಶರಣರ ನಡೆ-ನುಡಿಯ ನಿಜವಾದ ಅರ್ಥ. ಈ ಪ್ರಬಂಧದಲ್ಲಿ ಶರಣರ ನಡೆ-ನುಡಿಗಳ ಆವಶ್ಯಕತೆ, ಆಧುನಿಕ ಯುಗದಲ್ಲಿಯೂ ಅವುಗಳ ಪ್ರಸ್ತುತತೆ ಹಾಗೂ ಮಾನವ ಬದುಕಿಗೆ ನೀಡುವ ದಾರಿದೀಪದ ಸಂದೇಶವನ್ನು ವಿವರಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಿವಾನಂದ ಕೆಳಗಿನಮನಿ (ಸಂ), (2012), ವಚನ ಸಾಹಿತ್ಯ, ಕನ್ನಡ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
ಚಿದಾನಂದಮೂರ್ತಿ ಎಂ., (2015), ವಚನ ಸಾಹಿತ್ಯ: ಸಂಪುಟ-05, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಹೂಗಾರ ಎ.ಬಿ. (ಸಂ), (2019), ವಚನ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಚಿಕ್ಕಮಾದು ಎನ್.ಎನ್., (2006), ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಸಮೀಕ್ಷೆ, ಪ್ರಸಾರಾಂಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು.